ಹುಬ್ಬಳ್ಳಿಯಲ್ಲಿ 40 ಸೆಂಕೆಂಡಿನಲ್ಲಿ 60 ಬಾರಿ ಚುಚ್ಚಿ ಚಂದ್ರಶೇಖರ್ ಗುರೂಜಿ ಕೊಲೆ

ಹುಬ್ಬಳ್ಳಿ, ಜುಲೈ 5: ಹಾಡಹಗಲಿನಲ್ಲೇ ಹುಬ್ಬಳ್ಳಿ ಮಂದಿ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದು ಹೋಗಿದೆ. ಸರಳವಾಸ್ತು ಮೂಲಕ ಮನೆ ಮನೆ ಮಾತಾಗಿದ್ದ ಡಾ. ಚಂದ್ರಶೇಖರ್ ಗುರೂಜಿ ಹತ್ಯೆ ನಡೆದು ಹೋಗಿದೆ.

Recommended Video

      ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಗೆ ಚಾಕುವಿನಿಂದ ಇರಿದ ಭೀಕರ ದೃಶ್ಯ | *Karnataka | OneIndia Kannada

      ಹುಬ್ಬಳ್ಳಿಯ ಉಣಿಕಲ್ ರಸ್ತೆಯಲ್ಲಿ ಇರುವ ಪ್ರೆಸಿಡೆಂಟ್ ಹೋಟೆಲ್‌ನ ಮುಂಭಾಗದಲ್ಲೇ ಇಬ್ಬರು ಹಂತಕರು ಗುರೂಜಿಯನ್ನು ಚುಚ್ಚಿ ಚುಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

      ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ್ ಗುರೂಜಿಯ ಹತ್ಯೆಯ ಘಟನೆ ನಡೆದಿದ್ದು ಹೇಗೆ?, ಕೇವಲ 40 ಸೆಕೆಂಡುಗಳಲ್ಲಿ 60 ಬಾರಿ ಚುಚ್ಚಿ ಚುಚ್ಚಿ ಹತ್ಯೆ ಮಾಡುವಂತಹ ದ್ವೇಷವಾದರೂ ಏನಿತ್ತು? ಮಂಗಳವಾರ ಮಧ್ಯಾಹ್ನ ಹೋಟೆಲ್ ಅಂಗಳದಲ್ಲಿ ನಡೆದಿದ್ದು ಏನು? ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.

      ಗುರೂಜಿಗಾಗಿ 30 ನಿಮಿಷ ಕಾದು ನಿಂತಿದ್ದ ಹಂತಕರು

      ಗುರೂಜಿಗಾಗಿ 30 ನಿಮಿಷ ಕಾದು ನಿಂತಿದ್ದ ಹಂತಕರು

      ಹುಬ್ಬಳ್ಳಿಯ ಉಣಿಕಲ್ ರಸ್ತೆಯಲ್ಲಿ ಇರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ತಂಗಿದ್ದ ಡಾ. ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡುವುದಕ್ಕಾಗಿ ಬಂದಿದ್ದ ಹಂತಕರು ಅವರನ್ನು ರಿಸೆಪ್ಷನ್ ಬಳಿಗೆ ಬರುವಂತೆ ಕರೆ ಮಾಡಿದ್ದರು. ಹೋಟೆಲ್ ರೂಮಿಗೆ ಹೋಗುವುದಕ್ಕೆ ಹಿಂದೇಟು ಹಾಕಿದ ಹಂತಕರು ಮುಂಭಾಗದಲ್ಲೇ ಬರುವಂತೆ ಆಹ್ವಾನ ನೀಡಿದ್ದರು. 30 ನಿಮಿಷಗಳ ನಂತರ ಡಾ. ಚಂದ್ರಶೇಖರ್ ಗುರೂಜಿ ಹೋಟೆಲ್ ರಿಸೆಪ್ಷನ್ ಬಳಿಗೆ ಬಂದರು.

      ಕಾಲಿಗೆ ಬಿದ್ದವನು ಒಬ್ಬ, ಚಾಕು ಚುಚ್ಚಿದವನು ಮತ್ತೊಬ್ಬ!

      ಕಾಲಿಗೆ ಬಿದ್ದವನು ಒಬ್ಬ, ಚಾಕು ಚುಚ್ಚಿದವನು ಮತ್ತೊಬ್ಬ!

      ಹೋಟೆಲ್ ರಿಸೆಪ್ಷನ್ ಬಳಿಗೆ ಆಗಮಿಸಿದ ಡಾ. ಚಂದ್ರಶೇಖರ್ ಗುರೂಜಿ ಸೋಫಾ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಒಬ್ಬ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಮುಂದಾದ. ಈ ವೇಳೆ ಆತನಿಗೆ ಆಶೀರ್ವದಿಸುತ್ತಿದ್ದ ಸಂದರ್ಭವನ್ನೇ ಕಾದು ನಿಂತಿದ್ದ ಮತ್ತೊಬ್ಬ ವ್ಯಕ್ತಿ ಗುರೂಜಿ ಎದೆಗೆ ಚಾಕುವಿನಿಂದ ಬರ್ಬರವಾಗಿ ಇರಿದಿದ್ದಾನೆ.

      40 ಸೆಂಕೆಂಡುಗಳಲ್ಲಿ 60 ಬಾರಿ ಚುಚ್ಚಿದ ಕಿರಾತಕರು

      40 ಸೆಂಕೆಂಡುಗಳಲ್ಲಿ 60 ಬಾರಿ ಚುಚ್ಚಿದ ಕಿರಾತಕರು

      ದುಷ್ಕರ್ಮಿಯೊಬ್ಬ ತಮ್ಮ ಎದೆಗೆ ಚಾಕುವಿನಿಂದ ಮೊದಲ ಬಾರಿ ಇರಿಯುತ್ತಿದ್ದಂತೆ ಡಾ. ಚಂದ್ರಶೇಖರ್ ಗುರೂಜಿ ಪ್ರತಿರೋಧ ಒಡ್ಡುವುದಕ್ಕೆ ಶುರು ಮಾಡಿದ್ದಾರೆ. ಇದರ ಬೆನ್ನಲ್ಲೇ ಮೇಲೆ ಎದ್ದ ಮತ್ತೊಬ್ಬ ವ್ಯಕ್ತಿಯೂ ಸಹ ಗುರೂಜಿಗೆ ಚಾಕುವಿನಿಂದ ಇರಿಯುವುದಕ್ಕೆ ಪ್ರಾರಂಭಿಸಿದ್ದಾರೆ. ಇದ್ದಕ್ಕಿದ್ದಂತೆ ನೆಲಕ್ಕೆ ಬಿದ್ದ ಗುರೂಜಿಯ ಮೇಲೆ ಕ್ರೌರ್ಯ ಮೆರೆದ ದುಷ್ಕರ್ಮಿಗಳು ಕೇವಲ 40 ಸೆಂಕೆಂಡುಗಳಲ್ಲಿ ಅಂದಾಜು 60 ಬಾರಿ ಚುಚ್ಚಿ ಚುಚ್ಚಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

      ಹೋಟೆಲ್ ಸಿಸಿ ಕ್ಯಾಮರಾದಲ್ಲಿ ಹತ್ಯೆಯ ದೃಶ್ಯ ಸೆರೆ

      ಡಾ. ಚಂದ್ರಶೇಖರ್ ಗುರೂಜಿ ಹತ್ಯೆಯ ದೃಶ್ಯವು ಹುಬ್ಬಳ್ಳಿಯ ಉಣಿಕಲ್ ರಸ್ತೆಯಲ್ಲಿರುವ ಪ್ರೆಸಿಡೆಂಟ್ ಹೋಟೆಲ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುರೂಜಿಯ ಹತ್ಯೆ ಮಾಡಿದ ಹಂತಕರು ಅಲ್ಲಿಂದ ಕೆಲವೇ ಸೆಂಕೆಂಡುಗಳಲ್ಲಿ ಎಸ್ಕೇಪ್ ಆಗುತ್ತಾರೆ. ಹೋಟೆಲ್‌ನಿಂದ ಹೊರಗೆ ಓಡಿ ಹೋಗುತ್ತಿರುವ ದೃಶ್ಯ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+