Breaking; ಹುಬ್ಬಳ್ಳಿ-ದೆಹಲಿ ನೇರ ವಿಮಾನ ಆರಂಭ, ವೇಳಾಪಟ್ಟಿ

ಹುಬ್ಬಳ್ಳಿ, ಅಕ್ಟೋಬರ್ 12; ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ. ಹುಬ್ಬಳ್ಳಿ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿ ನಡುವೆ ನೇರ ವಿಮಾನ ಸೇವೆ ಆರಂಭವಾಗಲಿದೆ. ವಾರಕ್ಕೊಮ್ಮೆ ಸಂಚಾರ ನಡೆಸುವ ಹುಬ್ಬಳ್ಳಿ-ದೆಹಲಿ (ನಿಜಾಮುದ್ದೀನ್) ರೈಲಿಗೆ ಮಂಗಳವಾರ ಚಾಲನೆ ಸಿಕ್ಕಿದೆ.

ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ವಿಮಾನ ಸೇವೆ ಆರಂಭದದ ಕುರಿತು ಫೇಸ್‌ಬುಕ್ ಮೂಲಕ ಮಾಹಿತಿ ನೀಡಿದ್ದಾರೆ. ನವೆಂಬರ್ 14, 2022ರಿಂದ ಹುಬ್ಬಳ್ಳಿ-ದೆಹಲಿ ನಡುವೆ ನೇರ ವಿಮಾನ ಆರಂಭವಾಗಲಿದೆ ಎಂದು ಹೇಳಿದ್ದಾರೆ.

Indigo To Start Hubballi New Delhi Daily Flight From November 14

ಹುಬ್ಬಳ್ಳಿ-ಧಾರವಾಡದ ಜನರಿಗೆ ಸಿಹಿಸುದ್ದಿ. ನಮ್ಮ ಮನವಿ, ಚರ್ಚೆಗಳ ಬಳಿಕ ಇಂಡಿಗೋ ಏರ್‌ಲೈನ್‌ ಪ್ರತಿದಿನ ಹುಬ್ಬಳ್ಳಿ-ದೆಹಲಿ ನಡುವೆ ನೇರ ವಿಮಾನ ಸೇವೆ ಒದಗಿಸಲು ಒಪ್ಪಿಗೆ ಕೊಟ್ಟಿದೆ. ಬುಕ್ಕಿಂಗ್ ಈಗಾಗಲೇ ಓಪನ್ ಆಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ವೇಳಾಪಟ್ಟಿ; ವಿಮಾನ ಸಂಖ್ಯೆ 6ಇ, 5625 ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ. ದೆಹಲಿ-ಹುಬ್ಬಳ್ಳಿ ವಿಮಾನ 10 ಗಂಟೆಗೆ ದೆಹಲಿಯಿಂದ ಹೊರಡಲಿದ್ದು, 12.45ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಹುಬ್ಬಳ್ಳಿ-ದೆಹಲಿ ವಿಮಾನ ಹುಬ್ಬಳ್ಳಿಯಿಂದ 13:15ಕ್ಕೆ ಹೊರಡಲಿದ್ದು, 15:45ಕ್ಕೆ ದೆಹಲಿಗೆ ತಲುಪಲಿದೆ.

ರೈಲು ಸಂಚಾರಕ್ಕೆ ಚಾಲನೆ; ಹುಬ್ಬಳ್ಳಿ-ದೆಹಲಿ (ನಿಜಾಮುದ್ದೀನ್) ರೈಲಿಗೆ ಮಂಗಳವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಪ್ರಹ್ಲಾದ್ ಜೋಶಿ ಹಸಿರು ನಿಶಾನೆ ತೋರಿಸಿದ್ದಾರೆ. ಸದ್ಯ ವಾರಕ್ಕೆ ಒಂದು ಬಾರಿ ಈ ರೈಲು ಓಡಲಿದೆ.

ಹುಬ್ಬಳ್ಳಿ ಭಾಗದ ಜನರ ಬಹು ದಿನಗಳ ಬೇಡಿಕೆಗೆ ರೈಲ್ವೆ ಇಲಾಖೆ ಸ್ಪಂದಿಸಿದ್ದು, ಉತ್ತರ ಕರ್ನಾಟಕ ಮತ್ತು ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕ ಸಾಧ್ಯವಾಗಿದೆ. ರೈಲು ಸಂಖ್ಯೆ 20657/ 20658 ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ಪ್ರತಿ ಶುಕ್ರವಾರ ರಾತ್ರಿ 11.50ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು ಭಾನುವಾರ ಬೆಳಗ್ಗೆ 10.40ಕ್ಕೆ ನಿಜಾಮುದ್ದೀನ್ ತಲುಪಲಿದೆ. ಈ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಿ, ಪ್ರತಿದಿನ ರೈಲನ್ನಾಗಿ ಪರಿವರ್ತನೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+