SWR: ರೈಲು ಪ್ರಯಾಣಿಕರೇ ಗಮನಿಸಿ: 90 ದಿನ ವಿವಿಧ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ ಪಟ್ಟಿ

ಹುಬ್ಬಳ್ಳಿ:, ಜನವರಿ 08: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೇವೆ ನೀಡುತ್ತಿರುವ ನೈಋತ್ಯ ರೈಲ್ವೆಯ ಅನೇಕ ರೈಲುಗಳು ಮುಂದಿನ 90ದಿನಕ್ಕೂ ಹೆಚ್ಚು ದಿನಗಳ ಕಾಲ ಸಂಚಾರ ಸ್ಥಗಿತಗೊಳಿಸಲಿವೆ. ಕೆಲವು ರೈಲುಗಳು ಮಾರ್ಗಗಗಳನ್ನು ಬದಲಾಯಿಸಿವೆ. ಈ ಮಾರ್ಗಗಳಲ್ಲಿ ಓಡಾಡುವ ಪ್ರಯಾಣಿಕರು ಗಮನಿಸಿ ಸಂಚರಿಸುವಂತೆ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಜನವರಿ 17 ರಿಂದ ಏಪ್ರಿಲ್ 16, 2025 ರವರೆಗೆ 90 ದಿನಗಳ ಕಾಲ, ಕ್ಯಾಸಲ್ ರಾಕ್-ಕುಲೆಮ್ ಭಾಗದಲ್ಲಿ ಹಳಿ ನಿರ್ವಹಣೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದತಿ ಮತ್ತು ಬೇರೆ ಮಾರ್ಗದ ಮೂಲಕ ಚಲಿಸಲಿವೆ ಎಂದು ವೇಳಾಪಟ್ಟಿ ನೀಡಿದ್ದಾರೆ.

South Western Railway Trains of Hubballi Partially Cancelled for 90 Days Know Routes Schedule

ರೈಲುಗಳ ಸಂಚಾರ ಭಾಗಶಃ ರದ್ದು: ವೇಳಾಪಟ್ಟಿ

* 2025ರ ಜನವರಿ 16 ರಿಂದ ಏಪ್ರಿಲ್ 15 ರವರೆಗೆ ಶಾಲಿಮಾರ್ ರೈಲು ನಿಲ್ದಾಣದಿಂದ ಹೊರಡುವ ಶಾಲಿಮಾರ್-ವಾಸ್ಕೋ ಡ ಗಾಮಾ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 18047) ಹುಬ್ಬಳ್ಳಿ ನಿಲ್ದಾಣದವರೆಗೂ ಮಾತ್ರ ಸಂಚರಿಸಲಿದೆ. ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವಿನ ಸಂಚಾರ ಭಾಗಶಃ ರದ್ದಾಗಿದೆ. ಈ ರೈಲು ಹುಬ್ಬಳ್ಳಿಯಲ್ಲಿ ಕೊನೆಗೊಳ್ಳಲಿದೆ.

* ವಾಸ್ಕೋ ಡ ಗಾಮಾ-ಶಾಲಿಮಾರ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 18048) ಜನವರಿ 19 ರಿಂದ ಏಪ್ರಿಲ್ 18 ರವರೆಗೆ ವಾಸ್ಕೋ ಡ ಗಾಮಾ ನಿಲ್ದಾಣದ ಬದಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡಲಿದೆ. ವಾಸ್ಕೋ ಡ ಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ಸಂಚಾರ ಸ್ಥಗಿತಗೊಳಿಸಲಿದೆ.

South Western Railway Trains of Hubballi Partially Cancelled for 90 Days Know Routes Schedule

* ಜನವರಿ 16, 23, 30, ಫೆಬ್ರವರಿ 6, 13, 20, 27; ಮಾರ್ಚ್ 6, 13, 20, 27; ಮತ್ತು ಏಪ್ರಿಲ್ 3, 10 ರಂದು ಹೊರಡುವ ತಿರುಪತಿ/ಹೈದರಾಬಾದ್-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 17419/17021) ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದ್ದು, ಹುಬ್ಬಳ್ಳಿಯಲ್ಲಿ ಕೊನೆಗೊಳ್ಳಲಿದೆ.

* ವಾಸ್ಕೋ ಡ ಗಾಮಾ-ತಿರುಪತಿ/ಹೈದರಾಬಾದ್ ವೀಕ್ಲಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 17420/17022) ಜನವರಿ 17, 24, 31; ಫೆಬ್ರವರಿ 7, 14, 21, 28, ಮಾರ್ಚ್ 7, 14, 21, 28, ಹಾಗೂ ಏಪ್ರಿಲ್ 4, 11 ರಂದು ವಾಸ್ಕೋ ಡ ಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಹುಬ್ಬಳ್ಳಿ ರೈಲು ನಿಲ್ದಾಣದಿಂದ ನಿಗದಿತ ಸಮಯಕ್ಕೆ ಈ ರೈಲು ಹೊರಡಲಿದೆ.

* ಜನವರಿ 17 ರಿಂದ ಏಪ್ರಿಲ್ 16 ರವರೆಗೆ ಸಿಕಂದರಾಬಾದ್ ನಿಲ್ದಾಣದಿಂದ ಹೊರಡುವ ಸಿಕಂದರಾಬಾದ್-ವಾಸ್ಕೋ ಡ ಗಾಮಾ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 17039) ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.

* ವಾಸ್ಕೋ ಡ ಗಾಮಾ-ಸಿಕಂದರಾಬಾದ್ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 17040) ಜನವರಿ 18 ರಿಂದ ಏಪ್ರಿಲ್ 17, 2025 ರವರೆಗೆ ವಾಸ್ಕೋಡಗಾಮಾ ನಿಲ್ದಾಣದ ಬದಲಿಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಸಾಂಚರಿಸಲಿದೆ. ವಾಸ್ಕೋಡಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಸಂಚಾರ ಇರುವುದಿಲ್ಲ ಎಂದು ತಿಳಿಸಲಾಗಿದೆ.

ರೈಲುಗಳ ಮಾರ್ಗ ಬದಲಾವಣೆ ಪಟ್ಟಿ

* ಪುಣೆ-ಎರ್ನಾಕುಲಂ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 11097) ಜನವರಿ 18 ರಿಂದ ಏಪ್ರಿಲ್ 12ರವರೆಗೆ ಪುಣೆಯಿಂದ ಪ್ರಾರಂಭವಾಗುವ ರೈಲು ಪುಣೆ, ಪನ್ವೇಲ್, ರೋಹಾ ಮತ್ತು ಮಡಗಾಂವ್ ನಿಲ್ದಾಣಗಳ ಮೂಲಕ ಸಂಚರಿಸುತ್ತದೆ.

* ಜನವರಿ 20 ರಿಂದ ಏಪ್ರಿಲ್ 14 ರವರೆಗೆ ಎರ್ನಾಕುಲಂ ನಿಲ್ದಾಣದಿಂದ ಪ್ರಾರಂಭವಾಗುವ ಎರ್ನಾಕುಲಂ-ಪುಣೆ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 11098) ಮಡ್ಗಾಂವ್, ರೋಹಾ, ಪನ್ವೇಲ್ ಮತ್ತು ಪುಣೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲು ಕೆಲವು ನಿಲ್ದಾಣವರೆಗೆ ಸಂಚರಿಸುವುದಿಲ್ಲ.

* ಜನವರಿ 20 ರಿಂದ ಏಪ್ರಿಲ್ 14ರವರೆಗೆ ವಾಸ್ಕೋ ಡ ಗಾಮಾದಿಂದ ಹೊರಡುವ ವಾಸ್ಕೋ ಡ ಗಾಮಾ-ವೆಲಂಕಣಿ ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 17315) ಮಡಗಾಂವ್, ಮಂಗಳೂರು ಜಂಕ್ಷನ್, ಶೋರನೂರ್ ಮತ್ತು ಈರೋಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಸ್ಯಾನ್ವೊರ್ಡೆಮ್ ನಿಲ್ದಾಣದಿಂದ ಸೇಲಂ ನಿಲ್ದಾಣಗಳವರೆಗೆ ಈ ರೈಲು ನಿಲ್ದಾಣ ಇರುವುದಿಲ್ಲ.

* ಜನವರಿ 21 ರಿಂದ ಏಪ್ರಿಲ್ 15 ರವರೆಗೆ ವೆಲಂಕಣಿಯಿಂದ ಪ್ರಾರಂಭವಾಗುವ ವೆಲಂಕಣಿ-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 17316) ಈರೋಡ್, ಶೋರನೂರು, ಮಂಗಳೂರು ಜಂಕ್ಷನ್ ಮತ್ತು ಮಡಗಾಂವ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+