Get Updates
Get notified of breaking news, exclusive insights, and must-see stories!

ಹುಬ್ಬಳ್ಳಿಯಲ್ಲಿ ಮನೆ ಮಾಡಿದ ಎಚ್‍ಡಿಕೆ, ಧಾರವಾಡದಿಂದ ಸ್ಪರ್ಧೆ?

ಹುಬ್ಬಳ್ಳಿ, ಮೇ 31: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಕೆಗಳು ಗರಿಗೆದರತೊಡಗಿವೆ. ಮುಂಚೂಣಿಯಲ್ಲಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದ ಉದ್ದಗಲಕ್ಕೂ ಸುತ್ತಾಡಲು ಆರಂಭಿಸಿದ್ದಾರೆ.

ಎಲ್ಲರಿಂತ ಒಂದು ಹೆಜ್ಜೆ ಮುಂದೆ ಎಂಬಂತೆ ಜೆಡಿಎಸ್ ರಾಜಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.

ಈ ಹಿಂದೆ ಕಾರ್ಯಕರ್ತರು ಬಯಸಿದರೆ ಉತ್ತರ ಕರ್ನಾಟಕದ ಯಾವುದಾದರೂಂದು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸುಳಿವು ನೀಡಿದ್ದ ಎಚ್‍ಡಿಕೆ, ಇದೀಗ ಒಳಗಿಂದೊಳಗೆ ಚುನಾವಣೆಗೆ ನಿಲ್ಲಲು ತಯಾರಿ ನಡೆಸುತ್ತಿದ್ದಾರೆ.[ಮಂಡ್ಯ ರಾಜಕಾರಣ ಹೈಜಾಕ್ ಮಾಡಲು ಎಚ್ ಡಿಕೆ ಪ್ರಯತ್ನ: ಚೆಲುವರಾಯಸ್ವಾಮಿ]

Kumaraswamy got ‘second home’ in Hubballi, may contest in Dharwad Rural Constituency

ಧಾರವಾಡ ಗ್ರಾಮೀಣ ಕ್ಷೇತ್ರದತ್ತ ಕಣ್ಣು

ಕ್ಷೇತ್ರದ ಆಯ್ಕೆ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿರುವ ಮಾಜಿ ಮುಖ್ಯಮಂತ್ರಿ, ಗಣಿ ಮತ್ತು ಭೂ ವಿಜ್ಞಾನ ಖಾತೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಪ್ರತಿನಿಧಿಸುವ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದತ್ತ ಒಲವು ಹೊಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜೆಡಿಎಸ್ ಅಭ್ಯರ್ಥಿ ಅಮೃತ್ ದೇಸಾಯಿ ಶೇ 26.41 ರಷ್ಟು ಮತಗಳನ್ನು (35133) ಪಡೆದು ಎರಡನೇ ಸ್ಥಾನ ಪಡೆದಿದ್ದರು. ಕ್ಷೇತ್ರದಲ್ಲಿ ಪಕ್ಷದ ಬೇರು ಗಟ್ಟಿಯಾಗಿರುವುದು ಹಾಗೂ ಉತ್ತರ ಕರ್ನಾಟಕದ ಯಾವುದಾದರೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ತಾವು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿಲ್ಲ ಎಂದು ಬಿಂಬಿಸುವುದು ಕುಮಾರಸ್ವಾಮಿ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.[ಮೋದಿ ಸರಕಾರಕ್ಕೆ 3ವರ್ಷ: ಗೌಡ್ರು, ಕುಮಾರಣ್ಣ ನೀಡಿದ ಸರ್ಟಿಫಿಕೇಟ್]

ಅಲ್ಲದೆ ಅಮೃತ್ ದೇಸಾಯಿ ಈಗ ಪಕ್ಷ ತೊರೆದು ಬಿಜೆಪಿ ಸೇರಿರುವುದರಿಂದ ಆ ನಷ್ಟವನ್ನು ತುಂಬಲು ಈ ನಿರ್ಧಾರ ತಳೆದಿದ್ದಾರೆ. ಈ ಪಕ್ಷದ ನೆಲೆ ಇಲ್ಲದ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವ ಮೂಲಕ ಒಂದು ವೇಳೆ ಗೆದ್ದರೆ ಇದೇ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಅವರ ಮುಂದಿನ ಆಯ್ಕೆಯೂ ಆಗಿದೆ.

ಗೆಲುವಿಗಾಗಿ ತಯಾರಿ ಆರಂಭ

ಎಚ್‍ಡಿಕೆ ಗೆಲುವಿಗಾಗಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಒಳಗಿಂದೊಳಗೆ ಸಂಘಟನೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಕ್ಷೇತ್ರದ ಮತದಾರರ ವಿವಿರಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ಅವರು ಈಗಾಗಲೇ ಪಡೆದುಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.[ಕುಮಾರಸ್ವಾಮಿಗೆ ಹೆಚ್ಚಾದ ಆತ್ಮರತಿ: ಬಿಜೆಪಿ ನಾಯಕಿ ಲೇವಡಿ]

ಇನ್ನು ಮಹಿಳಾ ಸಂಘಗಳ ಮೂಲಕ ಮಹಿಳೆಯರನ್ನು ಸಂಘಟಿಸುವಲ್ಲಿ ಎಚ್‍ಡಿಕೆ ಆಪ್ತರು ಕ್ಷೇತ್ರದಲ್ಲಿ ಬಿಡು ಬಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಮಹಿಳಾ ಸಂಘಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರೇ ಇದಕ್ಕೆ ಸಾಕ್ಷಿಯಾಗಿದ್ದು, ಈ ಎಲ್ಲ ಬೆಳವಣಿಗೆಗಳು ಸಚಿವ ವಿನಯ್ ಕುಲಕರ್ಣಿ ಅವರ ನಿದ್ದೆಗೆಡಿಸಿದೆ.

ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿನಯ್ ಕುಲಕರ್ಣಿ ಅವರು ಈಗ ಸಂಪುಟ ದರ್ಜೆ ಸಚಿವರಾಗಿಯೂ ಇರುವುದರಿಂದ ಕ್ಷೇತ್ರ ತಮ್ಮ ಹಿಡಿತದಲ್ಲಿದೆ ಎಂದು ಆರಂಭದಿಂದ ಅಂದುಕೊಂಡಿದ್ದರು. ಆದರೆ, ಕುಮಾರಸ್ವಾಮಿ ಅವರ ಈ ಅನೀರಿಕ್ಷಿತ ನಡೆ ಮೂರನೇ ಬಾರಿಗೆ ವಿಧಾನಸಭೆ ಆಯ್ಕೆಯಾಗುವ ಅವರ ಕನಸಿಗೆ ಕೊಕ್ಕೆ ಹಾಕುವ ಸಾಧ್ಯತೆ ಇದೆ.

ಕಮರಿದ ಬಿಜೆಪಿ ಆಸೆ

ಎಚ್‍ಡಿಕೆ ನಡೆಯಿಂದ ಇತ್ತ ಬಿಜೆಪಿಯಲ್ಲಿಯೂ ಆಕಾಂಕ್ಷಿಗಳ ಆಸೆ ಕಮರತೊಡಗಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಅಮೃತ್ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ ಹಾಗೂ ಕೆಜೆಪಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯೂಡಿಯೂರಪ್ಪ ಅವರೊಂದಿಗೆ ಬಿಜೆಪಿಗೆ ಮರಳಿರುವ ಅಷ್ಟಗಿ ತವನಪ್ಪ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅಮೃತ್ ದೇಸಾಯಿ (ಶೇ 26.41) ಅಷ್ಟಗಿ ತವನಪ್ಪ (ಶೇ 16.23) ಹಾಗೂ ಬಿಜೆಪಿಯ ಸೀಮಾ ಮಸೂತಿ (ಶೇ 12.7) ಮತಗಳನ್ನು ಪಡೆದಿದ್ದು, ಟಿಕೆಟ್‍ಗಾಗಿ ಲಾಬಿ ನಡೆಸುತ್ತಿದ್ದರೂ ಕುಮಾರಸ್ವಾಮಿ ಎದುರು ಸ್ಪರ್ಧೆಗೆ ಹಿಂದೇಟು ಹಾಕುತ್ತಿರುವುದಂತೂ ಸತ್ಯ.

ಮುಂಬರುವ ಚುನಾವಣೆಯಲ್ಲಿ ಒಂದೊಮ್ಮೆ ಕುಮಾರಸ್ವಾಮಿ ಸ್ಪರ್ಧಿಸಿದರೆ ಜಾತ್ಯಾತೀತ ಮತಗಳ ವಿಭಜನೆಯಾಗುವ ಮೂಲಕ ಬಿಜೆಪಿಗೆ ಅನುಕೂಲವಾಗಲಿದೆಯೋ ಅಥವಾ ಬಲಿಷ್ಠ ಲಿಂಗಾಯತ ಸಮುದಾಯ ಜೆಡಿಎಸ್ ಬೆನ್ನಿಗೆ ಬೀಳುವುದೋ ಎಂಬ ಕುತೂಹಲ ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ಎಚ್ಡಿಕೆ ಸ್ಪರ್ಧಿಸಿದರೆ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+