ಹುಬ್ಬಳ್ಳಿ-ಮುಂಬೈ ನಡುವೆ ಸೆ. 19ರಿಂದ ಇಂಡಿಗೋ ಹಾರಾಟ

ಹುಬ್ಬಳ್ಳಿ, ಸೆಪ್ಟೆಂಬರ್ 11: ಇಂಡಿಗೋ ಉತ್ತರ ಕರ್ನಾಟಕ ಮತ್ತು ಮುಂಬೈ ನಡುವೆ ವಿಮಾನ ಸಂಪರ್ಕ ಕಲ್ಪಿಸಲಿದೆ. ಹುಬ್ಬಳ್ಳಿ-ಮುಂಬೈ ನಡುವೆ ವಿಮಾನ ಸೇವೆ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ.

ಕೇಂದ್ರ ಸಚಿವ ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಈ ಕುರಿತು ಮಾಹಿತಿ ನೀಡಿದ್ದಾರೆ. ವಾರದಲ್ಲಿ ಮೂರು ದಿನಗಳ ಕಾಲ ಹುಬ್ಬಳ್ಳಿ-ಮುಂಬೈ ವಿಮಾನ ಹಾರಾಟ ನಡೆಸಲಿದೆ.

ಮಂಗಳವಾರ, ಗುರುವಾರ ಮತ್ತು ಶನಿವಾರ ಈ ವಿಮಾನ ಹಾರಾಟ ನಡೆಸಲಿದೆ. "ಈ ವಿಮಾನ ಸೇವೆಯಿಂದಾಗಿ ಉತ್ತರ ಕರ್ನಾಟಕ ಮತ್ತು ವಾಣಿಜ್ಯ ನಗರಿ ಮುಂಬೈಗೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ" ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

IndiGo To Start Hubballi Mumbai Flights From September 19

ವೇಳಾಪಟ್ಟಿ : ವಾರದಲ್ಲಿ ಮೂರು ದಿನಗಳ ಕಾಲ ಮುಂಬೈನಿಂದ ಬೆಳಗ್ಗೆ 6.
35ಕ್ಕೆ ಹೊರಡುವ ವಿಮಾನ 8 ಗಂಟೆಗೆ ಹುಬ್ಬಳ್ಳಿಗೆ ಬರಲಿದೆ. ಹುಬ್ಬಳ್ಳಿಯಿಂದ 8.40ಕ್ಕೆ ಹೊರಡುವ ವಿಮಾನ 10.5ಕ್ಕೆ ಮುಂಬೈ ತಲುಪಲಿದೆ.

ಇಂಡಿಗೋ ಈಗಾಗಲೇ ಬೆಂಗಳೂರಿನಿಂದ ಅಹಮದಾಬಾದ್, ಕಣ್ಣೂರು, ಚೆನ್ನೈ, ಕೊಚ್ಚಿ ಮುಂತಾದ ನಗರಗಳಿಗೆ ವಿಮಾನ ಸೇವೆಯನ್ನು ಒದಗಿಸುತ್ತಿದೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿಗೆ ವಿಮಾನ ಸೇವೆ ಆರಂಭಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+