ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಯೋಗದಿನದ ಸಂಭ್ರಮ

ಹುಬ್ಬಳ್ಳಿ, ಜೂನ್ 21: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಎಲ್ಲೆಲ್ಲೂ ಯೋಗಾಚರಣೆ ಮಾಡುತ್ತಿರುವ ಜನರು ಕಂಡುಬಂದರು. ಹುಬ್ಬಳ್ಳಿಯ ಇಂದಿರಾ ಗಾಂಧಿ ಗ್ಲಾಸ್ ಹೌಸ್ ನಲ್ಲಿ, ಯೋಗ ಸ್ಪರ್ಶಿ ಪ್ರತಿಷ್ಠಾನ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಯಿಂದ ಯೋಗ ದಿನ ಆಚರಣೆಗೊಂಡಿತ್ತು. ಹಲವಾರು ಜನ ಯೋಗಾಸನಗಳನ್ನು ಮಾಡುವ ಮೂಲಕ ಯೋಗ ದಿನ ಆಚರಿಸಿದರು.

International Yoga Day in Hubballi

ಹುಬ್ಬಳ್ಳಿಯ ವಿವಿಧೆಡೆಗಳಲ್ಲಿ ಯೋಗದಿನ ನಡೆದಿದ್ದು, ಇಲ್ಲಿನ ಗುಜರಾತ್ ಭವನದಲ್ಲಿ ಆಯೋಜಿಸಿದ್ದ ಯೋಗ ದಿನ ಕಾರ್ಯಕ್ರಮದಲ್ಲಿ ಸಂಸದ ಪ್ರಹ್ಲಾದ್ ಜೋಶಿ ಯೋಗ ಸಾಧನೆಯಲ್ಲಿ ತಲ್ಲೀನರಾದರು. ಕೆಎಲ್ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ ನಲ್ಲಿಯೂ ಬೃಹತ್ ಯೋಗದಿನಾಚರಣೆ ನಡೆಯಿತು.

International Yoga Day in Hubballi

ಯೋಗ ಪ್ರಿಯರು ವಿವಿಧ ಆಸನಗಳನ್ನು ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಮುನ್ನುಡಿ ಬರೆದರು. ಹಾವೇರಿ, ಗದಗ ಹಾಗೂ ಕಾರವಾರದಲ್ಲಿಯೂ ಯೋಗ ದಿನ ಸಂಭ್ರಮದಿಂದ ಆಚರಣೆಗೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+