ಗಂಡು ಮೆಟ್ಟಿದ ನಾಡಿನಲ್ಲಿ ಗಂಡು ಮಕ್ಕಳ ಹಬ್ಬ: ಝಗಮಗಿಸಿದ ಜಗ್ಗಲಗಿ ಸಂಭ್ರಮ

ಹುಬ್ಬಳ್ಳಿ, ಮಾರ್ಚ್ 10: ನಾಡಿನಾದ್ಯಂತ ಹೋಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇತ್ತ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಮುಂದಾದ ಹುಬ್ಬಳ್ಳಿ ಜನತೆ ಬಣ್ಣದೋಕುಳಿಯಲ್ಲಿ ಮಿಂದೇಳುವ ಮುನ್ನವೇ ವಾಣಿಜ್ಯ ನಗರಿಯಲ್ಲಿ ಜಗ್ಗಲಗಿ ಹಬ್ಬ ಸಂಭ್ರಮದಿಂದ ಜರುಗಿದೆ.

ಗಂಡು ಮೆಟ್ಟಿದ ನಾಡಿನಲ್ಲಿ ಗಂಡು ಮಕ್ಕಳ ಹಬ್ಬ ಎಂದೇ ಜಗ್ಗಲಗಿ ಹಬ್ಬ ವಿಶಿಷ್ಟತೆ ಪಡೆದುಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವು ಹೋಳಿ ಹಬ್ಬದ ಸಂಭ್ರಮ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿಶಿಷ್ಟ ರೀತಿಯಲ್ಲಿ ಆರಂಭವಾಗಿದೆ. ಹೋಳಿ ಹಬ್ಬದ ಪ್ರಯುಕ್ತವಾಗಿ ಆಯೋಜಿಸಲಾಗಿದ್ದ ಹುಬ್ಬಳ್ಳಿಯ ಜಗ್ಗಲಗಿ ಹಬ್ಬ ವಿನೂತನ ರೀತಿಯಲ್ಲಿ ಝಗಮಗಿಸಿತು.

Jaggalagi Festival Celebration In Hubballi

ಈ ವರ್ಷವೂ ಕೂಡ ಗಂಡುಮೆಟ್ಟಿನ ನಾಡು ಎಂದೆ ಖ್ಯಾತಿ ಪಡೆದ ಹುಬ್ಬಳ್ಳಿಯಲ್ಲಿ ಜಗ್ಗಲಿಗೆ ಹಬ್ಬವು ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. 2016ರಿಂದ ಪ್ರಾರಂಭಗೊಂಡಿರುವ ಜಗ್ಗಲಗಿ ಹಬ್ಬಕ್ಕೆ ಧಾರವಾಡ ಜಿಲ್ಲೆಯ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸಿ ಜಗ್ಗಲಗಿ ಹಬ್ಬಕ್ಕೆ ಮೆರುಗು ನೀಡಿದರು. ಮೂರು ಸಾವಿರ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಜಗ್ಗಲಗ್ಗಿ ಹಬ್ಬಕ್ಕೆ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ ಸ್ವಾಮೀಜಿಗಳು ಚಾಲನೆ ನೀಡಿದರು.

ಮೂರುಸಾವಿರ ಮಠದಿಂದ ಪ್ರಾರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಜಗ್ಗಲಗಿ ಹಬ್ಬ ವಿಶಿಷ್ಟ ರೀತಿಯಲ್ಲಿ ಜರುಗಿತು.ಇನ್ನೂ ಮೆರವಣಿಗೆ ಉದ್ದಕ್ಕೂ ಬ್ಯಾಹಟ್ಟಿ, ರಾಯನಾಳ, ಹುಬ್ಬಳ್ಳಿ, ಕುಸುಗಲ್, ಕಮಡೊಳ್ಳಿ, ಬೆಳಗಾವಿ ಜಿಲ್ಲೆಯ ಜಗ್ಗಲಗಿ ತಂಡದ ಮಹಿಳಾ ಹಾಗೂ ಪುರುಷ ಕಲಾವಿದರು ಕೂಡ ತಮ್ಮ ಜಗ್ಗಲಗಿ ಹಾಗೂ ಹಲಿಗೆ ವಾದನದಿಂದ ಜಗ್ಗಲಗಿ ಹಬ್ಬದ ಕಳೆಯನ್ನು ಚಿಗುರೊಡೆಯುವಂತೆ ಮಾಡಿದ್ದು, ಸಾರ್ವಜನಿಕರನ್ನು ಮನಸೂರೆಗೊಳ್ಳುವಂತೆ ಮಾಡಿತು.

Jaggalagi Festival Celebration In Hubballi

ಮೆರವಣಿಗೆಯುದ್ದಕ್ಕೂ ಕಲಾವಿದರು ತಾಳಬದ್ದವಾಗಿ ಹಲಗೆ ಬಾರಿಸುತ್ತಾ ಕುಣಿದು ಸಂಭ್ರಮಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಕನ್ನಡ ನಾಡಿನ ಕಲೆಯನ್ನು ಕಣ್ತುಂಬಿಕೊಂಡರು, ಹಾನಗಲ್ಲಿನ ಬೇಡರ ವೇಷ ತಂಡ ಎಲ್ಲರ ಗಮನ‌ ಸೆಳೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಹಾವೇರಿ ಹುಕ್ಕೇರಿ ಮಠದ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ ಸ್ವಾಮೀಜಿಯವರು, ಹುಬ್ಬಳ್ಳಿಯ ಜಗ್ಗಲಗಿ ಹಬ್ಬ ಜಗತ್ತಿನಾದ್ಯಂತ ಝಗಮಗಿಸಲಿ ಹುಬ್ಬಳ್ಳಿ ಜಗ್ಗಲಗಿ ಹಬ್ಬ ಕರ್ನಾಟಕದ ರಾಜ್ಯದ ಹಬ್ಬವಾಗಲಿ ಎಂದು ಆಶಿಸಿದರೆ, ಹುಬ್ಬಳ್ಳಿಯಲ್ಲಿ ಇಂದು ನಡೆಯುವ ಬಣ್ಣದೊಕುಳಿಗೆ ಜಗ್ಗಲಿಗಿ ಹಬ್ಬ ಕಿಕ್ಕೇರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+