ಹುಬ್ಬಳ್ಳಿ 9 ಕೋಟಿ ಬಾಕಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಪರದಾಟ

ಹುಬ್ಬಳ್ಳಿ, ಜೂನ್ 26: 'ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು' ಎಂಬಂತೆ ಆಸ್ತಿ ಎಷ್ಟಿದ್ದರೇನು? ಇರುವ ಆಸ್ತಿಗಳನ್ನು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಳ್ಳದಿದ್ದರೆ ಎಷ್ಟಿದ್ದರೂ ಸಾಲುವುದಿಲ್ಲ ಎನ್ನುವುದಕ್ಕೆ ಹುಬ್ಬಳ್ಳಿ-ಮಹಾನಗರ ಪಾಲಿಕೆಯೇ ಒಂದು ನಿದರ್ಶನ.

ಹೌದು, ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೃಹ, ವಾಣಿಜ್ಯ ಹಾಗೂ ಖಾಲಿ ನಿವೇಶನಗಳು ಸೇರಿ ಒಟ್ಟು 2,45,500 ಆಸ್ತಿಗಳಿದ್ದು, ಬೆಂಗಳೂರು ಮಹಾನಗರ ಪಾಲಿಕೆ ಬಿಟ್ಟರೇ ಹುಬ್ಬಳ್ಳಿ-ಧಾರವಾಡ ಪಾಲಿಕೆ ಎರಡನೇ ಅತಿ ದೊಡ್ಡ ಸ್ಥಳೀಯ ಸಂಸ್ಥೆಯಾಗಿದೆ. ಈ ಆಸ್ತಿಗಳಿಂದ ಪ್ರತಿವರ್ಷ 46.74 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿ ಇಟ್ಟುಕೊಂಡಿದೆಯಾದರು ಸಾಧನೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಇದರಿಂದಾಗಿ ಪಾಲಿಕೆಯ ಖರ್ಚು ವೆಚ್ಚಗಳನ್ನು ನೀಗಿಸುವುದು ಕಷ್ಟವಾಗಿದೆ.

Rs. 9 Crore property tax pending in Hubballi-Darwad Mincipality Corporation

9.05 ಕೋಟಿ ಬಾಕಿ

ಕಳೆದ ವರ್ಷ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗದೇ ಮಹಾನಗರ ಪಾಲಿಕೆ 9.05ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಇದರೊಂದಿಗೆ ಪ್ರಸ್ತಕ ವರ್ಷದ ಗುರಿಯೂ ಸೇರಿ ಒಟ್ಟು 58.90 ಕೋಟಿ ರೂಪಾಯಿ ತೆರಿಗೆ ವಸೂಲಿ ಮಾಡಬೇಕಾದ ಅನಿವಾರ್ಯತೆ ಪಾಲಿಕೆಗೆ ಎದುರಾಗಿದೆ.

ಇದರ ಮಧ್ಯೆ ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ ದಾಖಲೆ ಪ್ರಮಾಣದ 19.90 ಕೋಟಿ ರೂ. ತೆರಿಗೆಯನ್ನು ಆಸ್ತಿಗಳ ಮಾಲೀಕರು ಪಾವತಿಸಿದ್ದಾರೆ. ಆ ಮೂಲಕ ಕೆಲವರು ಶೇ. 5ರಷ್ಟು ರಿಯಾಯ್ತಿಯ ಲಾಭ ಪಡೆದುಕೊಂಡಿದ್ದರೆ, ಇನ್ನೂ ಕೆಲವರು ದಂಡ ಪಾವತಿ ಮಾಡುವುದರಿಂದ ತಪ್ಪಿಸಿಕೊಂಡಿದ್ದಾರೆ.

ಏಪ್ರಿಲ್ 1 ರಿಂದ ಮೇ ಅಂತ್ಯದವರೆಗೆ 19.90 ಕೋಟಿ ರೂ. ಆಸ್ತಿ ತೆರಿಗೆ ವಸೂಲಿ ಮಾಡಲಾಗಿದ್ದು, ಅದರಲ್ಲಿ 18.86 ಕೋಟಿ ಆಸ್ತಿ ತೆರಿಗೆಯಾಗಿದ್ದರೆ, 1.04 ಕೋಟಿ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ ಎನ್ನುತ್ತಾರೆ ಕಂದಾಯ ಅಧಿಕಾರಿ ಇಸ್ಲಾಯಿಲ್ ಸಾಹೇಬ ಶಿರಹಟ್ಟಿ.

ಸಿಬ್ಬಂದಿ ಕೊರತೆ

ಮಹಾನಗರ ಪಾಲಿಕೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಇಲ್ಲದಿರುವುದೇ ತೆರಿಗೆ ವಸೂಲಿಯಲ್ಲಿ ಹಿಂದೆ ಬೀಳಲು ಕಾರಣ ಎಂಬುದು ಅಧಿಕಾರಿಗಳ ಸಬೂಬು. ಪ್ರಸಕ್ತ ವರ್ಷದ ತೆರಿಗೆ ವಸೂಲಿ ಗುರಿ ತಲುಪಲು ಪಾಲಿಕೆ ಸಿಬ್ಬಂದಿಗೆ ಕಷ್ಟವಾಗುತ್ತಿಲ್ಲ. ಆದರೆ, ಹಿಂದಿನ ವರ್ಷಗಳಿಂದ ಉಳಿದುಕೊಂಡು ಬಂದಿರುವ ಬಾಕಿ ವಸೂಲಿ ಸವಾಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+