ಹುಬ್ಬಳ್ಳಿ-ಮುಂಬೈ ನಡುವೆ ಇಂಡಿಗೋ ಏರ್‌ಬಸ್‌ ಸಂಚಾರ, ವೇಳಾಪಟ್ಟಿ

ಹುಬ್ಬಳ್ಳಿ, ಅಕ್ಟೋಬರ್ 29: ಉತ್ತರ ಕರ್ನಾಟಕ ಭಾಗದ ವಿಮಾನಯಾನ ಸೇವೆಗೆ ಭಾನುವಾರದಿಂದ ಹೊಸ ಸೇರ್ಪಡೆ ಇಂಡಿಗೋ ಏರ್‌ ಬಸ್. ಪ್ರಯಾಣಿಕರ ಬೇಡಿಕೆಯಂತೆ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ 186 ಸೀಟುಗಳು ಏರ್ ಬಸ್ ಸಂಚಾರ ಇಂದಿನಿಂದ ಆರಂಭವಾಗುತ್ತಿದೆ.

ಕೇಂದ್ರ ಸಚಿವ, ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಈ ಕುರಿತು ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ. 'ಛೋಟಾ ಮುಂಬೈ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಿಂದ ಮುಂಬೈಗೆ ತೆರಳುವ ಪ್ರಯಾಣಿಕರ ಪ್ರಯಾಣ ಇನ್ನು ಮುಂದೆ ಸುಖಕರವಾಗಲಿದೆ. ಇಂಡಿಗೋ ಸಂಸ್ಥೆಗೆ ಧನ್ಯವಾದಗಳು' ಎಂದು ಸಂಸದರು ಹೇಳಿದ್ದಾರೆ.

Indigo 186 Seater Airbus Service Between Hubballi And Mumbai

ಪ್ರಹ್ಲಾದ್ ಜೋಶಿ ಪೋಸ್ಟ್‌ನಲ್ಲಿ, 'ಹುಬ್ಬಳ್ಳಿಯಿಂದ ಮುಂಬೈಗೆ ಈ‌ ಹಿಂದೆ ATR ವಿಮಾನ ಸಂಚರಿಸುತ್ತಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 186 ಆಸನಗಳ ವ್ಯವಸ್ಥೆ ಇರುವ ವಿಮಾನ ಆರಂಭಿಸುವಂತೆ ಇಂಡಿಗೋ ಸಂಸ್ಥೆಗೆ ವಿನಂತಿಸಿದ್ದು, ನಮ್ಮ ವಿನಂತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಡಿಗೋ ಸಂಸ್ಥೆ ನೂತನ ವಿಮಾನಸೇವೆ ಆರಂಭಿಸಿದೆ' ಎಂದು ತಿಳಿಸಿದ್ದಾರೆ.

ವೇಳಾಪಟ್ಟಿಯ ಮಾಹಿತಿ; ಭಾನುವಾರದಿಂದ ಮುಂಬೈ-ಹುಬ್ಬಳ್ಳಿ ನಡುವೆ ಇಂಡಿಗೋ ಸಂಸ್ಥೆಯ ಏರ್ ಬಸ್ ಸೇವೆ ಆರಂಭವಾಗುತ್ತಿದೆ. ಮುಂಬೈ-ಹುಬ್ಬಳ್ಳಿ (6E 936) ವಿಮಾನ ಮುಂಬೈನಿಂದ ನಿರ್ಗಮನ 12 ಗಂಟೆ. ಹುಬ್ಬಳ್ಳಿಗೆ ಆಗಮನ ಮಧ್ಯಾಹ್ನ 1:15. ಹುಬ್ಬಳ್ಳಿ-ಮುಂಬೈ (6E 937) ವಿಮಾನ ಹುಬ್ಬಳ್ಳಿಯಿಂದ ನಿರ್ಗಮನ ಮಧ್ಯಾಹ್ನ 1:45. ಮುಂಬೈ ತಲುಪುವುದು ಮಧ್ಯಾಹ್ನ 2:40.

ಇಂಡಿಗೋ ಸಂಸ್ಥೆಯ ಏರ್‌ಬಸ್ ಸೇವೆಯಿಂದಾಗಿ ಹುಬ್ಬಳ್ಳಿ-ಮುಂಬೈ ನಡುವಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕರ್ನಾಟಕದ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಹುಬ್ಬಳ್ಳಿಗೆ ವಿಮಾನದ ಮೂಲಕ ಸಂಚಾರ ನಡೆಸುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ವಾಣಿಜ್ಯ, ಪ್ರವಾಸೋದ್ಯಮಕ್ಕಾಗಿ ಹುಬಳ್ಳಿಯಿಂದ ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಹಲವಾರು ಜನರು ಸಂಚಾರ ನಡೆಸುತ್ತಾರೆ.

ಎಟಿಆರ್ ಮಾದರಿ ವಿಮಾನಕ್ಕಿಂತ ಹೆಚ್ಚಿನ ಜನರು ಏರ್‌ಬಸ್‌ನಲ್ಲಿ ಸಂಚಾರ ನಡೆಸಬಹುದು. ಅಲ್ಲದೇ ಪ್ರಯಾಣವೂ ಸಹ ಆರಾಮದಾಯಕವಾಗಿರುತ್ತದೆ. ಹುಬ್ಬಳ್ಳಿ-ಮುಂಬೈ ನಡುವೆ ಪ್ರತಿದಿನ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಇಂಡಿಗೋ ಏರ್‌ಬಸ್ ಸೇವೆಯನ್ನು ಆರಂಭಿಸಿದೆ.

ರಾಜ್ಯದ ಹೆಚ್ಚು ಪ್ರಯಾಣಿಕ ದಟ್ಟಣೆಯ ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ಸಹ ಒಂದಾಗಿದೆ. ಈಗಾಗಲೇ 260 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. 24 ತಿಂಗಳಿನಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊಸ ಟರ್ಮಿನಲ್ ನೀಲನಕ್ಷೆ ತಯಾರಿ ಮಾಡಿ, ದೇಶಿಯ ವಿಮಾನ ಸೇವೆಗೆ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. 2024ರಲ್ಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ.

ಈಗಿರುವ ಹಳೆಯ ಟರ್ಮಿನಲ್ ಕಟ್ಟಡದ ಪಕ್ಕದಲ್ಲಿಯೇ ಹೊಸ ಟರ್ಮಿನಲ್ ನಿರ್ಮಾಣವಾಗಲಿದೆ. ನೆಲ ಮತ್ತು ಮೊದಲ ಮಹಡಿ ಸೇರಿ 20 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣಗೊಳ್ಳಲಿದೆ. ಬಳಿಕ ಪ್ರಯಾಣಿಕರ ದಟ್ಟಣೆಯ ಸಮಯದಲ್ಲಿ 1200 ಜನರು ಆಗಮನ, 1200 ಜನರ ನಿರ್ಗಮದ ವ್ಯವಸ್ಥೆ ಆಗಲಿದೆ.

ಪ್ರಸ್ತುತ ಇರುವ ಟರ್ಮಿನಲ್ 300 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಹೊಸ ಟರ್ಮಿನಲ್‌ನಿಂದ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಸುಮಾರು 8 ಪಟ್ಟು ಅಧಿಕವಾಗಲಿದೆ ಎಂದು ಅಂದಾಜಿಸಲಾಗಿದೆ. ವಾಣಿಜ್ಯ ವಹಿವಾಟು, ಶಿಕ್ಷಣ, ಆರೋಗ್ಯ ಹೀಗೆ ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸುವ ಜನರಿಗೆ ಹುಬ್ಬಳ್ಳಿ ಪ್ರಮುಖ ಕೇಂದ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+