ಹುಬ್ಬಳ್ಳಿ: ಅಕ್ರಮ ಮರಳು ಅಡ್ಡೆ ಮೇಲೆ ದಾಳಿ, 32 ಲಾರಿ ಮರಳು ವಶ
ಹುಬ್ಬಳ್ಳಿ, ಜೂನ್ 26 : ರೈತರು ತಮ್ಮ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆ ಮೇಲೆ ಸೋಮವಾರ ಹುಬ್ಬಳ್ಳಿ ತಹಶೀಲ್ದಾರ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ..
ತಾಲೂಕಿನ ಉಮಚಗಿ ಹಳ್ಳದ ಮರಳನ್ನು ಹೊಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಅಧಿಕೃತ ಮಾಹಿತಿ ಮೇಲೆ ಹುಬ್ಬಳ್ಳಿ ತಹಶೀಲ್ದಾರ್ ಶಶಿಧರ ಮಾಡ್ಯಾಳ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, 32 ಲೋಡ್ ಅಕ್ರಮ ಮರಳನ್ನು ವಶಪಡಿಸಿಕೊಂಡಿದೆ.

ಉಮಚಗಿ ಗ್ರಾಮದ ಯಶವಂತ ಕೋರಿ, ಬಸಪ್ಪ ಹುರಳಿ, ಶಿವಪ್ಪ ಕುರಿಗಾರ, ಮುತ್ತಪ್ಪ ಮಾಗಡಿ, ಶಂಕ್ರಪ್ಪ ಗಡ್ಡಿ ಅವರ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗಿತ್ತು.
ಶಿರಗುಪ್ಪ ಉಪತಹಶಿಲ್ದಾರ್ ಸಾಹುಕಾರ, ಕಂದಾಯ ನಿರೀಕ್ಷಕ ಪಿ ಕೆ ಕುಲಕರ್ಣಿ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications