ಚಂದ್ರಯಾನ 3 ಯಶಸ್ವಿಗಾಗಿ ವಿದ್ಯಾರ್ಥಿಗಳಿಂದ ಗಜಮುಖನಿಗೆ ವಿಶೇಷ ಪೂಜೆ

ಹುಬ್ಬಳ್ಳಿ, ಆಗಸ್ಟ್‌, 23: ಚಂದ್ರಯಾನ-3 ವಿಕ್ರಮ ಲ್ಯಾಂಡರ್‌ ಇಂದು ಚಂದ್ರನ ಮೇಲೆ ಇಳಿಯಲಿದ್ದು, ಇದರ ಯಶಸ್ವಿಗೆ ದೇಶವೇ ಪ್ರಾರ್ಥನೆ ‌ಮಾಡುತ್ತಿದೆ. ಪ್ರತಿಯೊಬ್ಬರೂ ಒಂದೊಂದು ಬಗೆಯಲ್ಲಿ ಹಾರೈಸುತ್ತಿದ್ದಾರೆ. ಅಲ್ಲದೆ ದೇಶದ ಎಲ್ಲ ದೇವಸ್ಥಾನ, ಮಸೀದಿಗಳು, ದರ್ಗಾಗಳು ಹಾಗೂ ಚರ್ಚ್‌ಗಳಲ್ಲಿ ವಿಶೇಷವಾಗಿ ಪೂಜೆ ಹಾಗೂ ಪ್ರಾರ್ಥನೆಗಳು ಜರುಗುತ್ತಿವೆ. ಹಾಗೆಯೇ ಹುಬ್ಬಳ್ಳಿಯಲ್ಲೂ ಗಣೇಶನಿಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ವಿಶೇಷ ಪೂಜೆ ಮಾಡಿಸಿ ಗಮನ ಸೆಳೆದರು.

ಸಿದ್ಧಾರೂಢ ಮೂರ್ತಿಗೆ ವಿಶೇಷ ಪೂಜೆ

ಚಂದ್ರಯಾನ ರಾಕೇಟ್ ಭಾವಚಿತ್ರ ಮತ್ತು ಧ್ವಜ ಹಿಡಿದು ಮಂತ್ರ ಘೋಷ ಕೂಗುವ ಮೂಲಕ ಸಿದ್ಧಾರೂಢ ಮಠದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಭಕ್ತರು ಪೂಜೆ ನಡೆಸಿದರು. ಅಲ್ಲದೆ ಇದೇ ವೇಳೆ ಭಾರತೀಯರ ಕನಸು ನೆನಸಾಗಲು ಮತ್ತು ಲ್ಯಾಂಡರ್ ಸುರಕ್ಷಿತವಾಗಿ ಚಂದ್ರ ಮೇಲೆ ಇಳಿಯಲೆಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಮುಖಂಡ ಮಂಜುನಾಥ ಲೂತಿಮಠ ಶುಭ ಹಾರೈಸಿದರು.

Chandrayaan 3: Special Pooja by Students at Ganesh temple for success of Chandrayaan 3

ಗಣೇಶನಿಗೆ ಪೂಜೆ ಸಲ್ಲಿಸಿದ ವಿದ್ಯಾರ್ಥಿಗಳು

ಚಂದ್ರಯಾನ-3 ಯಶಸ್ವಿಗೆ ಧಾರವಾಡದ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಗಣೇಶನಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು. ವಿದ್ಯಾರ್ಥಿಗಳು ಲ್ಯಾಂಡರ್ ಮತ್ತು ರೋವರ್ಗಳ ಮಾದರಿಯನ್ನು ರೆಡಿ ಮಾಡಿ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಗಣೇಶನಿಗೆ ಪೂಜೆ ಸಲ್ಲಿಸಿ ಶುಭ ಹಾರೈಸಿದರು. ಹಾಗೆಯೇ ಕಲಾವಿದ ಮಂಜುನಾಥ್ ಅವರು ಚಂದ್ರನ ಮೇಲೆ ರೋವರ್ ಇಳಿಸಿದ ರೀತಿಯ ಕಲಾಕೃತಿ ರಚನೆ ಮಾಡಿ ಗಮನ ಸೆಳೆದಿದರು.

ರಂಗೋಲಿಯಲ್ಲಿ ಅರಳಿದ ಲ್ಯಾಂಡರ್

ಹಾಗೆಯೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಲಾವಿದರೊಬ್ಬರು ರಂಗೋಲಿಯಲ್ಲಿ ಚಂದ್ರಯಾನ -3ರ ವಿಕ್ರಮ್ ಲ್ಯಾಂಡರ್ ಅನ್ನು ತಯಾರು ಮಾಡಿ ಗಮನ ಸೆಳೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಕಲಾವಿದರೊಬ್ಬರು ಮುಂಜಾಗ್ರತಾ ಕ್ರಮ, ಮಾಹಿತಿ ತಂತ್ರಜ್ಞಾನ ಹಾಗೂ ಉಡಾವಣೆ ಪ್ರಕ್ರಿಯೆಯನ್ನು ರಂಗೋಲಿಯಲ್ಲಿ ತಮ್ಮದೇ ಶೈಲಿಯಲ್ಲಿ ಬಿಡಿಸುವ ಮೂಲಕ ಶುಭಹಾರೈಸಿದ್ದಾರೆ. ನಗರದ ಶಾಂತಿನಿಕೇತನ ಬಡಾವಣೆ ನಿವಾಸಿ ಕಲಾವಿದ ದಿನೇಶ್ ಚಿಲ್ಲಾಳ ಅವರ ರಂಗೋಲಿ ಕಲೆಯಲ್ಲಿ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್‌ನ ಪ್ರತಿಕೃತಿ ಅರಳಿದೆ.

ನಾಲ್ಕು ವರ್ಷಗಳ ಹಿಂದೆ 2019ರಲ್ಲಿ ಚಂದ್ರಯಾನ-2 ರ ಉಡಾವಣೆ ವಿಫಲವಾದ ನಂತರ ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಕ್ಷಣಗಣೆ ಆರಂಭವಾಗಿದೆ. 615 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ಮಹತ್ವಾಕಾಂಕ್ಷೆಯ ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡ್‌ ಆಗಲಿದೆ.

ನಂತರ ರೋವರ್‌ನ ನಿಯೋಜನೆಯು ವಿವಿಧ ಪ್ರಯೋಗಗಳನ್ನು ನಡೆಸುತ್ತದೆ. ಮತ್ತು ಚಂದ್ರನ ಗುಣಲಕ್ಷಣಗಳಾದ ಭೂಕಂಪನ, ಪ್ಲಾಸ್ಮಾ ಪರಿಸರ ಮತ್ತು ಸಂಯೋಜನೆಯನ್ನು ಅಧ್ಯಯನ ಮಾಡಿರುವ, ಹಾಗೂ ಚಂದ್ರಯಾನ-3 ಮಿಷನ್‌ಗಾಗಿ ಇಸ್ರೋ ಮೂರು ಮುಖ್ಯ ಉದ್ದೇಶಗಳಾದ ಚಂದ್ರನ ಮೇಲೆ ಸುರಕ್ಷಿತ ಮತ್ತು ಸೌಮ್ಯವಾದ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಸಾಧಿಸುವುದು, ಚಂದ್ರನ ಮೇಲ್ಮೈಯಲ್ಲಿ ಚಲಿಸುವ ರೋವರ್ ಸಾಮರ್ಥ್ಯವನ್ನು ಪ್ರದರ್ಶಿಸುವುದು, ನೇರವಾಗಿ ವೈಜ್ಞಾನಿಕ ವೀಕ್ಷಣೆಗಳನ್ನು ನಡೆಸುವುದು ಮುಂತಾದ ಮಾಹಿತಿಯನ್ನು ರಂಗೋಲಿ ಮೂಲಕ ಬಿಂಬಿಸಿದ್ದಾರೆ.‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+