ತೆಲಂಗಾಣದ ಸಾವಿರಾರು ಮತದಾರರ ವಯಸ್ಸು 2000 ವರ್ಷಕ್ಕೂ ಹೆಚ್ಚು!

ಹೈದರಾಬಾದ್, ಸೆಪ್ಟೆಂಬರ್ 24: ಮನುಷ್ಯನ ಸರಾಸರಿ ಜೀವಿತಾವಧಿ 68.3 ವರ್ಷಗಳಷ್ಟೆ. ಅಪರೂಪದ ಸನ್ನಿವೇಶಗಳಲ್ಲಿ ನೂರು ಮುಟ್ಟಿ ದಾಟುವುದೂ ಉಂಟು ಆದರೆ ತೆಲಂಗಾಣ ರಾಜ್ಯದಲ್ಲಿ ಸಾವಿರಾರು ಜನರ ವಯಸ್ಸು 2017 ವರ್ಷಕ್ಕಿಂತಲೂ ಹೆಚ್ಚು!

ಹೌದು, ತೆಲಂಗಾಣದ ಹಲವು ಜನಗಳ ವಯಸ್ಸು 2017ಕ್ಕಿಂತಲೂ ಹೆಚ್ಚು, ಆದರೆ ದಾಖಲೆಗಳಲ್ಲಿ ಮಾತ್ರ. ತೆಲಂಗಾಣದ ಮತದಾರರ ಪಟ್ಟಿಯಲ್ಲಿ 21000ಕ್ಕೂ ಹೆಚ್ಚು ಜನರ ವಯಸ್ಸು 100 ರಿಂದ 2017ರ ವರೆಗೂ ನಮೂದಾಗಿದೆ.

ತೆಲಂಗಾಣದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿ ಆಗಿರುವ ಈ ಪ್ರಮಾದ ಅಲ್ಲಿನ ಚುನಾವಣೆ ಆಯೋಗಕ್ಕೆ ತಲೆನೋವು ತಂದೊಡ್ಡಿದೆ. ಅಷ್ಟೆ ಅಲ್ಲ ಹಲವು ಲಕ್ಷ ನಕಲಿ ಮತದಾರರು ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ತೆಲಂಗಾಣ ಕಾಂಗ್ರೆಸ್ ಆರೋಪಿಸಿದೆ.

21000 Telangana voters age is above 100 to 2017

ತೆಲಂಗಾಣ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ ಆದೇಶ ನೀಡಿದ್ದು, 2018 ಜನವರಿ 1ಕ್ಕೆ ಯಾರಿಗೆ 18 ವರ್ಷವಾಗಿರುತ್ತದೆಯೋ ಅವರು ಮುಂಬರುವ ಚುನಾವಣೆಯಲ್ಲಿ ಮತಚಲಾಯಿಸಲಿದ್ದಾರೆ. ಈ ಹಿಂದಿನ ಮತದಾರರ ಪಟ್ಟಿಯಲ್ಲಿ 2019 ಜನವರಿ 01ಕ್ಕೆ 18 ವರ್ಷ ತುಂಬಿದವರು ಮತಚಲಾಯಿಸಬಹುದಿತ್ತು.

ತೆಲಂಗಾಣ ಕಾಂಗ್ರೆಸ್‌ನ ಮಾಜಿ ಶಾಸಕ ಮರ್ರಿ ಶಶಿಧರ ರೆಡ್ಡಿ ಅವರು ಆರೋಪದ ಪ್ರಕಾರ, ಸುಮಾರು 30 ಲಕ್ಷ ನಕಲಿ ಮತದಾರರು ಪಟ್ಟಿಯಲ್ಲಿದ್ದು, 20 ಲಕ್ಷ ಹೆಸರುಗಳು ಎರಡು ಬಾರಿ ನಮೂದಾಗಿದೆ. ಹಾಗೂ 48 ಲಕ್ಷಕ್ಕೂ ಹೆಚ್ಚು ಮತದಾರರ ಚೀಟಿಯಲ್ಲಿ ತಪ್ಪುಗಳಾಗಿವೆ ಎಂದು ಹೇಳಿದ್ದಾರೆ.

ಮತದಾರರ ಪಟ್ಟಿಯಿಂದ ಸುಮಾರು 20 ಲಕ್ಷ ಮತದಾರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದೂ ಅವರು ಆರೋಪಿಸಿದ್ದು, ಆಂಧ್ರಪ್ರದೇಶದಲ್ಲಿ ಸುಮಾರು 17 ಲಕ್ಷ ಹೆಸರುಗಳನ್ನು ಅಳಿಸಿ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+