ಬಹುಕೋಟಿ ವಂಚನೆ ಪ್ರಕರಣ: ಹುಬ್ಬಳ್ಳಿ ಮೂಲದ ಇಬ್ಬರು ಉದ್ಯಮಿಗಳ ಆಸ್ತಿ ಜಪ್ತಿ

ಹುಬ್ಬಳ್ಳಿ, ಜುಲೈ 31: ಸ್ಟಾರ್ ಏರ್ಲೈನ್ಸ್ ಮಾಲೀಕ ಸಂಜಯ್ ಘೋಡಾವತ್ ಅವರಿಗೆ ಬಹುಕೋಟಿ ವಂಚನೆ ಮಾಡಿರುವ ಪ್ರಕರಣದ ಹಿನ್ನೆಲೆಯಲ್ಲಿ ವಂಚನೆ ಪ್ರಕರಣ ಸಂಬಂಧ ಹುಬ್ಬಳ್ಳಿ ಮೂಲದ ಇಬ್ಬರು ಉದ್ಯಮಿಗಳ 40.22 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು (E.D.) ಜಪ್ತಿ ಮಾಡಿದೆ.

ರಿಯಲ್ ಎಸ್ಟೇಟ್ ಉದ್ಯಮದ ಹೆಸರಿನಲ್ಲಿ ಉದ್ಯಮಿಗಳಾದ ಶೀತಲ್‌ ಕುಮಾರ್, ಜಿನೇಂದ್ರ ಮಗ್ದುಮ್ ಎನ್ನುವವರು ಸ್ಟಾರ್ ಏರ್ಲೈನ್ ಮಾಲೀಕ ಸಂಜಯ್ ಘೋಡಾವತ್ ಅವರಿಗೆ ವಂಚಿಸಿದ್ದ ಪ್ರಕರಣ ಇದಾಗಿದೆ. ಶೀತಲ್‌ ಕುಮಾರ್ ಮತ್ತು ಜಿನೇಂದ್ರ ಮಗ್ದುಮ್ ಎಂಬವರು ರಿಯಲ್ ಎಸ್ಟೇಟ್ ಉದ್ಯಮದ ಹೆಸರಿನಲ್ಲಿ ಬರೋಬ್ಬರಿ 525 ಕೋಟಿ ರೂಪಾಯಿ ಹಣ ತಮ್ಮ ವೈಯಕ್ತಿಕ ಖಾತೆಗಳು ಹಾಗೂ ಇತರರ ಖಾತೆಗೆ ವರ್ಗಾಯಿಸಿಕೊಂಡಿದ್ದರು ಎನ್ನಲಾಗಿದೆ.

ED Attaches Properties Of Two Hubballi Based Businessmen

ಈ ಬಗ್ಗೆ ಸಂಜಯ್ ಘೋಡಾವತ್ ಅವರು ಹುಬ್ಬಳ್ಳಿಯ ಅಶೋಕನಗರ ಠಾಣೆ ಮೆಟ್ಟಿಲೇರಿದ್ದರು. ಸಂಜಯ್ ದೂರಿನ ಅನ್ವಯ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದರು. ಬಹುಕೋಟಿ ವಂಚನೆ ಪ್ರಕರಣವಾಗಿರುವ ಕಾರಣ ಪ್ರಕರಣವನ್ನು ಅಶೋಕ ನಗರ ಠಾಣಾ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿದ್ದರು.

ಇನ್ನು ಪ್ರಕರಣದ ದೂರು ದಾಖಲಾಗುತ್ತಿದ್ದಂತೆಯೇ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಶೀತಲ್‌ ಕುಮಾರ್, ಜಿನೇಂದ್ರ ಅವರಿಗೆ ಸೇರಿರುವ ಮನೆ, ಅಪಾರ್ಟ್​ಮೆಂಟ್, ವಿಂಡ್​ಮಿಲ್ ಸೇರಿದಂತೆ 12 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಅರ್ಜಿಗೆ ಹಣ ವಸೂಲಿ ಆರೋಪ: ಸ್ಥಳಕ್ಕೆ ತಹಶೀಲ್ದಾರ್‌ ಭೇಟಿ

ಹುಬ್ಬಳ್ಳಿ: ಗೃಹಲಕ್ಷ್ಮಿ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹಣ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ನೀಡಿದ ಬೆನ್ನಲ್ಲೇ ಅಧಿಕಾರಿಗಳು ತೈಬಾ ಸೇವಾ ಕೇಂದ್ರದ ಮೇಲೆ ದಾಳಿ ನಡೆಸಿರುವ ಘಟನೆ ಅಯೋಧ್ಯಾ ನಗರದಲ್ಲಿರುವ ಚೈತನ್ಯ ನಗರದಲ್ಲಿ ನಡೆದಿದೆ.

ಸೇವಾ ಸಿಂಧು ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಹಣ ಪಡೆಯುತ್ತಿದ್ದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಕೆ.ಆರ್‌.ಪಾಟೀಲ್ ಹಾಗೂ ಅವರ ಸಿಬ್ಬಂದಿ ದಾಳಿ ನಡೆಸುವ ವೇಳೆ ಆಪರೇಟರ್ ಕೇಂದ್ರಕ್ಕೆ ಬೀಗ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜನರಿಂದ 150 ರೂಪಾಯಿ ಹಣ ಪಡೆಯುತ್ತಿದ್ದ ಆರೋಪ ಕೇಳಿ ಬಂದಿತ್ತು. ಅಲ್ಲದೇ ಸೇವಾ ಕೇಂದ್ರಕ್ಕೆ ಗೃಹಲಕ್ಷ್ಮಿ ಯೋಜನೆ ಅರ್ಜಿ ಹಾಕಲು ಅನುಮತಿ ನೀಡಿಲ್ಲ ಎನ್ನುವುದು ತಿಳಿದು ಬಂದಿದೆ. ಹುಬ್ಬಳ್ಳಿಯ ನವನಗರದಲ್ಲಿ ಕೇಂದ್ರವೊಂದಕ್ಕೆ ನೀಡಲಾಗಿದ್ದ ಯೂಸರ್ ಐಡಿ, ಪಾಸ್ ವರ್ಡ್ ಬಳಸಿ ಕೇಂದ್ರದಲ್ಲಿ ಅನಧಿಕೃತವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲಾಗುತ್ತಿರುವುದು ಪತ್ತೆಯಾಗಿದೆ. ಈ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+