Karnataka election 2023: ಹಬ್ಬಳ್ಳಿಯಲ್ಲಿ 77 ವರ್ಷದ ಅಜ್ಜಿಯಿಂದ ಮತದಾನ
ಹುಬ್ಬಳ್ಳಿ, ಮೇ, 10: ವಿಧಾನಸಭಾ ಚುನಾವಣೆಯ ಮತದಾನ ಆರಂಭವಾಗಿದ್ದು, ಹಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೌಮ್ಯ ಅನ್ನುವವರು ಮೊದಲು ವೋಟ್ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಇನ್ನು ಮತ್ತೊಂದೆಡೆ ಕಡೆ ಬೆಳಂಬೆಳಗ್ಗೆ 77 ವರ್ಷದ ರಜನಿ ಎಂಬ ಹೆಸರಿನ ಅಜ್ಜಿ ಮತದಾನ ಮಾಡುವ ಮೂಲಕ ಗಮನ ಸೆಳಡದಿದ್ದಾರೆ.
ಮತಗಟ್ಟೆಗೆ ಬಂದ ಬೆಕ್ಕು
ಮತದಾರರು ಮತಗಟ್ಟೆಗಳಿಗೆ ಆಗಮಿಸುವುದು ಸಾಮಾನ್ಯ. ಆದರೆ ಹುಬ್ಬಳ್ಳಿಯಲ್ಲಿ ಮತದಾರರ ಜೊತೆಗೆ ಮತಗಟ್ಟೆಗೆ ಬೆಕ್ಕು ಬಂದಿರುವುದು ನಿಜಕ್ಕೂ ವಿಶೇಷವಾಗಿತ್ತು. ಮತದಾರರೊಂದಿಗೆ ಸರತಿಯಲ್ಲಿ ಕುರ್ಚಿ ಮೇಲೆ ಕುಳಿತ ಬೆಕ್ಕು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ. ಬೆಕ್ಕನ್ನು ನೋಡಿ ಮತಗಟ್ಟೆ ಸಿಬ್ಬಂದಿ ಅಚ್ಚರಿ ಆಗಿದ್ದಾರೆ. ದೂರ ಕಳುಹಿಸಲು ಎಷ್ಟೇ ಪ್ರಯತ್ನಿಸಿದರೂ ಬೆಕ್ಕು ಮಾತ್ರ ಕುರ್ಚಿ ಬಿಟ್ಟು ಹೋಗಲಿಲ್ಲ. ಇದೀಗ ಇದೇ ವಿಚಾರ ಕುತೂಹಲಕ್ಕೆ ಕಾರಣವಾಗಿದೆ.

ಮತದಾನ ಮಾಡಿದ 74 ವರ್ಷದ ವೃದ್ಧ
ಮತ್ತೊಂದೆಡೆ ಚಾಮರಾಜನಗರದ 74 ವರ್ಷದ ಮಧುಸೂಧನ್ ಎನ್ನುವ ಹೆಸರಿನ ವೃದ್ಧರೊಬ್ಬರು ನಡೆಯಲಾಗದೇ ವೀಲ್ ಚೇರ್‌ನಲ್ಲಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ.
ಚಾಮರಾಜನಗರದ ಹರ್ಷಿತಾ ಎಂಬ ಹೊಸ ವೋಟರ್ ಬೆಳಗ್ಗೆ 7 ಗಂಟೆಗೆ ಬಂದು ಮತದಾನ ಮಾಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಆದರೆ ಜಿಲ್ಲೆಯ ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಇವಿಎಂ ಕೈಕೊಟ್ಟಿದ್ದು, ಮತದಾರರು ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ.
ಮತ್ತೊಂದೆಡೆ ಉಪ್ಪಾರ ಬೀದಿಯ ಮತಗಟ್ಟೆ 69ರಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಇದರಿಂದ ಮತದಾನ ಕೆಲ ಕಾಲ ಸ್ಥಗಿತವಾಗಿದೆ. ಬಳಿಕ ಅಧಿಕಾರಿಗಳಿಂದ ಸರಿಪಡಿಸುವ ಕಾರ್ಯ ಪೂರ್ಣವಾಗಿದೆ. ಮತದಾನ ಅರ್ಧ ತಾಸು ತಡವಾದ್ದರಿಂದ ಮತ ಹಾಕಲು ಬಂದವರು ಅರ್ದ ಗಂಟೆ ಕಾದು ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲೆಯ ಉಳಿದೆಡೆ ಬಿರುಸಿನ ಮತದಾನ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications