ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು
ಹುಬ್ಬಳ್ಳಿ, ನವೆಂಬರ್ 26 : ಜೋಡಿ ಮಾರ್ಗದ ಕಾಮಗಾರಿಗಳ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ವಲಯದಲ್ಲಿ ಹಲವು ರೈಲುಗಳ ಸಂಚಾರ ರದ್ದಾಗಿದೆ. ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿನ ರೈಲುಗಳ ಸಂಚಾರದಲ್ಲಿ ಕೆಲವು ಬದಲಾವಣೆಯಾಗಲಿದೆ.
ಚಿಕ್ಕಜಾಜೂರ-ಸಾಸಲು-ಮಾಯಕೊಂಡ-ಕೊಡಗಾನೂರ-ತೋಲಹುಣಸೆ ನಡುವೆ ಜೋಡಿ ಮಾರ್ಗ ಕಾಮಗಾರಿ ನಡೆಯುತ್ತಿದೆ. ನಾನ್ ಇಂಟರ್‌ಲಾಕ್ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ನವೆಂಬರ್ 30 ರಿಂದ ಡಿಸೆಂಬರ್ 10ರ ತನಕ ಹನ್ನೊಂದು ದಿನಗಳ ಕಾಲ ಹಲವು ರೈಲುಗಳ ಸಂಚಾರ ರದ್ದಾಗಲಿದೆ. ಕೆಲವು ರೈಲುಗಳ ಸಂಚಾರ ಭಾಗಶಃ ರದ್ದಾಗಲಿದೆ. ಕೆಲವು ರೈಲುಗಳ ನಿಲುಗಡೆ ಅವಧಿ ಹೆಚ್ಚಾಗಲಿದೆ.

ನವೆಂಬರ್ 28 ರಿಂದ ಡಿಸೆಂಬರ್ 10ರ ತನಕ 13 ದಿನಗಳ ಕಾಲ ಚಿಕ್ಕಜಾಜೂರ-ಚಿತ್ರದುರ್ಗ-ಚಿಕ್ಕಜಾಜೂರ ಪ್ಯಾಸೆಂಜರ್ (56519/56520) ರೈಲಿನ ಸಂಚಾರ ರದ್ದಾಗಲಿದೆ.
ರದ್ದಾಗುವ ರೈಲುಗಳು
* ಹರಿಹರ-ಚಿತ್ರದುರ್ಗ-ಹರಿಹರ ಪ್ಯಾಸೆಂಜರ್ ರೈಲು
* ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ
* ಕೆಎಸ್ಆರ್ ಶಿವಮೊಗ್ಗ ಟೌನ್ ಪ್ಯಾಸೆಂಜರ್ (56917)
* ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು (56914)
* ಶಿವಮೊಗ್ಗ ಟೌನ್-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ (56918)
* ಕೆಎಸ್‌ಆರ್ ಬೆಂಗಳೂರು-ಹುಬ್ಬಳ್ಳಿ
* ಕೆಎಸ್‌ಆರ್ ಬೆಂಗಳೂರು- ಹೊಸಪೇಟೆ ಪ್ಯಾಸೆಂಜರ್ (56909)
* ಹುಬ್ಬಳ್ಳಿ- ಕೆಆರ್‌ಎಸ್ ಬೆಂಗಳೂರು (56912)
* ಹೊಸಪೇಟೆ-ಕೆಆರ್‌ಎಸ್ ಬೆಂಗಳೂರು ಪ್ಯಾಸೆಂಜರ್ (56910)
ಹೆಚ್ಚು ಹೊತ್ತು ನಿಲುಗಡೆ
* ಧಾರವಾಡ-ಕೆಎಸ್‌ಆರ್ ಬೆಂಗಳೂರು ಇಂಟರ್ ಸಿಟಿ ಎಕ್ಸ್‌ಪ್ರೆಸ್ (12726) ರೈಲನ್ನು ಡಿಸೆಂಬರ್ 4ರಂದು ಮಾರ್ಗಮಧ್ಯೆ 25 ನಿಮಿಷ ನಿಲ್ಲಿಸಲಾಗುತ್ತದೆ.
* ಡಿಸೆಂಬರ್ 5ರಂದು ಹುಬ್ಬಳ್ಳಿಯಿಂದ ಹೊರಡುವ ಗಾಂಧಿಧಾಮ-ಕೆಎಸ್‌ಆರ್ ಎಕ್ಸ್‌ಪ್ರೆಸ್ ರೈಲು (16505) ರೈಲನ್ನು, ಡಿಸೆಂಬರ್ 12ರಂದು ಹುಬ್ಬಳ್ಳಿಯಿಂದ ಹೊರಡುವ ಅಜ್ಮೀರ-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು (16209) ದಾವಣಗೆರೆಯಲ್ಲಿ 38 ನಿಮಿಷಗಳ ಕಾಲ ನಿಲ್ಲಿಸಲಾಗುತ್ತದೆ.












Click it and Unblock the Notifications