ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ; ನಿಲ್ದಾಣಗಳು

ಹುಬ್ಬಳ್ಳಿ, ಸೆಪ್ಟೆಂಬರ್ 12 : ಉತ್ತರ ಕರ್ನಾಟಕದ ಭಾಗದ ಜನರ ಬಹುದಿನಗಳ ಬೇಡಿಕೆಗೆ ಭಾರತೀಯ ರೈಲ್ವೆ ಒಪ್ಪಿಗೆ ನೀಡಿದೆ. ಸೆಪ್ಟೆಂಬರ್ 14ರಂದು ಹುಬ್ಬಳ್ಳಿ-ಚೆನ್ನೈ ಸೆಂಟ್ರಲ್ ನಡುವಿನ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆ ಸಿಗಲಿದೆ.

ಹುಬ್ಬಳ್ಳಿ-ಚೆನ್ನೈ ರೈಲುನಿಂದಾಗಿ ಧಾರವಾಡ, ಹುಬ್ಬಳ್ಳಿ, ಗದಗ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ಜನರಿಗೆ ಸಹಕಾರಿಯಾಗಲಿದೆ. ರೈಲು ನಂಬರ್ 17313/17314 ವಾರಕ್ಕೆ ಎರಡು ಬಾರಿ ಹುಬ್ಬಳ್ಳಿ-ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ನಡುವೆ ಸಂಚಾರ ನಡೆಸಲಿವೆ.

ಕೇಂದ್ರ ಸಂಸದೀಯ ವ್ಯವಹಾರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಬೆಳಗಾವಿ ಸಂಸದ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸೆಪ್ಟೆಂಬರ್ 14ರಂದು ಸಂಜೆ 4ಗಂಟೆಗೆ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ.

Hubballi Chennai Central Express Train Schedule Stations

ಸೆಪ್ಟೆಂಬರ್ 17ರಂದು ಹುಬ್ಬಳ್ಳಿಯಿಂದ, ಸೆಪ್ಟೆಂಬರ್ 18ರಂದು ಚೆನ್ನೈನಿಂದ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ವೇಳಾಪಟ್ಟಿ : ರೈಲು ನಂಬರ್ 17313 ಹುಬ್ಬಳ್ಳಿಯಿಂದ ಪ್ರತಿ ಮಂಗಳವಾರ ಮತ್ತು ಶುಕ್ರವಾರ ರಾತ್ರಿ 9.05ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 10.50ಕ್ಕೆ ತಲುಪಲಿದೆ.

ರೈಲು ಸಂಖ್ಯೆ 17314 ಚೆನ್ನೈ ಸೆಂಟ್ರಲ್-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಪ್ರತಿ ಬುಧವಾರ ಮತ್ತು ಶನಿವಾರ 3ಗಂಟೆಗೆ ಚೆನ್ನೈನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 5.15ಕ್ಕೆ ಹುಬ್ಬಳ್ಳಿ ನಿಲ್ದಾಣವನ್ನು ತಲುಪಲಿದೆ.

ನಿಲ್ದಾಣಗಳು : ಹುಬ್ಬಳ್ಳಿ-ಚೆನ್ನೈ ನಡುವಿನ ರೈಲು, ಗದಗ, ಹೊಸಪೇಟೆ, ಬಳ್ಳಾರಿ, ಗುಂತಕಲ್ಲು, ರೇಣಿಗುಂಟ ಮಾರ್ಗವಾಗಿ ಸಂಚಾರ ನಡೆಸಲಿದೆ.

ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ ರೈಲಿನಲ್ಲಿ ಒಂದು ಎಸಿ2 ಟೈರ್ ಕೋಚ್, 2 ಎಸಿ 3 ಟೈರ್ ಕೋಚ್, 6 ದ್ವಿತೀಯ ದರ್ಜೆ ಸ್ಲೀಪರ್ ಕೋಚ್ಮ 6 ಸಾಮಾನ್ಯ 2ನೇ ದರ್ಜೆ ಕೋಚ್, ಲಗೇಜ್ ವ್ಯಾನ್ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+