ಹುಬ್ಬಳ್ಳಿಯಲ್ಲಿ ಕ್ಷಣಾರ್ಧದಲ್ಲೇ ಮಾಯವಾಗ್ತಿವೆ ಬೈಕ್‌ಗಳು: ಪೊಲೀಸ್ ಕಮಿಷನರ್ ಹೇಳಿದ್ದೇನು?
ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರವಾಗಿರುವ ಹುಬ್ಬಳ್ಳಿಯಲ್ಲಿ ಎಲ್ಲೆಂದರಲ್ಲೇ ಬೈಕ್ ಕಳ್ಳತನವಾಗುತ್ತಿವೆ.
ಹುಬ್ಬಳ್ಳಿ, ಮಾರ್ಚ್, 13: ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರವಾಗಿರುವ ಹುಬ್ಬಳ್ಳಿಯಲ್ಲಿ ಎಲ್ಲೆಂದರಲ್ಲೇ ಬೈಕ್ ಕಳ್ಳತನವಾಗುತ್ತಿವೆ. ಎಲ್ಲೋ ನಿಲ್ಲಿಸಿದ ಬೈಕ್ ಕ್ಷಣಾರ್ಧದಲ್ಲಿಯೇ ಮಾಯವಾಗುತ್ತದೆ. ಸ್ವಲ್ಪ ಯಾಮಾರಿದರೂ ಬೈಕ್‌ಗಳು ಕೈತಪ್ಪಿ ಹೋಗುತ್ತವೆ.
ಹುಬ್ಬಳ್ಳಿ -ಧಾರವಾಡ ಅವಳಿ ನಗರದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿವೆ. ಎಲ್ಲೋ ನಿಲ್ಲಿಸಿದ ವಾಹನಗಳು ಒಮ್ಮೆಲೆ ಕಾಣೆಯಾಗುತ್ತವೆ. ಆಗ ಮಾಲೀಕರು ವಾಹನ ಸಿಗದೇ ಪರಿತಪಿಸುತ್ತಾರೆ. ಇಂತಹ ಸುಮಾರು ಪ್ರಕರಣಗಳು ಅವಳಿನಗರದಲ್ಲಿ ನಡೆಯುತ್ತಲೇ ಇವೆ. ಬೈಕ್ ಕಳೆದ ಎರಡು ವರ್ಷಗಳಾದರೂ ನಾಪತ್ತೆಯಾದ ವಾಹನದ ಹುಡುಕಾಟ ಮಾತ್ರ ತಪ್ಪುತ್ತಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

100 ಬೈಕ್‌ಗಳ ಕಳ್ಳತನ
ಹು-ಧಾ ಅವಳಿ ನಗರದಲ್ಲಿ ಇದುವರೆಗೂ 100 ಜನ ದ್ವಿಚಕ್ರ ವಾಹನಗಳನ್ನು ಕಳೆದುಕೊಂಡಿದ್ದಾರೆ. ಹು-ಧಾ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ 2022ನೇ ಸಾಲಿನಲ್ಲಿ 153 ದ್ವಿಚಕ್ರ ವಾಹನಗಳು ಕಳ್ಳತನವಾಗಿವೆ. ಇವುಗಳಲ್ಲಿ ಪೊಲೀಸರು 53 ಬೈಕ್‌ಗಳನ್ನು ಪತ್ತೆಹಚ್ಚಿದ್ದು, ಇನ್ನುಳಿದ 100 ವಾಹನಗಳ ಸವಾರರು ಕಳುವಾದ ಬೈಕ್‌ಗಳು ಯಾವಾಗ ಸಿಗುತ್ತವೆ ಎಂದು ಪರದಾಡುತ್ತಿದ್ದಾರೆ.
ಕ್ಷಣಾರ್ಧದಲ್ಲೇ ಬೈಕ್‌ಗಳನ್ನ ಎಗರಿಸುವ ಖದೀಮರು
ಇನ್ನು ನಗರದ ಕೆಲವೆಡೆ ಜನನಿಬಿಡ ಪ್ರದೇಶಗಳಿವೆ. ಅಲ್ಲಿ ಬೈಕ್‌ಗಳನ್ನು ಬಿಟ್ಟುಹೋದ ಕೆಲ ಹೊತ್ತಿನಲ್ಲಿಯೇ ಅವುಗಳು ನಾಪತ್ತೆಯಾಗುತ್ತವೆ. ಹ್ಯಾಂಡಲ್ ಲಾಕ್ ಮಾಡಿದರೆ ಏನೂ ಆಗಲಿಕ್ಕಿಲ್ಲ ಎನ್ನುವ ಧೈರ್ಯದಿಂದ ವಾಹನ ಸವಾರರು ದ್ವಿಚಕ್ರ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಹೋಗಿರುತ್ತಾರೆ. ಆದರೆ, ಅವರು ಹೋಗಿ ಬರುವಷ್ಟರಲ್ಲಿ ಆ ವಾಹನಗಳೇ ಅಲ್ಲಿ ಇರುವುದಿಲ್ಲ. ಹ್ಯಾಂಡಲ್ ಲಾಕ್ ಓಪನ್ ಮಾಡಿ ಕಳ್ಳರು ಬೈಕ್‌ಗಳನ್ನು ಎಗರಿಸಿಕೊಂಡು ಹೋಗಿರುತ್ತಾರೆ.

ಒಟ್ಟಿನಲ್ಲಿ ಬೈಕ್ ಕಳ್ಳತನ ಪ್ರಕರಣಗಳನ್ನು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ಇಂತಹ ಪ್ರಕರಣಗಳ ವಿರುದ್ಧ ಸಮರ ಸಾರಬೇಕಿದೆ. ಅಲ್ಲದೇ ಸಾರ್ವಜನಿಕರೂ ಎಲ್ಲೆಂದರಲ್ಲಿ ಬೈಕ್ ಪಾರ್ಕಿಂಗ್ ಮಾಡಿ ಹೋಗುವ ಅಭ್ಯಾಸವನ್ನು ನಿಲ್ಲಿಸಿ ಎಂದು ಸೂಚನೆ ನೀಡಿದರು.












Click it and Unblock the Notifications