"ಪಾಕಿಸ್ತಾನ್ ಜಿಂದಾಬಾದ್" ವಿಡಿಯೋ ಹರಿಬಿಟ್ಟ ಹುಬ್ಬಳ್ಳಿ ಕೆಎಲ್ ಇ ಕಾಲೇಜು ವಿದ್ಯಾರ್ಥಿಗಳು

ಹುಬ್ಬಳ್ಳಿ, ಫೆಬ್ರವರಿ 15: ಪುಲ್ವಾಮಾ ದಾಳಿ ನಡೆದು ಒಂದು ವರ್ಷವಾದ ಕರಾಳ ನೆನಪಿಗೆ, ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಿನ್ನೆ ಫೆಬ್ರವರಿ 14ರಂದು ದೇಶದಾದ್ಯಂತ ಗೌರವ ಸಲ್ಲಿಸಲಾಗಿದೆ. ಆದರೆ ಅದೇ ದಿನ ಹುಬ್ಬಳ್ಳಿಯ ಈ ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಹುಬ್ಬಳ್ಳಿಯ ಪ್ರತಿಷ್ಠಿತ ಕೆಎಲ್ ಇ ಇಂಜಿನಿಯರಿಂಗ್ ಕಾಲೇಜಿನ ಈ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವ ವಿಡಿಯೋ ಮಾಡಿದ್ದು, ಅದನ್ನು ವೈರಲ್ ಮಾಡಿದ್ದಾರೆ. ಈ ವಿದ್ಯಾರ್ಥಿಗಳೆಲ್ಲರೂ ಕಾಶ್ಮೀರ ಮೂಲದವರು ಎಂದು ತಿಳಿದುಬಂದಿದೆ.

Video Of Hubballi KLE College Students Slogan Pakistan Jindabad

ಅಮೀರ್, ಬಾಸೀತ್, ತಾಲೀಬ್ ಎಂಬ ಈ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ ಕಾಲೇಜಿಗೆ ದಾಖಲಾಗಿದ್ದರು. ಮೂವರೂ ಸಿವಿಲ್ ವಿಭಾಗದಲ್ಲಿ ಓದುತ್ತಿದ್ದಾರೆ. ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿ ಹರಿಬಿಟ್ಟಿದ್ದು, ಈ ವಿಷಯವಾಗಿ ಕಾಲೇಜಿಗೆ ಭೇಟಿ ನೀಡಿದ ಗೋಕುಲ ಠಾಣೆ ಪೊಲೀಸ್ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೂಡಲೇ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಭಜರಂಗದಳದವರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+