ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ಸಜ್ಜಾದ ಇಸ್ಮಾಯಿಲ್ ತಮಟಗಾರ
ಧಾರವಾಡ, ಏಪ್ರಿಲ್ 5: ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಪ್ರಸಕ್ತ ವರ್ಷ ಅಚ್ಚರಿ ಮೇಲೆ ಅಚ್ಚರಿಗಳಿಗೆ ಕಾರಣವಾಗುತ್ತಿದೆ. ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ನಲ್ಲಿ ಇಬ್ಬರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿತ್ತು.
ಇದೇ ಕ್ಷೇತ್ರವನ್ನು ಪ್ರತಿನಿಧಿಸಿ ಶಾಸಕರಾಗಿ ಸಚಿವರೂ ಆಗಿದ್ದ ಇದೀಗ ಧಾರವಾಡ ಜಿಲ್ಲೆಯಿಂದ ಹೊರಗಿರುವ ವಿನಯ್ ಕುಲಕರ್ಣಿ 2023ರ ವಿಧಾನಸಭಾ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಪಕ್ಕಾ ಎನ್ನುವಂತಾಗಿದೆ. ಆದರೆ ಇದರಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಇಸ್ಮಾಯಿಲ್ ತಮಟಗಾರಗೆ ನಿರಾಸೆಯುಂಟಾಗಿದ್ದು, ಅವರು ಮರಳಿ ಜೆಡಿಎಸ್ ಸೇರ್ಪಡೆಗೊಂಡು ಇದೇ ಕ್ಷೇತ್ರದಿಂದ ಸ್ಪರ್ಧೆ ನಡೆಸಲು ಮುಂದಾಗಿದ್ದಾರೆ.

ಇಸ್ಮಾಯಿಲ್ ತಮಟಗಾರ ಕಳೆದ ಎರಡು ವರ್ಷಗಳಿಂದ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟು ಓಡಾಡಿ ಗುರುತಿಸಿಕೊಂಡಿದ್ದಾರೆ. ವಿನಯ್ ಕುಲಕರ್ಣಿ ಧಾರವಾಡ ಜಿಲ್ಲೆಯಿಂದ ಹೊರಗಿರುವುದರಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಈ ಬಾರಿ ತಮಗೆ ಸಿಗಬಹುದು ಎನ್ನುವ ಹುಮ್ಮಸ್ಸಿನಲ್ಲಿ ಇಸ್ಮಾಯಿಲ್ ಇದ್ದರು. ಆದರೆ, ಟಿಕೆಟ್ ವಿನಯ್ ಅವರಿಗೆ ಬಹುತೇಕ ಖಚಿತವಾಗಿದ್ದರಿಂದ ದೆಹಲಿಯಿಂದ ಇಸ್ಮಾಯಿಲ್ ಬರಿಗೈಯಲ್ಲಿ ಬರುವುದರ ಜೊತೆಗೆ ಕಾಂಗ್ರೆಸ್‌ಗೆ ಭಾರೀ ಶಾಕ್ ನೀಡಿದ್ದಾರೆ.
ಆರು ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ 8 ಜನ ಸದಸ್ಯರೊಂದಿಗೆ ಇಸ್ಮಾಯಿಲ್ ಮರಳಿ ಜೆಡಿಎಸ್‌ಗೆ ಸೇರ್ಪಡೆಗೊಳ್ಳುತ್ತಿರುವುದರಿಂದ ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿದ್ದಾರೆ. ಅಲ್ಲದೇ ಜೆಡಿಎಸ್‌ನಿಂದ ಇಸ್ಮಾಯಿಲ್ ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಮತದಾರರ ಸಂಪೂರ್ಣ ಮಾಹಿತಿ
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಮತದಾರರ ಬಗ್ಗೆ ಕ್ಷೇತ್ರದ ಚುನಾವಣಾ ಅಧಿಕಾರಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲ ಕೃಷ್ಣ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಏಪ್ರಿಲ್ 13 ರಂದು ನಾಮ ಪತ್ರ ಸಲ್ಲಿಕೆ ದಿನ ಆರಂಭ, ಏಪ್ರಿಲ್ 20 ಕೊನೆಯ ದಿನಾಂಕವಾಗಿದೆ. ನಾಮ ಪತ್ರ ಪರಿಶೀಲನೆ ಏಪ್ರಿಲ್ 21 ಕ್ಕೆ. ನಾಮ ಪತ್ರ ಹಿಂಪಡೆಯುವ ಕೊನೆಯ ದಿನಾಂಕ ಏಪ್ರಿಲ್ 24 ಇವುಗಳು ಚುನಾವಣೆಯ ನಿಯಮಗಳು ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಚುನಾವಣಾ ತಿಳಿಸಿದರು.
ಮಾಹಿತಿ ಮುಂದುವರಿಸಿದ ಡಾ. ಗೋಪಾಲ ಕೃಷ್ಣ ಮೇ 10 ರಂದು ಮತದಾನ ನಡೆಯುತ್ತದೆ. ಮೇ 13 ರಂದು ಮತ ಏಣಿಕೆ ನಡೆಯುತ್ತದೆ. ಮೇ 15ರಂದು ಚುನಾವಣಾ ಪ್ರಕ್ರಿಯೆ ಅಂತ್ಯಗೊಳ್ಳುತ್ತದೆ ಎಂದರು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಮತ ಕ್ಷೇತ್ರದಲ್ಲಿ 2,46,177 ಮತದಾರರಿದ್ದಾರೆ. ಈ ಮತಗಳಲ್ಲಿ 1, 21,927 ಪುರುಷ ಮತದಾರರು, 1,24,063 ಮಹಿಳಾ ಮತದಾರರು, ಹಾಗೂ ಇತರೆ 38 ಜನರಿದ್ದಾರೆ. ಪುರುಷ ಸೇವಾ ಮತದಾರರು 79 ಜನರಿದ್ದಾರೆ. ಮಹಿಳಾ ಸೇವಾ ಮತದಾರರು 8 ಜನರಿದ್ದಾರೆ. ಇನ್ನು ಏಪ್ರಿಲ್ 1ರ ಬಳಿಕ ಯಾರಿಗೆ 18 ವರ್ಷ ಆಗುತ್ತದೆಯೋ ಅವರನ್ನು ಕೂಡ ಮತದಾರರ ಪಟ್ಟಿಗೆ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದರು.











Click it and Unblock the Notifications