ಹುಬ್ಬಳ್ಳಿ ಖಾಸಗಿ ಕಾಲೇಜಿನ‌ ವಿದ್ಯಾರ್ಥಿನಿಯರ ಅಶ್ಲೀಲ ಪೋಟೋ ವೈರಲ್ ಪ್ರಕರಣ: ಪೊಲೀಸ್‌ ಕಮಿಷನರ್ ಹೇಳಿದ್ದೇನು?

ಹುಬ್ಬಳ್ಳಿ, ಆಗಸ್ಟ್‌, 14: ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯ ಫೋಟೋಗಳನ್ನು ಅಸಭ್ಯವಾಗಿ ಇನ್‌ಸ್ಟ್ರಾಗ್ರಾಂನಲ್ಲಿನ ಫೋಟೊಗಳನ್ನು ಫೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಮೂವರು ಆರೋಪಿಗಳು ಅದೇ ಖಾಸಗಿ ಕಾಲೇಜಿನವರಾಗಿದ್ದು, ಇನ್ನೊಂದು ಯುವಕರು ಹಾಗೂ ಯುವತಿಯ ಗುಂಪಿನ‌ ಮೇಲೆ ರಿವೆಂಜ್ ತೀರಿಸಿಕೊಳ್ಳಲು ಮಾಡಿದ್ದು ಎಂಬ ಮಾಹಿತಿ ಬಿಚ್ಚಿಟ್ಟಿದ್ದಾರೆ.

Hubballi-Dharwad police commissioner reaction on college girl students obscene photo viral case

ಪ್ರಕರಣದ ಎ1 ಆರೋಪಿ ಹಾಗೂ ಮತ್ತಿಬ್ಬರನ್ನು ಮತ್ತೊಂದು ಗುಂಪಿನ ಯುವಕರು ಸೇರಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅವರ ಕಡೆಯ ವಿದ್ಯಾರ್ಥಿನಿಯರ ಫೋಟೋಗಳನ್ನು ಅಸಭ್ಯವಾಗಿ ವೈರಲ್ ಮಾಡಿದ್ರೆ ಅವರಿಗೆ ನಾಟುತ್ತದೆ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.

ಇದರಲ್ಲಿ ಎ1 ಆರೋಪಿಯೇ ಮಾಸ್ಟರ್ ಮೈಂಡ್ ಆಗಿದ್ದು, ಸೈಬರ್ ಹಾಗೂ ಕಂಪ್ಯೂಟರ್ ಬಗ್ಗೆ ಮಾಹಿತಿ ಇದ್ದದ್ದರಿಂದ ಮೂವರು ಸೇರಿ ಈ ಕೃತ್ಯ ಮಾಡಿದ್ದಾರೆ. ಇನ್ನೂ ತನಿಖೆ ಮುಂದುವರೆದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ‌ಕಮಿಷನರ್ ರೇಣಜಕಾ ಸುಕುಮಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+