ಹುಬ್ಬಳ್ಳಿ ಮೂಲಕ 4 ನಗರಕ್ಕೆ ವಿಮಾನ ಸೇವೆ ಆರಂಭಿಸಿದ ಸ್ಪೈಸ್ ಜೆಟ್

ಹುಬ್ಬಳ್ಳಿ, ಮೇ 14 : ಸ್ಪೈಸ್ ಜೆಟ್ ಹುಬ್ಬಳ್ಳಿ ಮೂಲಕ ದೇಶದ 4 ನಗರಗಳಿಗೆ ವಿಮಾನ ಸೇವೆಯನ್ನು ಸೋಮವಾರ ಆರಂಭಿಸಿದೆ. ಜೂನ್, ಜುಲೈ ತಿಂಗಳಿನಲ್ಲಿ ಇನ್ನಷ್ಟು ಕಂಪನಿಗಳು ವಿಮಾನ ಹಾರಾಟವನ್ನು ಆರಂಭಿಸಲಿವೆ.

ಹುಬ್ಬಳ್ಳಿ ಮೂಲಕ ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್‌ ಸಂಪರ್ಕಿಸುವ ಸ್ಪೈಸ್‌ ಜೆಟ್ ವಿಮಾನ ಸೇವೆ ಸೋಮವಾರ ಆರಂಭವಾಗಿದೆ. ಹುಬ್ಬಳ್ಳಿಗೆ ಆಗಮಿಸಿದ ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು.

Spicejet launches new flights connecting 4 major cities from Hubballi

ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.

Spicejet launches new flights connecting 4 major cities from Hubballi

ಇಂಡಿಗೋ ಏರ್‌ಲೈನ್ಸ್‌ ಮತ್ತು ಗೋಡಾವತ್ ವಿಮಾನಯಾನ ಸಂಸ್ಥೆಗಳು ಹುಬ್ಬಳ್ಳಿಗೆ ವಿಮಾನ ಸಂಪರ್ಕ ಕಲ್ಪಿಸಲು ಸಿದ್ಧವಾಗಿವೆ. ಜೂನ್ ಅಥವ ಜುಲೈ ತಿಂಗಳಿನಲ್ಲಿ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಇದೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಈಗ ಅಭಿವೃದ್ಧಿಪಡಿಸಲಾಗಿದೆ. 2016ರಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿತ್ತು. ನೂತನ ಟರ್ಮಿನಲ್ ನಿರ್ಮಾಣ ಮಾಡಲಾಗಿದ್ದು, 2,600 ಮೀ.ಗೆ ರನ್‌ವೇ ವಿಸ್ತರಣೆ ಮಾಡಲಾಗಿದೆ. ಹುಬ್ಬಳ್ಳಿ ಈಗ ಉತ್ತರ ಕರ್ನಾಟಕ ಭಾಗದ ದೊಡ್ಡ ವಿಮಾನ ನಿಲ್ದಾಣವಾಗಿ ಪರಿವರ್ತನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+