ದಶಕಗಳ ಬೇಡಿಕೆಗೆ ಮನ್ನಣೆ; ಹುಬ್ಬಳ್ಳಿ-ಚೆನ್ನೈ ರೈಲು ಸೇವೆ ಆರಂಭ

ಹುಬ್ಬಳ್ಳಿ, ಸೆಪ್ಟೆಂಬರ್ 08 : ನೈಋತ್ಯ ರೈಲ್ವೆ ಹುಬ್ಬಳ್ಳಿ-ಚೆನ್ನೈ ನಡುವೆ ವಿಶೇಷ ರೈಲು ಸೇವೆ ಆರಂಭಕ್ಕೆ ಸಿದ್ಧತೆ ನಡೆಸಿದೆ. ಸೆ. 14 ಅಥವ 15ರಂದು ಹುಬ್ಬಳ್ಳಿಯಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತದೆ. ಈ ಮೂಲಕ ಹಲವು ವರ್ಷಗಳ ಬೇಡಿಕೆಗೆ ಒಪ್ಪಿಗೆ ಸಿಗಲಿದೆ.

Recommended Video

      ಭಾರತದಲ್ಲೇ ಮೊದಲ ಲೋಕೋಮೋಟಿವ್ ಕಾರ್ಖಾನೆ ಪಶ್ಚಿಮ ಬಂಗಾಳದಲ್ಲಿ | Oneindia Kannada

      "ಹೊಸ ರೈಲು ಆರಂಭಿಸಲು ಪೂರ್ವ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಲವು ವರ್ಷಗಳಿಂದ ಹುಬ್ಬಳ್ಳಿ-ಚೆನ್ನೈ ನಡುವೆ ರೈಲು ಸಂಚಾರ ಆರಂಭಿಸುವಂತೆ ಬೇಡಿಕೆ ಇತ್ತು" ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

      Hubballi Chennai Rail Service From September 15

      ಪ್ರಸ್ತುತ ಪ್ರತಿ ಗುರುವಾರ ವಾಸ್ಕೋ-ಚೆನ್ನೈ ಮತ್ತು ಶನಿವಾರ ಹುಬ್ಬಳ್ಳಿ-ಚೆನ್ನೈ ನಡುವೆ ರೈಲು ಸಂಚಾರ ನಡೆಸುತ್ತಿದೆ. ಈ ರೈಲು ದಾವಣಗೆರೆ, ಅರಸೀಕೆರೆ, ತುಮಕೂರು, ಯಶವಂತಪುರ, ಬಂಗಾರಪೇಟೆ ಮಾರ್ಗದ ಮೂಲಕ 835 ಕಿ. ಮೀ. ದೂರ ಕ್ರಮಿಸಿ ಚೆನ್ನೈ ತಲುಪಲಿದೆ.

      ಈ ರೈಲು ಹುಬ್ಬಳ್ಳಿಯಿಂದ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಗುಂತಕಲ್ ಮಾರ್ಗದ ಮೂಲಕ ಚೆನ್ನೈ ತಲುಪಲಿದೆ. ಈ ಮಾರ್ಗದ ಮೂಲಕ ಚೆನ್ನೈ ತಲುಪಲು ಸುಮಾರು 710 ಕಿ. ಮೀ. ದೂರವಾಗಲಿದೆ. ಇದರಿಂದ 125 ಕಿ. ಮೀ. ಪ್ರಯಾಣದ ಅವಧಿ ಸಹ ಕಡಿಮೆಯಾಗಲಿದೆ.

      ಹುಬ್ಬಳ್ಳಿ-ಚೆನ್ನೈ ನಡುವೆ ವಾರದಲ್ಲಿ ಒಂದು ದಿನ ವಿಶೇಷ ರೈಲನ್ನು ಓಡಿಸಲು ನೈಋತ್ಯ ರೈಲ್ವೆ ಪ್ರಸ್ತಾವನೆ ಸಿದ್ಧಪಡಿಸಿಕೊಂಡಿತ್ತು. ಇಲಾಖೆಯ ಒಪ್ಪಿಗೆ ಮಾತ್ರ ಸಿಕ್ಕಿರಲಿಲ್ಲ. ಈಗ ಬೆಳಗಾವಿ ಸಂಸದ ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ರೈಲು ಸಂಚಾರಕ್ಕೆ ಅನುಮೋದನೆ ಸಿಕ್ಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+