ಹುಬ್ಬಳ್ಳಿಯಿಂದ ಗೋವಾ, ಕೊಚ್ಚಿಗೆ ಜ.21ರಿಂದ ನೇರ ವಿಮಾನ

ಹುಬ್ಬಳ್ಳಿ, ಜನವರಿ 12: ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಗೋವಾ ಮತ್ತು ಕೊಚ್ಚಿಗೆ ನೇರ ವಿಮಾನಯಾನ ಸೇವೆ ಪುನಃ ಆರಂಭವಾಗಲಿದೆ. ಜನವರಿ 21ರಿಂದ ವಿಮಾನಗಳು ಸಂಚಾರ ನಡೆಸಲಿವೆ.

ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಕುರಿತು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. "ನಾನು ಇಂಡಿಗೋ ವಿಮಾನಯಾನ ಸಂಸ್ಥೆಗೆ ಹುಬ್ಬಳ್ಳಿ-ಗೋವಾ ಮತ್ತು ಹುಬ್ಬಳ್ಳಿ-ಕೊಚ್ಚಿ ನೇರ ವಿಮಾನ ಸೇವೆ ಪುನರಾರಂಭಿಸಲು ವಿನಂತಿ ಮಾಡಿದ್ದೆ" ಎಂದು ಹೇಳಿದ್ದಾರೆ.

 Direct Flight From Hubballi To Goa, Kochi From January 21

ಜನವರಿ 21ರಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಹುಬ್ಬಳ್ಳಿ-ಗೋವಾ ಮತ್ತು ಹುಬ್ಬಳ್ಳಿ-ಕೊಚ್ಚಿ ನಡುವೆ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ.

ವೇಳಾಪಟ್ಟಿ : ಹುಬ್ಬಳ್ಳಿ-ಕೊಚ್ಚಿ ನೇರ ವಿಮಾನ1 ಗಂಟೆಗೆ ಹುಬ್ಬಳ್ಳಿಯಿಂದ ಹೊರಡಲಿದ್ದು, 3.10ಕ್ಕೆ ಕೊಚ್ಚಿಗೆ ತಲುಪಲಿದೆ. 3.45ಕ್ಕೆ ಕೊಚ್ಚಿಯಿಂದ ಹೊರಡಲಿದ್ದು, 5.30ಕ್ಕೆ ಹುಬ್ಬಳ್ಳಿಗೆ ತಲುಪಲಿದೆ.

ಹುಬ್ಬಳ್ಳಿ-ಗೋವಾ ವಿಮಾನ 6 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 7ಗಂಟೆಗೆ ಗೋವಾ ತಲುಪಲಿದೆ.
7.30ಕ್ಕೆ ಗೋವಾದಿಂದ ಹೊರಡಲಿದ್ದು, 8.30ಕ್ಕೆ ಹುಬ್ಬಳ್ಳಿ ತಲುಪಲಿದೆ.

ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ಹುಬ್ಬಳ್ಳಿಯಿಂದ ಹಾರಾಟ ನಡೆಸುವ ವಿಮಾನಗಳ ಸಂಚಾರ ರದ್ದಾಗಿತ್ತು. ಈಗ ವಿಮಾನಯಾನ ಸೇವೆ ಪುನಃ ಆರಂಭವಾಗಿದ್ದು, ನೇರ ವಿಮಾನಗಳ ಹಾರಾಟ ಪುನಃ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+