ಹುಬ್ಬಳ್ಳಿಯ ಇಬ್ಬರು ಹುಡಾ ನೌಕರರು ಎಸಿಬಿ ಬಲೆಗೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada
ಹುಬ್ಬಳ್ಳಿ, ಫೆಬ್ರವರಿ, 14 : ಸ್ಥಳೀಯ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಇಬ್ಬರು ನೌಕರರು ಮಂಗಳವಾರ ಲಂಚ ಪಡೆಯುವಾಗ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ(ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಸಹಾಯಕ ಕಾರ್ಯಪಾಲಕ ಎಂಜಿನೀಯರ್ ಪ್ರಕಾಶ ಹಸರೆಡ್ಡಿ ಮತ್ತು ಸಿಪಾಯಿ ಮುತ್ತಪ್ಪ ಚಲವಾಯಿ ಎನ್ನುವರು ಆನಂದ ಜಾಧವ ಎಂಬುವವರು ತಮ್ಮ 6 ಗುಂಟೆ ಜಾಗೆಯನ್ನು ಏಕ ಘಟಕ ವಿನ್ಯಾಸ ಅನುಮೋದನೆಗೆ ಆನಂದ ಅವರಿಂದ 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿಗೆ ಸಿಕ್ಕಿ ಬಿದ್ದಿದ್ದಾರೆ.

Title: ACB nets two Hubli Dharwad urban development servants demanding accepting bribe

ಹಳೇಹುಬ್ಬಳ್ಳಿಯ ಆನಂದ ಜಾಧವ ಎಂಬುವವರು ತಮ್ಮ 6 ಗುಂಟೆ ಜಾಗೆಯನ್ನು ಏಕ ಘಟಕ ವಿನ್ಯಾಸ ಅನುಮೋದನೆಗೆ (ಎಸ್ ಯುಎ)ಗಾಗಿ ಮೂರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಲೇವಾರಿಗೆ ಮತ್ತು ಅನುಮೋದನೆಗಾಗಿ ಹುಡಾದ ಸಹಾಯಕ ಕಾರ್ಯಪಾಲಕ ಎಂಜಿನೀಯರ್ ಪ್ರಕಾಶ ಹಸರಡ್ಡಿ ಎಂಬುವವರು 15 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಹಣದ ನೀಡದೇ ಇರುವುದರಿಂದ ಅರ್ಜಿಯನ್ನು ವಿಲೇವಾರಿ ಮಾಡದೇ ಸತಾಯಿಸುತ್ತಿದ್ದರು. ಇದರಿಂದ ಬೇಸತ್ತ ಆನಂದ ಎಸಿಬಿಗೆ ದೂರು ನೀಡಿದ್ದರು.

ನವನಗರದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಪ್ರಕಾಶ ಹಸರೆಡ್ಡಿ ಮತ್ತು ಸಿಪಾಯಿ ಮುತ್ತಪ್ಪ ಚಲವಾಯಿಯವರು ಆನಂದ ಅವರಿಂದ 15 ಸಾವಿರ ರೂ. ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಇಬ್ಬರನ್ನೂ ಬಂಧಿಸಲಾಗಿದ್ದು, ದಾಳಿಯ ನೇತೃತ್ವವನ್ನು ಎಸಿಬಿ ಡಿವೈಎಸ್ಪಿ ಎಚ್.ಡಿ.ಮುದರಡ್ಡಿ, ಇನ್ಸಪೆಕ್ಟರ್ ಮುರುಘೇಶ ಚನ್ನಣ್ಣವರ, ಪ್ರಮೋದ ಯಲಿಗಾರ, ಜೆ.ಜೆ.ಕಟ್ಟಿ, ವೀರೇಶ ಲಮಾಣಿ, ಶ್ರೀಶೈಲ ಕಾಜಗಾರ ಮತ್ತು ವಿರೇಶ ರಾಠೋಡ ವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Anti Corruption Bureau nets two Hubli-Dharwad urban development servants demanding and accpeting bribe to modify land documents in Hubballi on February 14.
Please Wait while comments are loading...