Video; ಹುಬ್ಬಳ್ಳಿಯಲ್ಲಿ ಗುರಾಯಿಸಿದ್ದಕ್ಕೆ ನಡೆಯಿತು ಯುವಕರ ಮಾರಾಮಾರಿ

ಹುಬ್ಬಳ್ಳಿ, ಫೆಬ್ರವರಿ 20: ಕ್ಷುಲ್ಲಕ ಕಾರಣಕ್ಕೆ ಹೊಟೇಲನಲ್ಲಿ ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಗರದ ನ್ಯೂ ಇಂಗ್ಲೀಷ್ ಸ್ಕೂಲ್ ಬಳಿಯ ಮಥುರಾ ಹೊಟೆಲ್‌ನಲ್ಲಿ ಗುರುವಾರ ನಡೆದಿದೆ.

ಒಬ್ಬರನ್ನು ಒಬ್ಬರು ಗುರಾಯಿಸಿದ್ದ ಕ್ಷುಲ್ಲಕ ಕಾರಣಕ್ಕೆ ಯುವಕರು ಹೊಡೆದಾಡಿಕೊಂಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೊಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದ ರಾಘು‌ ಎಂಬಾತನನ್ನು ಮಂಜುನಾಥ ಎಂಬುವನು ತಳಿಸಿರುವ ದೃಶ್ಯ ಸೆರೆಯಾಗಿದ್ದು.

ಏಕಾಏಕಿ ಹೊಟೆಲ್ ಪ್ರವೇಶಿಸಿದ ಮಂಜುನಾಥ ಮನಬಂದಂತೆ ಥಳಿಸಿದ್ದಾನೆ. ಹಣದ ವಿಚಾರದಲ್ಲಿ ಹೊಡೆದಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಕಸಬಾ ಪೇಟೆ ಪೊಲೀಸ್ ಠಾಣೆ ಪೊಲೀಸರ ಯುವಕರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Youths Fight For Silly Reason In Hubballi

ಇತ್ತೀಚೆಗೆ ಗಣಪತಿ ವಿಸರ್ಜನೆ ವೇಳೆಯೂ ಹುಬ್ಬಳ್ಳಿಯಲ್ಲಿ ಯುವಕರು ಗುಂಪು ಹೊಡೆದಾಡಿಕೊಂಡು ಮೂವರು ಮೃತಪಟ್ಟಿದ್ದರು. ಇದರಿಂದ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಆರೋಪಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+