Special Trains: ಹುಬ್ಬಳ್ಳಿ-ಪಂಢರಪುರ ನಡುವೆ ವಿಶೇಷ ರೈಲು ಸಂಚಾರ: ಯಾಕೆ? & ಯಾವಾಗ? ಇಲ್ಲಿದೆ ವಿವರ

ಹುಬ್ಬಳ್ಳಿ, ನವೆಂಬರ್‌ 08: ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಆಚರಣೆಗಳಲ್ಲಿ ಒಂದಾದ ಕಾರ್ತಿಕ ಏಕಾದಶಿ ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಶ್ರೀಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಪಂಢರಪುರ ನಿಲ್ದಾಣಗಳ ನಡುವೆ ಕಾಯ್ದಿರಿಸದ ವಿಶೇಷ ರೈಲುಗಳ ಸಂಚರಿಸಲು ನೈಋತ್ಯ ರೈಲ್ವೆ ಅವಕಾಶ ನೀಡಿದೆ.

ಶ್ರೀಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಪಂಢರಪುರ ನಿಲ್ದಾಣಗಳ ನಡುವೆ ಸಂಚರಿಸುವ ರೈಲುಗಳ ವಿವರ ಈ ಕಳೆಗಿನಂತಿದೆ.

Special Train Service Between Hubli-Pandharpur Here Is The More Information

ರೈಲು ಸಂಖ್ಯೆ 07313/07314 ಎಸ್ಎಸ್ಎಸ್ ಹುಬ್ಬಳ್ಳಿ-ಪಂಢರಪುರ-ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ರೈಲು (6 ಟ್ರಿಪ್‌ಗಳು)

ರೈಲು ಸಂಖ್ಯೆ 07313 ಎಸ್ಎಸ್ಎಸ್ ಹುಬ್ಬಳ್ಳಿ-ಪಂಢರಪುರ ಕಾಯ್ದಿರಿಸದ ವಿಶೇಷ ರೈಲು ನವೆಂಬರ್ 9 ರಿಂದ 15, 2024 ರವರೆಗೆ (ನವೆಂಬರ್ 13 ಹೊರತುಪಡಿಸಿ) ಪ್ರತಿದಿನ ಸಂಜೆ 7:45 ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಿಗ್ಗೆ 4:30 ಕ್ಕೆ ಪಂಢರಪುರವನ್ನು ತಲುಪಲಿದೆ.

ವಾಪಸು ರೈಲು ಸಂಖ್ಯೆ 07314 ಪಂಢರಪುರ-ಎಸ್ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ರೈಲು ನವೆಂಬರ್ 10 ರಿಂದ 16, 2024 ರವರೆಗೆ (ನವೆಂಬರ್ 14 ಹೊರತುಪಡಿಸಿ) ಪ್ರತಿದಿನ ಬೆಳಿಗ್ಗೆ 6:00 ಗಂಟೆಗೆ ಪಂಢರಪುರದಿಂದ ಹೊರಟು ಅದೇ ದಿನ ಸಂಜೆ 4:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಎರಡೂ ಮಾರ್ಗಗಳಲ್ಲಿ, ಈ ರೈಲು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ದೇಸೂರು, ಬೆಳಗಾವಿ, ಪಚ್ಚಾಪುರ, ಗೋಕಾಕ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ, ಶೇಡಬಾಳ, ವಿಜಯನಗರ, ಮೀರಜ್, ಸುಲ್ಗರೆ, ಕವಠೆ-ಮಹಾಂಕಾಲ್, ಧಲಗಾಂವ್, ಜತ್ ರೋಡ್ ಮತ್ತು ಸಂಗೋಳ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ರೈಲಿನಲ್ಲಿ 10 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು ಸೇರಿದಂತೆ ಒಟ್ಟು 12 ಬೋಗಿಗಳು ಇರಲಿವೆ.

ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್ಸೈಟ್ www.enquiry.indianrail.gov.in ಗೆ ಭೇಟಿ ನೀಡುವ ಮೂಲಕ, ಎನ್‌ಟಿಇಎಸ್‌ NTES ಅಪ್ಲಿಕೇಶನ್ ಬಳಸಿ ಅಥವಾ 139 ಸಹಾಯವಾಣಿ ನಂಬರಗೆ ಡಯಲ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+