ಯುವತಿಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣರು ಈಗ ಪೊಲೀಸರ ಅತಿಥಿ
ಹುಬ್ಬಳ್ಳಿ, ಜುಲೈ 18: ಕಾಲೇಜಿಗೆ ಹೋಗುವ ಯುವತಿಯರನ್ನು ಛೇಡಿಸುತ್ತಿದ್ದ ಆರು ಮಂದಿ ಬೀದಿ ಕಾಮಣ್ಣರ ಗುಂಪನ್ನು ಹುಬ್ಬಳ್ಳಿ ಉಪನಗರ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ನಗರದ ಹಳೇ ಬಸ್ ನಿಲ್ದಾಣ ಬಳಿ ಹಾಗೂ ಇನ್ನಿತರ ಜನನಿಬಿಡ ಪ್ರದೇಶದ ಬಳಿ ಗುಂಪುಕಟ್ಟಿಕೊಂಡು ಯುವತಿಯರನ್ನು ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರು ಎಂದು ಪೊಲೀಸರು ಆರೋಪ ಹೊರಿಸಿದ್ದಾರೆ.
ಶಿರಡಿನಗರದ ಸಂಜುಕುಮಾರ್, ತೊರವಿಹಕ್ಕಲ ಪ್ರವೀಣ್ ಜೈನ್, ಶಿರಾಜ್ ಅಹಮ್ಮದ್, ಶಂಕರ್ ತಲವಾಯಿ, ವಿವೇಕ ಗದಗಿ ಹಾಗೂ ವಿದ್ಯಾನಗರದ ಮಂಜುನಾಥ ಶಾಮನೂರು ಅವರುಗಳು ಬಂಧಿತ ರೋಡ್ ರೋಮಿಯೋಗಳು.

ಪೊಲೀಸರು ಈ ಕಾರ್ಯ ಜನಪ್ರಶಂಸೆ ಗಳಿಸಿದ್ದು, ಈ ಹಿಂದೆಯೂ ಹುಬ್ಬಳ್ಳಿ ಪೊಲೀಸರು ರೋಡ್ ರೋಮಿಯಗಳನ್ನು ಬಂಧಿಸಿ ಬುದ್ಧಿ ಕಲಿಸಿದ್ದರು.












Click it and Unblock the Notifications