• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆಲ್ಕೊ ಸೋಲಾರ್ 25 ನೇ ವರ್ಷಾಚರಣೆ; ರಾಜ್ಯಾದ್ಯಂತ ಕಾರ್ಯಕ್ರಮ

|

ಹುಬ್ಬಳ್ಳಿ, ಡಿಸೆಂಬರ್ 16; ಗ್ರಾಮೀಣ ಜೀವನೋಪಾಯದ ಕೆಲಸಗಳಿಗೆ ಇರುವ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಜೀವನಾಧಾರಕ್ಕಾಗಿ 'ಸುಸ್ಥಿರ ಇಂಧನ-ಸೌರಶಕ್ತಿ ಜೀವನಕ್ಕೆ ಆಧಾರ' ಎಂಬ ಧ್ಯೇಯೋದ್ದೇಶದ ಹಿನ್ನೆಲೆಯಲ್ಲಿ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂದೆ ಅವರ ಸೆಲ್ಕೊ ಸೋಲಾರ್ ಪ್ರೈವೆಟ್ ಲಿಮಿಟೆಡ್ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.

ಈ ಕುರಿತು ಸೆಲ್ಕೊ ಸೋಲಾರ್ ಎಜಿಎಂ ಪ್ರಸನ್ನ ಹೆಗಡೆ ಅವರು ಹುಬ್ಬಳ್ಳಿಯಲ್ಲಿ ಇಂದು ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಡಿ.19ರಿಂದ ಜನವರಿ19ರ ವರೆಗೆ ಸೌರಶಕ್ತಿಯನ್ನು ಸಮುದಾಯಾಧರಿತವಾಗಿ ಮುನ್ನಡೆಸುವ ಸೆಲ್ಕೊ ಸೋಲಾರ್ ನ 25 ನೇ ವರ್ಷಾಚರಣೆ ಪ್ರಯುಕ್ತ ಸೌರ ಬದುಕು ಮಾಸಾಚರಣೆಯನ್ನು ರಾಜ್ಯದ್ಯಂತ ಆಯೋಜಿಸಲಾಗಿದ್ದು, ರಾಜ್ಯದ ಹಲವಾರು ಕುಟುಂಬಗಳಿಗೆ ಸೆಲ್ಕೊ, ಸೋಲಾರ್ ಬೆಳಕನ್ನು ಹರಿಸಲಿದೆ. ಸೆಲ್ಕೊ ಸಂಸ್ಥೆಯು ತನ್ನ 25 ವರ್ಷಗಳಲ್ಲಿ ಸುಸ್ಥಿರ ಇಂಧನದ ಮೂಲಕ ಬೆಳಕಿನ ಪರಿಹಾರ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಅದೇ ಸುಸ್ಥಿರ ಇಂಧನ ಜೀವನಾಧಾರಕ್ಕೂ ಪರಿಹಾರ ನೀಡಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದರು.\

ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ

ಹಳ್ಳಿಯಲ್ಲಿ ಅದೆಷ್ಟೋ ಗುಡಿ ಕೈಗಾರಿಕೆಗಳು ನಶಿಸಿ ಹೋಗುತ್ತಿದ್ದು, ಜೀವನೋಪಾಯದ ಉದ್ಯೋಗಗಳನ್ನು ಅನೇಕರು ‌ವಿದ್ಯುತ್ ಹಾಗೂ ಇಂಧನದ ಸಮಸ್ಯೆಗಳಿಂದ ಕೈ ಬಿಡುತ್ತಿದ್ದು, ಮುಂಬರುವ ಪೀಳಿಗೆಗಳು ಗುಡಿ ಕೈಗಾರಿಕೆಯನ್ನು ಕೈ ಬಿಡಲು ಇಚ್ಚಿಸುತ್ತಾರೆ. ಕಾರಣ ವಿದ್ಯುತ್ ಹಾಗೂ ಇಂಧನದ ಸಮಸ್ಯೆಗಳೇ ಪ್ರಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ಸೆಲ್ಕೊ ಸೋಲಾರ್ ಸಂಸ್ಥೆಯು ಅಂತಹ ಕುಟುಂಬಕ್ಕೆ ಬೆಳಕನ್ನು ನೀಡುವ ಮೂಲಕ ಗೃಹ ಕೈಗಾರಿಕೆಗೆ ಪುನರುಜ್ಜೀವನ ನೀಡಲಾಗುತ್ತದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸುರೇಶ ಸಾವಳಗಿ, ರಾಜೇಂದ್ರ ಗೀತೆ, ಗುರುಮೂರ್ತಿ ಹೆಗಡೆ, ಸುನಂದನ ಕುಲಕರ್ಣಿ, ಪ್ರಭು ಹೆಗಡೆ ಸೇರಿದಂತೆ ಇತರರು ಇದ್ದರು.

English summary
Selco Solar private limited company Celebrating 25th Birth Anniversary across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X