ಮೇದಾರ ಓಣಿಯಲ್ಲಿ ಹೋಳಿ ಹಬ್ಬದ ವೈಭವ: ಸಿದ್ಧವಾಗುತ್ತಿದೆ ಬೃಹತ್ ಗಾತ್ರದ ಕಾಮಣ್ಣ
ಹುಬ್ಬಳ್ಳಿಯ ಮೇದಾರ ಓಣಿಯಲ್ಲಿ ಮೇದಾರ ಸಮುದಾಯದಿಂದ ಪ್ರತಿಷ್ಟಾಪನೆ ಮಾಡಿರುವ ಹೋಳಿ ಕಾಮಣ್ಣ ಸಾಕಷ್ಟು ವೈಭವವನ್ನು ಒಳಗೊಂಡಿರುತ್ತದೆ. ಹುಬ್ಬಳ್ಳಿಯಲ್ಲಿ ಹೋಳಿ ಹಬ್ಬದ ಕಾಮಣ್ಣನ ಸ್ಥಾಪನೆ ಹಾಗೂ ಹಬ್ಬದ ಆಚರಣೆಯ ಬಗ್ಗೆ ಮಾಹಿತಿ ಇಲ್ಲಿದೆ.
ಹುಬ್ಬಳ್ಳಿ, ಮಾರ್ಚ್ 4: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಯಾವುದೇ ಹಬ್ಬ ಅಂದರೆ ಸಾಕು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಯುವಕರ ಮೆಚ್ಚಿನ ಗಣಪತಿ ಹಬ್ಬ ಹಾಗೂ ಹೋಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಹೋಳಿ ಹಬ್ಬದ ಕಾಮಣ್ಣನ ಸ್ಥಾಪನೆ ಹಾಗೂ ಹಬ್ಬದ ಆಚರಣೆಯ ಬಗ್ಗೆ ಮಾಹಿತಿ ಇಲ್ಲಿದೆ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಹೋಳಿ ಕಾಮಣ್ಣನ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಅದರಲ್ಲೂ ಹೊಸ ಮೇದಾರ ಓಣಿಯ ಕಾಮಣ್ಣನ ವೈಭವವನ್ನು ನೋಡಲೇ ಬೇಕು. ಹುಬ್ಬಳ್ಳಿಯ ಮೇದಾರ ಓಣಿಯಲ್ಲಿ ಮೇದಾರ ಸಮುದಾಯದಿಂದ ಪ್ರತಿಷ್ಟಾಪನೆ ಮಾಡಿರುವ ಹೋಳಿ ಕಾಮಣ್ಣ ಸಾಕಷ್ಟು ವೈಭವವನ್ನು ಒಳಗೊಂಡಿರುತ್ತದೆ.

ಹೋಳಿ ಹಬ್ಬಕ್ಕೆ ಚಿಕ್ಕಪುಟ್ಟದಾದ ಕಾಮಣ್ಣ ಮೂರ್ತಿಯಲ್ಲಿ ಪ್ರತಿಷ್ಟಾಪನೆ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ಮೇದಾರ ಓಣಿಯಲ್ಲಿ ಬೃಹತ್ ಆಕಾರದ ಹೋಳಿ ಕಾಮಣ್ಣನನ್ನು ಪ್ರತಿಷ್ಟಾಪನೆ ಮಾಡಲಾಗುತ್ತಿದ್ದು, ಯುವಕರ ಉತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸುಮಾರು ಒಂದು ತಿಂಗಳಿನಿಂದಲೇ ಹೋಳಿ ಕಾಮಣ್ಣನ ಸ್ಥಾಪನೆಗೆ ಸಿದ್ಧತೆ ನಡೆಸಲಾಗುತ್ತದೆ. ಬಿದಿರಿನ ಕಡ್ಡಿಯಿಂದ ಬೃಹತ್ ಗಾತ್ರದ ಕಾಮಣ್ಣನ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಹೊಸ ಮೇದಾರ ಓಣಿಯಲ್ಲಿಕಾಮಣ್ಣನ ಪ್ರತಿಷ್ಟಾಪನೆ ಮಾಡಿ ವಿಶೇಷವಾಗಿ ಪೂಜೆ ಸಲ್ಲಿಸಿ ಹುಣ್ಣುಮೆ ಕಳೆದ ಐದು ದಿನಗಳ ಬಳಿಕ ರಂಗಪಂಚಮಿಯಂದು ದಹನ ಮಾಡುವ ಮೂಲಕ ಆಚರಣೆ ಮಾಡಲಾಗುತ್ತದೆ.

ಇನ್ನು ಹೊಸ ಮೇದಾರ ಓಣಿಯಲ್ಲಿರುವ ಕಾಮಣ್ಣ ಭಕ್ತರ ಇಷ್ಟಾರ್ಥಗಳು ಈಡೇರಿಸುವ ಆರಾಧ್ಯ ದೈವವಾಗಿದ್ದು, ಭಕ್ತರು ಹಲವಾರು ಹರಕೆ ಕಟ್ಟಿಕೊಂಡು ಇಲ್ಲಿ ವಿಶೇಷ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.












Click it and Unblock the Notifications