ಇಂಡಿಯಾ ಬುಕ್ ಆಫ್ ರೆಕಾರ್ಡ್‌: ಹುಬ್ಬಳ್ಳಿ ಬಾಲಕಿಯ ಅಸಮಾನ್ಯ ಸಾಧನೆ

ಹುಬ್ಬಳ್ಳಿ, ಜುಲೈ 08: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುವಂತ ಮಾತು ಅಕ್ಷರಶಃ ಸತ್ಯ. ಬೆಳೆಯುವ ಪ್ರತಿಭೆಗೆ ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು ಎಂಬುವಂತೆ. ಹುಬ್ಬಳ್ಳಿ ಬಾಲಕಿಯೊಬ್ಬಳು ವಯಸ್ಸಿಗೂ ಮೀರಿದ ಸಾಧನೆ ಮಾಡುವ ಮೂಲಕ ರಾಜ್ಯದ ಜನರ ಹುಬ್ಬೇರುವಂತೆ ಮಾಡಿದ್ದಾರೆ. ಆರನೇ ವಯಸ್ಸಿನಲ್ಲಿಯೇ ಅಗಾಧವಾದ ಜ್ಞಾನ ಹೊಂದಿರುವ ಹುಬ್ಬಳ್ಳಿಯ ಹುಡುಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದ್ದಾಳೆ.

ಹೀಗೆ ಸಾಲು ಸಾಲು ನೂರಾರು ಪ್ರಶ್ನೆಗಳಿಗೆ ಅಳ್ಳು ಹುರಿದಂತೆ ಉತ್ತರ ಕೊಡುತ್ತಿರುವ ಈಕೆ ವಿಶ್ವಕೀರ್ತಿ ಗಣೇಶ ಕಾಂಬಳೆ. ಆರು ವರ್ಷದ ಈ ಬಾಲಕಿ ನೂರಾರು ಸಾಮಾನ್ಯ ಜ್ಞಾನ, ವಿಜ್ಞಾನ, ಗಣಿತ, ಸಮಾಜಶಾಸ್ತ್ರದ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ.

India Book Of Records: Hubballi Girls Extraordinary Achievement

ಹುಬ್ಬಳ್ಳಿಯ ವಿದ್ಯಾನಗರ ನೇಕಾರ ಕಾಲೋನಿಯ ನಿವಾಸಿಯಾಗಿರುವ ಗಣೇಶ ಕಾಂಬಳೆ ಹಾಗೂ ಶಿಲ್ಪಾ ಕಾಂಬಳೆಯವರ ಮಗಳು. ಈಗ ತಾನೇ ಒಂದನೇ ಕ್ಲಾಸ್ ಮೆಟ್ಟಿಲು ಏರಬೇಕಿರುವ ಬಾಲಕಿ ತನ್ನಲ್ಲಿರುವ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಾಧನೆ ಮಾಡಿ ಹೆತ್ತವರಿಗೆ ಮಾತ್ರವಲ್ಲದೆ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

ಇನ್ನೂ ಒಂದನೇ ವರ್ಷದವಳಿದ್ದಾಗಲೇ ಓದುವ ಆಸಕ್ತಿಯನ್ನು ಗಮನಿಸಿದ ಹೆತ್ತವರು ಸೂಕ್ತ ತರಬೇತಿ ನೀಡುವ ಮೂಲಕ ಬಾಲಕಿಯ ಪ್ರತಿಭೆ ಅನಾವರಣಕ್ಕೆ ಮುಂದಾಗಿದ್ದಾರೆ. ಸುಮಾರು 300 ಜನರಲ್ ನಾಲೆಡ್ಜ್ ಪ್ರಶ್ನೆಗಳಿಗೆ ಉತ್ತರಿಸುವ ಈಕೆ, 3 ನಿಮಿಷ 41 ಸೆಕೆಂಡ್‌ನಲ್ಲಿ ಒಂದು ನೂರು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಾಧನೆ ಮಾಡಿದ್ದಾಳೆ.

30 ಶ್ಲೋಕಗಳನ್ನು ನಿರರ್ಗಳವಾಗಿ ಹೇಳುವ ಬಾಲಕಿ, ವಿಶ್ವಕ್ಕೆ ಸಂಬಂಧಪಟ್ಟ, ಸಮಾಜಶಾಸ್ತ್ರ, ವಿಜ್ಞಾನ ಸಂಕೇತ, ಕನ್ನಡ ವ್ಯಾಕರಣದಲ್ಲಿಯೂ ಕೂಡ ಪರಿಣಿತಿ ಹೊಂದಿರುವುದು ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದು, ಹೆತ್ತವರ ಖುಷಿಯನ್ನು ಇಮ್ಮಡಿಗೊಳಿಸಿದೆ.

India Book Of Records: Hubballi Girls Extraordinary Achievement

ಒಟ್ಟಿನಲ್ಲಿ ವಿಶ್ವಕೀರ್ತಿಯ ಸಾಧನೆಗೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ತೊದಲು ನುಡಿಯಲ್ಲಿಯೇ ಐಎಎಸ್ ಕನಸನ್ನು ಕಂಡಿರುವ ಬಾಲ ಪ್ರತಿಭೆ ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿರುವುದು ವಿಶೇಷವಾಗಿದೆ. ಯಾವುದೇ ವಿಷಯವಿದ್ದರೂ ಓದಬೇಕು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಹೆಬ್ಬಯಕೆ ಹೊಂದಿರುವ ಬಾಲಕಿಯ ಕೀರ್ತಿ ಜಗತ್ತಿನಾದ್ಯಂತ ವ್ಯಾಪಿಸಲಿ ಎನ್ನುವುದು ಎಲ್ಲರ ಆಶಯ.

ಹುಲಾ ಹೂಪ್ಸ್‌ನಲ್ಲಿ ವರ್ಲ್ಡ್ ರೆಕಾರ್ಡ್ ಮಾಡಿದ ಹುಬ್ಬಳ್ಳಿ ಪೋರಿ ಸಮೃದ್ಧಿ ಪಾಟೀಲ್ ಸಾಧನೆಗೆ ಸಾವಿರಾರು ದಾರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆ ಹಾದಿಯಲ್ಲಿ ಎಷ್ಟೊಂದು ಕಷ್ಟ ಇರುತ್ತದೆ ಎನ್ನುವುದು ಆ ಸಾಧನೆ ಮಾಡಿದವರಿಗೆ ಗೊತ್ತಿರುತ್ತದೆ. ಅಂತಹ ಸಾಧನೆಯನ್ನು ಹುಬ್ಬಳ್ಳಿ ಬಾಲಕಿಯೊಬ್ಬಳು ಮಾಡಿ ತೋರಿಸಿದ್ದಾಳೆ.

ಸಾಧನೆ ಮಾಡಿರುವ ಈ ಪುಟ್ಟ ಬಾಲಕಿಯ ಹೆಸರು ಸಮೃದ್ಧಿ ಪಾಟೀಲ, ಹುಬ್ಳಳ್ಳಿಯ ಬನಶಂಕರಿ ಬಡವಾಣಿ ನಿವಾಸಿ ಸುಜಾತಾ ಪಾಟೀಲ ಅವರ ಮುದ್ದಿನ ಮಗಳು. ಪೋಷಕರು ಆಕೆಯನ್ನು ಮುದ್ದಾಗಿ ಸಾಕುವುದದರ ಜೊತೆ ಆ ಬಾಲಕಿ ಏನಾದರೂ ಸಾಧನೆ ಮಾಡಲಿ ಎಂಬುದು ಅವರ ಕನಸಾಗಿತ್ತು. ಅದೇ ರೀತಿ ಲಂಡನ್ ಸಿಟಿಯಲ್ಲಿ ಹಮ್ಮಿಕೊಂಡಿದ್ದ ಹುಲಾ ಹೂಪ್ಸ್ ಗೇಮ್‌ನಲ್ಲಿ ಕೇವಲ ಒಂದು ನಿಮಿಷದಲ್ಲಿ ಬರೊಬ್ಬರಿ 198 ಬಾರಿ ರೊಟೇಟ್ ಮಾಡಿ ವರ್ಲ್ಡ್ ರಿಕಾರ್ಡ್ ಮಾಡಿದ್ದಾಳೆ. ಈ ಪುಟ್ಟ ಬಾಲಕಿಯ ಸಾಧನೆಗೆ ಭಾರತದ ಛಾತ್ರ ರತ್ನ ಪ್ರಶಸ್ತಿ ಕೂಡ ದೊರೆತಿದೆ.

ಇನ್ನು ಮಕ್ಕಳು ಏನಾದರೂ ಒಂದು ಸಾಧನೆ ಮಾಡಬೇಕು ಅಂದರೆ ಅವರಿಗೆ ಪ್ರೋತ್ಸಾಹ ಮುಖ್ಯ. ಅದರಂತೆ ಸುಜಾತ ಅವರು ತಮ್ಮ ಮಗಳಿಗೆ ಉತ್ತಮ ಶಿಕ್ಷಣ ಜೊತೆಗೆ ಕ್ರೀಡೆ ಬಗ್ಗೆ ಒಲವು ಮೂಡಿಸಿದ್ದು ಹೆಮ್ಮೆಯ ಸಂಗತಿ. ಸಮೃದ್ಧಿ ಹಾಡು, ಡ್ಯಾನ್ಸ್, ಡ್ರಾಯಿಂಗ್, ಕ್ರಾಪ್ಟ್ ಹೀಗೆ ಮಲ್ಟಿ ಟ್ಯಾಲೆಂಟ್‌ ಹೊಂದಿದ್ದಾಳೆ. ಮಗಳ ಸಾಧನೆಗೆ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಸಮೃದ್ದಿ ಸಾಧನೆಗೆ ಹಲವಾರು ಪ್ರಶಸ್ತಿಗಳು ದೊರೆತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಮೃದ್ಧಿಯನ್ನು ಹಿರಿಯರು ಹಾಗೂ ಸ್ವಾಮೀಜಿಗಳು ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+