Hubballi Rainfall: ನಗರದಲ್ಲಿ ಮುಂದುವರಿದ ಮಳೆ ಆರ್ಭಟ: ಮೇ 19ರವೆಗೂ ಮಳೆ ಎಚ್ಚರಿಕೆ

ಹುಬ್ಬಳ್ಳಿ, ಮೇ 16: ಹಲವು ದಿವಸಗಳಿಂದ ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಆಗಾಗ ಧಾರಾಕಾರ ಮಳೆ ಸುರಿಯುತ್ತಿದೆ. ಇದರೊಂದಿಗೆ ಹಲವು ಅವಾಂತರಗಳನ್ನು ಸೃಷ್ಟಿಸುತ್ತಿದೆ. ಗುರುವಾರವು ಬಿರುಗಾಳಿ ಸಹಿತ ಜೋರು ಮಳೆ ಮಟ ಮಟ ಮಧ್ಯಾಹ್ನವೇ ಸುರಿದಿದೆ.

ಹುಬ್ಬಳ್ಳಿಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಗುಡುಗು ಸಿಡಲು ಸಹಿತು ಜೋರು ಮಳೆ ಅಬ್ಬರಿಸಿತು. ಬಿರು ಬಿಸಿಲಿಗೆ ಕಂಗೆಟ್ಟಿದ್ದ ಹುಬ್ಬಳ್ಳಿಗೆ ಪೂರ್ವ ಮುಂಗಾರು ತಂಪೆರೆಯಿತು. ಮಬ್ಬು ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಬಂದ ಮಳೆಗೆ ರಸ್ತೆಗಳ ಮೇಲೆಲ್ಲ ನೀರು ಹರಿಯಿತು. ಕೆಲವು ರಸ್ತೆ, ವೃತ್ತಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

Heavy Rainfall Causes Disruption today in Hubballi-Dharwad Expected Until May 19

ಹುಬ್ಬಳ್ಳಿ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಜೊತೆಗೆ ಧಾರವಾಡ ಜಿಲ್ಲೆಯ ಕಲಘಟಗಿ ಮುಂತಾದ ಬಡಾವಣೆಗಳಲ್ಲಿ ಭಾರೀ ಮಳೆ ಸುರಿಯಿತು. ತಗ್ಗು ಪ್ರದೇಶದ ಅನೇಕ ಮನೆಗಳಿಗೆ ನುಗ್ಗಿ ನೀರು ಸಮಸ್ಯೆ ಉಂಟು ಮಾಡಿತು. ಮಳಿಗೆ ವಸತಿ ಬಡಾವಣೆಗಳಿಗೆ ನೀರು ನುಗ್ಗಿ ಜನರಲ್ಲಿ ಆತಂಕ ಸೃಷ್ಟಿಸಿತು.

ಅನೇಕ ಕಡೆಗಳಲ್ಲಿ ಭಾರೀ ಮಳೆ

ಕಳೆದ ವಾರ ಶನಿವಾರ ಹಾಗೂ ಸೋಮವಾರ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಸುರಿದ ಮಳೆ ಈ ವರ್ಷ ಭಾರೀ ಮಳೆ ಎಂದರೆ ತಪ್ಪಾಗಲಾರದು. ಅಂತಹ ದೊಡ್ಡ ಮಳೆ ಆಗಿತ್ತು. ಇದೀಗ ಮತ್ತೆ ಮಳೆ ಮುಂದುವರಿದಿದೆ. ಹುಬ್ಬಳ್ಳಿಯ ಅಶೊಕ ನಗರ, ದೇಶಪಾಂಡೆ ನಗರ, ಹಳೆ ಹುಬ್ಬಳ್ಳಿ, ಗೋಪನಕೊಪ್ಪ, ಬಂಕಾಪುರ ಚೌಕ್, ಛಬ್ಬಿ, ಬಿಡನಾಳ, ಕಮರಿಪೇಟ, ದುರ್ಗದಬೈಲ್, ಕೋಯಿನ್ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ವಿದ್ಯಾನಗರ, ನವನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ನೀರು ನುಗ್ಗಿತು.

Heavy Rainfall Causes Disruption today in Hubballi-Dharwad Expected Until May 19

ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು

ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರದಿಂದ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಮಾಡಲಾಗುತ್ತಿರುವ ಸ್ಥಳಗಳಲ್ಲಿ ತಗ್ಗಿನಲ್ಲಿ ಮಳೆ ನೀರು ತುಂಬಿಕೊಂಡಿತು. ಜಿಲ್ಲೆಯಲ್ಲಿ ಒಂದೇ ಮಳೆಗೆ ಎಲ್ಲೆಂದರಲ್ಲಿ ನೀರು ನಿಂತು ನಿಂತುಕೊಂಡಿದೆ. ಜನರು ಹೊರ ಹೋಗದ ಸ್ಥಿತಿ ಇದೆ.

ಹುಬ್ಬಳ್ಳಿಯ ಇಸ್ಲಾಂ ಪುರ, ವಿದ್ಯಾನಗರ , ಕೊಪ್ಪೀಕರ್ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕೆಲವೆಡೆ ಮರಗಳು, ಮರದ ಕೊಂಬೆಗಳು ಮುರಿದು ಬಿದ್ದಿವೆ.

ಮೇ 19ರವರೆಗೂ ಹುಬ್ಬಳ್ಳಿ, ಕಲಘಟಗಿ ಸೇರಿದಂತೆ ಧಾರವಾಡ ವ್ಯಾಪ್ತಿಯಲ್ಲಿ ವ್ಯಾಪಿಕ ಮಳೆ ಸುರಿಯಲಿದೆ. ವಾತಾವರಣವು ತಂಪಿನಿಂದ ಕೂಡಿರಲಿದೆ. ಗರಿಷ್ಠ ತಾಪಮಾನದಲ್ಲಿ ಇಳಿಕೆ ಆಗಿದ್ದು, 37 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಐಎಂಡಿ ಮುನ್ಸೂಚನೆ ವರದಿಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+