ಆಸ್ತಿಗಾಗಿ ಹೆತ್ತ ಮಗನನ್ನೇ ಕೊಂದ ತಾಯಿ
ಹುಬ್ಬಳ್ಳಿ, ಡಿಸೆಂಬರ್ 12 : ಆಸ್ತಿಗಾಗಿ ಹೆತ್ತ ತಾಯಿ ಮಗನನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಅರಳಿಕಟ್ಟೆ ಕಾಲೋನಿಯ 30 ವರ್ಷದ ಇಮ್ರಾನ್ ನೂರ್ ಅಹ್ಮದ್ ಕೊಲೆಯಾದ ದುರ್ದೈವಿ.
ಇಮ್ರಾನ ನೂರ್ ಅಹ್ಮದ್ ಕುಡಿತದ ಚಟಕ್ಕೆ ದಾಸನಾಗಿದ್ದ . ಪ್ರತಿ ದಿನ ಕುಡಿದ ಮನೆಗೆ ಬಂದು ತಾಯಿಗೆ ಆಸ್ತಿಯಲ್ಲಿ ಪಾಲು ಕೊಡಿ ಎಂದು ಪದೇ ಪದೇ ಪೀಡಿಸುತಿದ್ದ. ಹೀಗಾಗಿ ಹೆತ್ತ ತಾಯಿ ಮೌಸಂ ಬಿ ಹಾಗೂ ಮಗನ ಜೊತೆಯಲ್ಲಿ ಆಗಾಗ ಜಗಳವಾಗುತಿತ್ತು. ಇತ್ತ ಆಸ್ತಿಯಲ್ಲಿ ಪಾಲು ಕೇಳಿದಕ್ಕೆ ಇಮ್ರಾನ್ ನನ್ನು ತಾಯಿಯೇ ಕೊಲೆ ಮಾಡಿದ್ದಾರೆ ಎಂದು ಮೃತನ ಪತ್ನಿಯ ಸಂಬಂಧಿಕರು ಆರೋಪಿಸಿದ್ದಾರೆ. ಇನ್ನು ತಾಯಿ ಮನೆಯಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ,

ಕೊಲೆ ಮಾಡಿದ ಬಳಿಕ ಸಹಜವಾಗಿ ಸಾವು ಎಂದು ಬಿಂಬಿಸುವ ಸಲುವಾಗಿ ಮೃತನ ಶವವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಇದೊಂದು ಸಹಜ ಸಾವು ಎಂಬಂತೆ ಬಿಂಬಿಸಲು ಪ್ರಯತ್ನ ಮಾಡಿದ್ದಾರೆ . ಆದರೆ ಮೃತನ ಪತ್ನಿ ಮತ್ತು ಪತ್ನಿಯ ಸಂಬಂಧಿಕರು ಶಹರ ಪೊಲೀಸ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದು , ವಿಚಾರಣೆ ಬಳಿಕವೆ ಆರೋಪಿ ಯಾರೆಂದು ತಿಳಿಯಬೇಕಿದೆ.












Click it and Unblock the Notifications