Get Updates
Get notified of breaking news, exclusive insights, and must-see stories!

ಹುಬ್ಬಳ್ಳಿ-ಧಾರವಾಡ; ಆಸ್ತಿ ತೆರಿಗೆ ಮೊಬೈಲ್‌ನಲ್ಲೇ ಪಾವತಿಸಿ

ಹುಬ್ಬಳ್ಳಿ, ಏಪ್ರಿಲ್ 11; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 2023-24ನೇ ಸಾಲಿನ ಆಸ್ತಿ ತೆರಿಗೆ ಪಾವತಿ ಮಾಡಲು ಶೇ 5ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಜನರು ಈ ರಿಯಾಯಿತಿ ಸದುಪಯೋಗ ಮಾಡಿಕೊಂಡು ಏಪ್ರಿಲ್ 1 ರಿಂದ 30ರ ತನಕ ಆಸ್ತಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ತೆರಿಗೆ ಕಟ್ಟಲು ಸರತಿ ಸಾಲಿನಲ್ಲಿ ನಿಲ್ಲುವ, ತಾಸುಗಟ್ಟಲೇ ಕಾಯುವ ಪ್ರಕ್ರಿಯೆಗೆ ತಡೆ ಹಾಕಿದೆ. ಮೊಬೈಲ್ ಮೂಲಕವೂ ತೆರಿಗೆ ಪಾವತಿ ಮಾಡಬಹುದಾಗಿದೆ.

ಆಸ್ತಿ ತೆರಿಗೆ ಪಾವತಿ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ಹೊರಡಿಸಿದೆ. ಮೇ1 ರಿಂದ ಜೂನ್ 30ರ ತನಕ ದಂಡ ರಹಿತವಾಗಿ ಆಸ್ತಿ ತೆರಿಗೆಯನ್ನು ಪಾವತಿ ಮಾಡಬಹುದು. 1/7/2023 ರಿಂದ 31/3/2024ರ ವರೆಗೆ ಮಾಸಿಕ ಶೇ 2ರಷ್ಟು ದಂಡದೊಂದಿಗೆ ಆಸ್ತಿ ತೆರಿಗೆಯನ್ನು ಪಾವತಿಸಬೇಕಾಗಿದೆ.

Pay Hubballi Daharwad Municipal Corporation Property Tax In Mobile

ಜನರಿಗೆ ಅನುಕೂಲವಾಗಲಿ ಎಂದು ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ HDMC Application Download ಮಾಡಿಕೊಂಡು ಆಸ್ತಿ ತೆರಿಗೆಯನ್ನು ಪಾವತಿ ಮಾಡಬಹುದಾಗಿದೆ. ಈ ಮೂಲಕ ಮಹಾನಗರ ಪಾಲಿಕೆ ವಲಯ ಕಚೇರಿಗಳಿಗೆ ಅಲೆದಾಡುವ ತೊಂದರೆಯನ್ನು ಪಾಲಿಕೆ ತಪ್ಪಿಸಿದೆ.

ಆಸ್ತಿ ತೆರಿಗೆಯನ್ನು ಕರ್ನಾಟಕ ಓನ್ ಸೇವಾ ಕೇಂದ್ರಗಳ ಮುಖಾಂತರ ಅಥವಾ ಆನ್‌ಲೈನ್ ಮುಖಾಂತರ http://www.hdmc.in. ವೆಬ್‌ಸೈಟ್‌ಗೆ ಭೇಟಿ ನೀಡಿ ಸಹ ಸಂದಾಯ ಮಾಡಲು ಅವಕಾಶವಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹೇಳಿದೆ.

Pay Hubballi Daharwad Municipal Corporation Property Tax In Mobile

ಆಯಾ ಸಂಬಂಧಿಸಿದ ವಲಯ ವ್ಯಾಪ್ತಿಯಲ್ಲಿಯ ವಾರ್ಡ್‌ಗಳಿಗೆ ಸಂಬಂಧಿಸಿದ ಆಸ್ತಿ ತೆರಿಗೆ ಚಲನ್‌ಗಳನ್ನು ಮಾತ್ರ ವಲಯ ಕಚೇರಿಗಳಿಂದ ಪೂರೈಸಲಾಗುತ್ತದೆ. ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಎಲ್ಲ ವಲಯ ವ್ಯಾಪ್ತಿಯ ವಾರ್ಡವಾರು ಎಸ್‌. ಎ. ಎಸ್ ನಮೂನೆ ಹಾಗೂ ಚಲನ್‌ಗಳನ್ನು ಕರ್ನಾಟಕ ಓನ್ ಸೇವಾ ಕೇಂದ್ರ (ಹೆಚ್‌ಡಿ-1) ರಲ್ಲಿ ಪಡೆದು ಅಲ್ಲಿಯೇ ನೀಡುವ ಅವಕಾಶ ನೀಡಲಾಗಿದೆ.

ಅಲ್ಲದೇ ಹಿಂದಿನ ವರ್ಷದ ಆಸ್ತಿತೆರಿಗೆ ಬಾಕಿ ಪಾವತಿಸದಿದ್ದವರು ಸಹ ತಮ್ಮ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸಿ ಪಾಲಿಕೆ ಕೈಗೊಳ್ಳಲಿರುವ ಅಭಿವೃದ್ಧಿ ಕೆಲಸಗಳಿಗೆ ಜವಾಬ್ದಾರಿಯುತ ಪಾಲುದಾರರಾಗಲು ಮಹಾನಗರ ಪಾಲಿಕೆ ಮನವಿ ಮಾಡಿದೆ.

ವಿಶೇಷ ಸೂಚನೆ: ಪ್ರಸಕ್ತ ವರ್ಷ 2023-24 ನೇ ಸಾಲಿನಿಂದ ಯಾವುದೇ ಬ್ಯಾಂಕಿನಲ್ಲಿ ಆಸ್ತಿ ತೆರಿಗೆ ಚಲನ್‌ಗಳನ್ನು ನೀಡಲು ಅವಕಾಶ ವಿರುವುದಿಲ್ಲ. ಕರ್ನಾಟಕ ಒನ್‌ (ಎಚ್‌ಡಿ ಒನ್‌) ಕೇಂದ್ರದಲ್ಲಿ ಆಸ್ತಿ ತೆರಿಗೆ ಚಲನ್ ಪಡೆಯಲು ಇಚ್ಚಿಸಿದಲ್ಲಿ ರೂ. 15 ಶುಲ್ಕವನ್ನು ಪಾವತಿ ಮಾಡಬೇಕಿದೆ.

ಈ ಹಿಂದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ಪಾವತಿ ಮಾಡಲು ವಲಯ ಸಹಾಯಕ ಕಚೇರಿ ಮತ್ತು ಹುಬ್ಬಳ್ಳಿ-ಧಾರವಾಡ ಒನ್ ಕಚೇರಿಯಲ್ಲಿ ಕಾಯಬೇಕಿತ್ತು. ಇದು ಬಹಳ ತ್ರಾಸದಾಯಕ ಕೆಲಸವಾಗಿತ್ತು. ಕೆಲವೊಮ್ಮ ಸಂಜೆಯ ತನಕ ಜನರು ಸರತಿ ಸಾಲಿನಲ್ಲಿ ಕಾಯಬೇಕಿತ್ತು. ಆದ್ದರಿಂದ 2020ರಲ್ಲಿ ಮಹಾನಗರ ಪಾಲಿಕೆ ಆನ್‌ಲೈನ್‌ ಮೂಲಕ ತೆರಿಗೆ ಪಾವತಿಗೆ ಅವಕಾಶ ನೀಡಿತು. ಈಗ ಮೊಬೈಲ್ ಮೂಲಕವೂ ಆಸ್ತಿ ತೆರಿಗೆ ಕಟ್ಟಬಹುದಾಗಿದೆ.

ಪಾಲಿಕೆಯ ಆನ್‌ಲೈನ್ ಮೂಲಕ ಪಾವತಿಗೆ ಅವಕಾಶ ನೀಡಿದ್ದರಿಂದ ಸುಮಾರು 2 ಲಕ್ಷ ಜನರಿಗೆ ಸಹಾಯಕವಾಗಿದೆ. ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವಾಗ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಕೆಯ ಕಚೇರಿಯಲ್ಲಿ ಪ್ರತ್ಯೇಕ ಡೆಸ್ಕ್ ಸ್ಥಾಪನೆ ಮಾಡಲಾಗಿದೆ. ಆನ್‌ಲೈನ್ ಮೂಲಕ ಪಾವತಿ ಮಾಡುವುದು ಸಂಪೂರ್ಣ ಸುರಕ್ಷಿತವಾಗಿದೆ ಮತ್ತು ಇದು ಸರಳ ವಿಧಾನವೂ ಆಗಿದೆ ಎಂದು ಮಹಾನಗರ ಪಾಲಿಕೆ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+