ಭಾಸ್ಕರರಾವ್ ವಿರುದ್ಧ ಚಾರ್ಜ್‌ಶೀಟ್, ಸ್ವಾಗತಿಸಿದ ಎಸ್‌.ಆರ್.ಹಿರೇಮಠ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್ 06 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾ.ಭಾಸ್ಕರರಾವ್ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವುದನ್ನು ಎಸ್‌.ಆರ್.ಹಿರೇಮಠ ಸ್ವಾಗತಿಸಿದ್ದಾರೆ. ಅವರಿಗೆ ಸೂಕ್ತ ಶಿಕ್ಷೆಯಾಗುವವರೆಗೂ ಬಿಡಬಾರದು ಎಂದು ಅವರು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಅವರು, 'ಕರ್ನಾಟಕ ಲೋಕಾಯುಕ್ತಕ್ಕೆ ದಕ್ಷ ಹಾಗೂ ಪ್ರಾಮಾಣಿಕ ನ್ಯಾಯಮೂರ್ತಿ ವಿಕ್ರಮ್ ಜೀತ್ ಸೇನ್ ಅವರನ್ನು ನೇಮಿಸಬೇಕು' ಎಂದು ಆಗ್ರಹಿಸಿದರು.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ನಾಲ್ವರಿಗೆ ಜಾಮೀನು]

sr hiremath

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವ ಪ್ರತಿಷ್ಠೆಗಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿದ್ದಾರೆ. ಕರ್ನಾಟಕ ಹೈಕೋರ್ಟ್ ಕೂಡ ಎಸಿಬಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದೆ. ಸರ್ಕಾರ ಲೋಕಾಯುಕ್ತವನ್ನು ಬಲಪಡಿಸಲು ಗಮನಹರಿಸಬೇಕು' ಎಂದು ಒತ್ತಾಯಿಸಿದರು.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಭಾಸ್ಕರರಾವ್ 7ನೇ ಆರೋಪಿ]

ಶಿಕ್ಷೆಯಾಗಬೇಕು : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ನ್ಯಾ.ಭಾಸ್ಕರರಾವ್ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವುದನ್ನು ಸ್ವಾಗತಿಸಿದ ಹಿರೇಮಠ ಅವರು, ಅವರಿಗೆ ಶಿಕ್ಷೆಯಾಗಬೇಕು ಎಂದರು.

ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ನ್ಯಾ.ಭಾಸ್ಕರರಾವ್ ಅವರ ವಿರುದ್ಧ 560 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಕರ್ನಾಟಕದ ಲೋಕಾಯುಕ್ತರಾಗಿದ್ದ ಭಾಸ್ಕರರಾವ್ ಅವರು ಈ ಪ್ರಕರಣದಲ್ಲಿ 7ನೇ ಆರೋಪಿಯಾಗಿದ್ದಾರೆ.

ಸೈಯದ್ ರಿಯಾಜ್ ನೇಮಕಕ್ಕೆ ಸಿದ್ಧತೆ : 'ಲೋಕಾಯುಕ್ತ ಸಂಸ್ಥೆಯಲ್ಲಿ ಸಾರ್ವಜನಿಕರ ಸಂಪರ್ಕ ಹುದ್ದೆ ನಿರ್ವಹಿಸಿದ್ದ ಸೈಯದ್ ರಿಯಾಜ್ ಅವರನ್ನು ರಾಜ್ಯ ಸರ್ಕಾರ ಡಿಐಜಿ ಹುದ್ದೆಗೆ ನೇಮಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದೆ. ಅವರ ಮೇಲೆ ಈಗಾಗಲೇ ಕಾನೂನು ಬಾಹಿರ ಚಟುವಟಿಕೆ ಮಾಡಿರುವ ಆರೋಪವಿದೆ ಅವರನ್ನು ಜೈಲಿಗೆ ಕಳಿಸಬೇಕು' ಎಂದು ಹಿರೇಮಠ ಒತ್ತಾಯಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Samaj Parivartana Samudaya chief S.R. Hiremath welcomed the filing of charge-sheet against former Karnataka Lokayukta Justice Y.Bhaskar Rao in extortion and corruption cases in Lokayukta.
Please Wait while comments are loading...