ಹೈದರಾಬಾದ್ ಸಮೀಪ ಭೂಕಂಪನ; 4.0 ತೀವ್ರತೆ ದಾಖಲು
ಹೈದರಾಬಾದ್, ಜುಲೈ 26; ಹೈದರಾಬಾದ್ ಸಮೀಪದಲ್ಲಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಕಂಪನ ದಾಖಲಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಸೋಮವಾರ ಬೆಳಗ್ಗೆ ಹೈದರಾಬಾದ್ ನಗರದಿಂದ 156 ಕಿ. ಮೀ. ದಕ್ಷಿಣದಲ್ಲಿ ಕಂಪನ ದಾಖಲಾಗಿದೆ ಎಂದು ಭೂಕಂಪನಾ ವೀಕ್ಷಣಾ ಕ್ಷೇಂದ್ರ (ಎನ್‌ಸಿಎಸ್) ಹೇಳಿದೆ.
ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 5.53ರ ಸುಮಾರಿಗೆ ಭೂಮಿ ಕಂಪಿಸಿದೆ. ಭೂಮಿಯ 10 ಕಿ. ಮೀ. ಆಳದಲ್ಲಿ ಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಕಂಪನ ದಾಖಲಾಗಿದೆ.

ಭೂಕಂಪನದಿಂದ ಯಾವುದೇ ರೀತಿಯ ನಷ್ಟವಾಗಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.
Earthquake of Magnitude:4.0, Occurred on 26-07-2021, 05:00:53 IST, Lat: 16.00 & Long: 78.22, Depth: 10 Km ,Location: 156km S of Hyderabad, Andhra Pradesh, India for more information download the BhooKamp App https://t.co/GgF9bDeXgH pic.twitter.com/fPpBpjGPEg
— National Center for Seismology (@NCS_Earthquake) July 26, 2021
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications