ಹುಬ್ಬಳ್ಳಿ ಹೋಟೆಲ್ ನಲ್ಲಿ 60ರೂ ಬಿಲ್ ಗೆ ನಡೆಯಿತು ಮಾರಾಮಾರಿ
ಹುಬ್ಬಳ್ಳಿ, ಜನವರಿ 7: ಊಟ ಮಾಡಿದ ನಂತರ ಬಿಲ್ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ, ಇಬ್ಬರು ಗ್ರಾಹಕರ ಮೇಲೆ ಹೋಟೆಲ್ ಸಿಬ್ಬಂದಿ ಮನಬಂದಂತೆ ಥಳಿಸಿರುವ ಘಟನೆ ಹುಬ್ಬಳ್ಳಿಯ ಪಿಬಿ ರಸ್ತೆಯ ನಿಯಾಜ್ ಹೊಟೇಲಿನಲ್ಲಿ ನಡೆದಿದೆ.
ಗಬ್ಬೂರು ನಿವಾಸಿಗಳಾದ ಪ್ರಕಾಶ ಬಿದರಕುಂದಿ ಹಾಗೂ ಮುತ್ತಪ್ಪ ಬಿದರಕುಂದಿ ಎಂಬುವವರು ಊಟ ಮಾಡಿ ಬಿಲ್ ಕೊಡಲು ಹೋಗಿದ್ದಾರೆ. ಆದರೆ ಹೋಟೆಲ್ ಬಿಲ್ ನಲ್ಲಿ 60 ರೂಪಾಯಿ ವ್ಯತ್ಯಾಸವಾಗಿದೆ. ಇದಕ್ಕೆ ಗ್ರಾಹಕರು 60 ರೂ. ಹೆಚ್ಚು ಬಿಲ್ ಹಚ್ಚಿದ್ದೀರಿ, ಕೊಡೋಲ್ಲ ಎಂದಿದ್ದಾರೆ. ಹೀಗಾಗಿ ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಮಿತಿ ಮೀರಿದೆ.

ಗ್ರಾಹಕ ಹಾಗೂ ಹೊಟೇಲ್ ಸಿಬ್ಬಂದಿ ಮಧ್ಯೆ ಮಾರಾಮಾರಿಯಾಗಿ ಹೋಟೆಲ್ ಸಿಬ್ಬಂದಿ ಗ್ರಾಹಕರಿಬ್ಬರ ಮೇಲೆ ನೀರಿನ ಜಗ್ ಹಾಗೂ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications