ಹುಬ್ಬಳ್ಳಿಯಲ್ಲಿ ಮೊಬೈಲ್ ಕೊಡಿಸುವ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ; ನಾಲ್ವರ ವಿರುದ್ಧ ಪ್ರಕರಣ
ಆರೋಪಿಗಳು ಬಾಲಕಿಗೆ ಮೊಬೈಲ್ ಫೋನ್ ಖರೀದಿಸಿ ಕೊಡುವ ನೆಪದಲ್ಲಿ ಊರಿನಿಂದ ಕರೆಸಿದ್ದಾರೆ.
ಹುಬ್ಬಳ್ಳಿ, ಮಾರ್ಚ್ 09: ಮೊಬೈಲ್ ಫೋನ್ ಕೊಡಿಸುವ ನೆಪದಲ್ಲಿ ಕರೆಸಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳ ವಿರುದ್ಧ ಹುಬ್ಬಳ್ಳಿಯ್ಲಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಪ್ರಕಾರ, ನಾಲ್ವರು ಆರೋಪಿಗಳು ಬಾಲಕಿಗೆ ಮೊಬೈಲ್ ಫೋನ್ ಖರೀದಿಸುವುದಾಗಿ ಭರವಸೆ ನೀಡಿ ತಮ್ಮ ಬಲೆಗೆ ಬೀಳಿಸಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ಆಕೆಯ ಊರಿನಿಂದ ಹುಬ್ಬಳ್ಳಿಗೆ ಕರೆಸಲಾಗಿತ್ತು. ಅಲ್ಲಿಂದ ಹೊರ ವರ್ತುಲ ರಸ್ತೆಗೆ ಬೈಕ್‌ನಲ್ಲಿ ಕರೆದೊಯ್ದ ಆರೋಪಿಗಳು ಪ್ರತ್ಯೇಕ ಸ್ಥಳದಲ್ಲಿ ಅಪರಾಧ ಎಸಗಿದ್ದರು. ಸಾಮೂಹಿಕ ಅತ್ಯಾಚಾರ ಎಸಗಿದ ನಾಲ್ವರ ವಿರುದ್ಧ ಹುಬ್ಬಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಗಳನ್ನು ದೇವರಾಜ್, ಫಕೀರೇಶ್, ಸಾಗರ್ ಮತ್ತು ಇನ್ನೋಬ್ಬ ಸ್ನೇಹಿತ ಎಂದು ಗುರುತಿಸಲಾಗಿದೆ.
#Gangrape: FIR against four by #hubballi police for gangraping a minor. Devaraj, Fakiresh and two of their friends booked. On the pretext of buying her a mobile phone. They took her, threatened and gangraped her. Devaraj had befriend the girl through his friend Sagar. #Karnataka pic.twitter.com/L1xTKefDr4
— Imran Khan (@KeypadGuerilla) March 9, 2023
ಆರೋಪಿಗಳು ಬಾಲಕಿಗೆ ಮೊಬೈಲ್ ಫೋನ್ ಖರೀದಿಸಿ ಕೊಡುವ ನೆಪದಲ್ಲಿ ಊರಿನಿಂದ ಕರೆಸಿದ್ದಾರೆ. ಬಳಿಕ ಆಕೆಯನ್ನು ಕರೆದೊಯ್ದು ಬೆದರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ದೇವರಾಜ್ ತನ್ನ ಸ್ನೇಹಿತ ಸಾಗರ್ ಮೂಲಕ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ. ಘಟನೆ ನಂತರ ಸಂತ್ರಸ್ತೆ ಸ್ವತಃ ಗೋಕುಲ ಪೊಲೀಸ್ ಠಾಣೆಗೆ ಬಂದು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಸಂತ್ರಸ್ತ ಬಾಲಕಿ ದೂರಿನ ಪ್ರಕಾರ, ಇಬ್ಬರು ಆರೋಪಿಗಳು ಸಂತ್ರಸ್ತೆಗೆ ಪರಿಚಿತರು ಮತ್ತು ಇನ್ನೊಬ್ಬ ಆರೋಪಿಯು ಆಕೆಯ ಇನ್ನೊಬ್ಬ ಸ್ನೇಹಿತನ ಮೂಲಕ ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಆರೋಪಿಗಳು ಸಂತ್ರಸ್ತೆಯನ್ನು ಮೊದಲು ಹೋಟೆಲ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಆರೋಪಿಗಳು ಆಕೆಯ ಮೇಲೆ ಹಲ್ಲೆ ನಡೆಸಿ, ಸುಮ್ಮನಿರುವಂತೆ ಮತ್ತು ಯಾವುದಕ್ಕೂ ಆಕ್ಷೇಪಿಸದಂತೆ ಬೆದರಿಕೆ ಹಾಕಿದ್ದಾರೆ.
ನಂತರ ಆಕೆಯನ್ನು ಹೊರ ವರ್ತುಲ ರಸ್ತೆಯಲ್ಲಿ ಕರೆದೊಯ್ದು ಅಲ್ಲಿ ಅಪರಾಧ ಕೃತ್ಯ ಎಸಗಿದ್ದಾರೆ. ಪ್ರಸ್ತುತ ಸಂತ್ರಸ್ತೆ ಇಬ್ಬರು ಆರೋಪಿಗಳನ್ನು ಗುರುತಿಸಿದ್ದು, ಇತರರನ್ನೂ ಗುರುತಿಸುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications