ಕೊಲ್ಹಾಪುರ-ಕೆ.ಎಸ್.ಆರ್.ಬೆಂಗಳೂರು ರೈಲು ಸಂಚಾರ ರದ್ದು

ಹುಬ್ಬಳ್ಳಿ, ಜೂನ್ 14 : ಕೊಲ್ಹಾಪುರ-ಕೆ.ಎಸ್.ಆರ್.ಬೆಂಗಳೂರು ರೈಲು ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಜುಲೈ 6 ಮತ್ತು 7ರ ತನಕ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತೀಯ ರೈಲ್ವೆ ಈ ಕುರಿತು ಪ್ರಕಟಣೆ ಹೊರಡಿಸಿದೆ. ಜೋಡಿ ಮಾರ್ಗದ ಕಾಮಗಾರಿ ನಡೆಯುತ್ತಿರುವುದರಿಂದ ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದ್ದು, ಪ್ರಯಾಣಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ರೈಲುಗಳ ಸಂಖ್ಯೆ, ಭಾಗಶಃ ರದ್ದಾಗಿರುವ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಕೊಲ್ಹಾಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚಾರ ನಡೆಸುವ ಜನರು ಸಹಕಾರ ನೀಡಬೇಕು ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.

Kolhapur express train service partial cancellation

* ಕೆ.ಎಸ್.ಆರ್.ಬೆಂಗಳೂರು-ಕೊಲ್ಹಾಪುರ ಎಕ್ಸ್‌ಪ್ರೆಸ್ (16589) ಸಂಚಾರವನ್ನು ಜುಲೈ 6ರ ತನಕ ಮಿರಜ್ ಮತ್ತು ಕೊಲ್ಹಾಪುರದ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ರೈಲು ಮಿರಜ್‌ ತನಕ ಮಾತ್ರ ಸಂಚಾರ ನಡೆಸಲಿದೆ.

* ಕೊಲ್ಹಾಪುರ-ಕೆ.ಎಸ್.ಆರ್.ಬೆಂಗಳೂರು ಎಕ್ಸ್‌ಪ್ರೆಸ್ (16590) ಸಂಚಾರವನ್ನು ಜುಲೈ 7ರ ತನಕ ಕೊಲ್ಹಾಪುರ ಮತ್ತು ಮಿರಜ್ ನಡುವೆ ಭಾಗಶಃ ರದ್ದು ಮಾಡಲಾಗಿದೆ. ಈ ಅವಧಿಯಲ್ಲಿ ರೈಲು ಕೊಲ್ಹಾಪುರದ ಬದಲಾಗಿ ಮಿರಜ್‌ನಿಂದ ಸಂಚಾರ ಆರಂಭಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+