ಆನ್ಲೈನ್ ಬಿಲ್ ಪಾವತಿ ಸ್ಥಗಿತ: ಕರೆಂಟ್ ಬಿಲ್ ಕಟ್ಟಲು ಸಾರ್ವಜನಿಕರ ಪರದಾಟ

ಹುಬ್ಬಳ್ಳಿ, ಮೇ 24: ಕೇಂದ್ರ ಸರ್ಕಾರ ಡಿಜಿಟಲೀಕರಣ ಮಾಡಲು ಸಾಕಷ್ಟು ಶ್ರಮವಹಿಸಿ ಬಹುತೇಕ ಸೇವೆಯನ್ನು ಅನುಷ್ಠಾನಕ್ಕೆ ತಂದಿದೆ. ಆದರೆ ಕೆಲವು ದಿನಗಳ ಕಾಲ ಸೇವೆಯನ್ನು ಅನುಭವಿಸಿದ ಜನರು ಈಗ ಏಕಾಏಕಿ ಕಂಗಾಲಾಗಿದ್ದಾರೆ.

ಹೆಸ್ಕಾಂ ವಿದ್ಯುತ್‌ ಬಿಲ್‌ಅನ್ನು ಆನ್‌ಲೈನ್ ಪೇಮೆಂಟ್ ಆ್ಯಪ್‌ಗಳಿಂದ ಪಾವತಿಸುವ ವ್ಯವಸ್ಥೆ ಕೆಲ ದಿನಗಳಿಂದ ಸ್ಥಗಿತಗೊಂಡು ಸುಲಭವಾಗಿ ಬಿಲ್ ಮಾಡುವ ವ್ಯವಸ್ಥೆ ಬಂದ್‌ ಆಗಿ ಗ್ರಾಹಕರು ಪರದಾಡುವಂತಾಗಿದೆ.

Online Bill Payment Shutdown: Public Scramble To Pay Electric Bill

ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಹಾಗೂ ವಿವಿಧ ಆನ್‌ಲೈನ್ ಪೇಮೆಂಟ್ ಅ್ಯಪ್‌ಗಳಿಂದ ಗ್ರಾಹಕರು ತಾವಿದ್ದ ಸ್ಥಳದಿಂದ ಕ್ಷಣಾರ್ಧದಲ್ಲಿ ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ಆದರೆ ಮೇ ತಿಂಗಳ ಆರಂಭದಿಂದ ಈ ಆ್ಯಪ್‌ಗಳಲ್ಲಿ ಬಿಲ್ ಪಾವತಿ ವ್ಯವಸ್ಥೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರು ಪರದಾಡುವಂತಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ವಿದ್ಯುತ್‌ ಬಿಲ್ ಪಾವತಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಸರದಿ ಸಾಲಿನಲ್ಲಿ ನಿಂತುಕೊಂಡು ಬಿಲ್ ಪಾವತಿ ಮಾಡುವುದು ಸಾರ್ವಜನಿಕರ ದುಸ್ತರವಾಗಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಆನ್‌ಲೈನ್ ಪೇಮೆಂಟ್ ಸಲುವಾಗಿ ಬರೋಡಾ ಜೊತೆಗೆ ಹೆಸ್ಕಾಂ ಕೆಲವೊಂದು ಅವಧಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಒಪ್ಪಂದದ ಅವಧಿ ಅಂತ್ಯಗೊಂಡಿದೆ.

Online Bill Payment Shutdown: Public Scramble To Pay Electric Bill

ಈ ನಿಟ್ಟಿನಲ್ಲಿ ಜನರು ಬಿಲ್ ಪಾವತಿ ಮಾಡಲು ಪರದಾಡುವಂತಾಗಿದೆ. ಹೀಗಾಗಿ ಹೆಸ್ಕಾಂ ಇಲಾಖೆಯವರು ಬಿಲ್‌ ಪಾವತಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಒಟ್ಟಿನಲ್ಲಿ ಆನ್ ಲೈನ್ ಮೊರೆ ಹೋಗಿದ್ದ ಜನರಿಗೆ ಈಗ ವಿದ್ಯತ್‌ ಬಿಲ್ ಪಾವತಿ ದೊಡ್ಡ ತಲೆ ನೋವಾಗಿದೆ. ಹೆಸ್ಕಾಂ ವೆಬ್ ಸೈಟ್ ಮೂಲಕ ಕೂಡ ಪಾವತಿ ಮಾಡಲು ಅವಕಾಶವಿದ್ದರೂ ಜನರು ಆನ್ ಲೈನ್ ಆ್ಯಪ್‌ಗಳ ಬಳಕೆ ಜನಪ್ರಿಯತೆ ಹಾಗೂ ಸರಳವಾಗಿ ಪೇಮೆಂಟ್ ಮಾಡುವ ಹಿನ್ನೆಲೆಯಲ್ಲಿ ಈಗ ಏಕಾಏಕಿ ಸ್ಥಗಿತದಿಂದ ಸಮಸ್ಯೆ ಅನುಭವಿಸುವಂತಾಗಿದೆ.

ಮಂಡಿಹಾಳ ಗ್ರಾಮದಲ್ಲಿ ಅದ್ಧೂರಿ ಹೊನ್ನಾಟ

ಧಾರವಾಡ: ಕಲಘಟಗಿ ತಾಲೂಕಿನ ಮಂಡಿಹಾಳ ಗ್ರಾಮದಲ್ಲಿ ಗ್ರಾಮ ದೇವತೆಯರಾದ ದ್ಯಾಮವ್ವ ಹಾಗೂ ದುರ್ಗಾದೇವಿಯರ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ನಡೆಯುತ್ತಿದೆ. ಮಂಡಿಹಾಳ ಗ್ರಾಮದ ಪ್ರತಿಯೊಂದು ಗ್ರಾಮದಲ್ಲಿ ಗ್ರಾಮ ದೇವಿಯರ ಮೂರ್ತಿ ಮೆರವಣಿಗೆ ನಡೆಯುತ್ತಿದ್ದು, ಗ್ರಾಮಸ್ಥರು ಸಂಭ್ರಮದಿಂದ ಹೊನ್ನಾಟವಾಡುತ್ತಿದ್ದಾರೆ.

ಮಂಡಿಹಾಳ ಗ್ರಾಮದಲ್ಲಿ ಗ್ರಾಮ ದೇವಿಯರ ಜಾತ್ರೆ ನಡೆಯುತ್ತಿರುವುದರಿಂದ ಯಾರೂ ಕೂಡ ಚಪ್ಪಲಿ ಹಾಕಿಕೊಂಡು ಬರದಂತೆ ನಿರ್ಬಂಧ ಹೇರಲಾಗಿದೆ. ಇದರಿಂದ ಯಾರೂ ಕೂಡ ಪಾದರಕ್ಷೆ ಧರಿಸದೇ ಅದ್ಧೂರಿಯಿಂದ ಗ್ರಾಮ ದೇವಿಯರ ಜಾತ್ರೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+