Sara Ali Khan: ಉತ್ತರ ಕರ್ನಾಟಕದ ಪ್ರಸಿದ್ಧ ದೇಗುಲಕ್ಕೆ ಬಾಲಿವುಡ್ ಬೆಡಗಿ ಭೇಟಿ!
ಹುಬ್ಬಳ್ಳಿ, ಏಪ್ರಿಲ್ 04: ವಿವಿಧ ಸಿನಿಮಾಗಳಲ್ಲಿ ಬ್ಯೂಸಿ ಇರುವ ಬಾಲಿವುಡ್ ಖ್ಯಾತ ನಟಿ ಸಾರಾ ಅಲಿಖಾನ್ (Sara Ali Khan) ನಗರದ ಕರ್ನಾಟಕದ ಹುಬ್ಬಳ್ಳಿಯ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಳು ಐತಿಹಾಸಿಕ ದೇಗುಲಕ್ಕೆ ಭೇಟಿ ನೀಡುವುದು ಇದೇ ಮೊದಲೇನಲ್ಲ. ಅನೇಕ ಭೇಟಿ ನೀಡಿದಂತೆ ನಟಿ ಸಾರಾ ಅಲಿಖಾನ್ ಸಹ ಹುಬ್ಬಳ್ಳಿಗೆ ಬಂದು ಶ್ರೀ ಚಂದ್ರಮೌಳೇಶ್ವರ ದೇವರ ದರ್ಶನ ಮಾಡಿದ್ದಾರೆ.
ಹಿಂದಿನಿಂದಲೂ ಬಾಲಿವುಡ್ ನಟ-ನಟಿಯರು ಹಾಗೂ ನಿರ್ಮಾಪಕರು ಕರ್ನಾಟಕದ ಐತಿಹಾಸಿಕ ಹಾಗೂ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಿಗೆ ಬರುತ್ತಾರೆ. ಬಂದವರೆಲ್ಲ ಬಹುತೇಕ ಕರ್ನಾಟಕದ ಕರಾವಳಿ ಭಾಗದ ದೇವಾಲಯಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಆದರೆ ಇದೀಗ ಬಾಲಿವುಡ್ನ ಯುವ ನಟಿ ಸಾರಾ ಅಲಿ ಖಾನ್, ಹುಬ್ಬಳ್ಳಿಯ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿರುವುದು ಗಮನ ಸೆಳೆದಿದೆ. ಅಭಿಮಾನಿಗಳ ಕುತೂಹಲಕ್ಕೂ ಕಾರಣವಾಗಿದೆ.

ಬಾಲಿವುಡ್ ನಟ, ನಟಿಯರಿಗಿಂತ ಸಾರಾ ಭಿನ್ನ
ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ, ನಟ ಸುನಿಲ್ ಶೆಟ್ಟಿ, ನಟಿ ಕತ್ರಿನಾ ಕೈಫ್ ನೆರೆಯ ರಾಜ್ಯದ ಜೂ ಎನ್ಟಿಆರ್ ಇನ್ನೂ ಕೆಲವು ಪ್ರಮುಖ ನಟ-ನಟಿಯರು ಕರ್ನಾಟಕದ ಕರಾವಳಿ ಭಾಗದ ಐತಿಹಾಸಿಕ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿದ್ದರು. ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು. ಇದೀಗ ಬಾಲಿವುಡ್ನ ಇನ್ನೊಬ್ಬ ಯುವಟಿಯೊಬ್ಬರು ಕರ್ನಾಟಕದ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ್ದಾರೆ, ಇತರರಂತೆ ಕರಾವಳಿಯ ದೇವಾಲಯದ ಬದಲಿಗೆ ಹುಬ್ಬಳ್ಳಿಯ ಪ್ರಮುಖ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಬಾಲಿವುಡ್ನ ಸ್ಟಾರ್ ಯುವನಟಿ ಸಾರಾ ಅಲಿ ಖಾನ್ ಹುಬ್ಬಳ್ಳಿಯ ಉಣಕಲ್ನ ಚಂದ್ರಮೌಳೀಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸರಳವಾಗಿ ಸೆಲ್ವಾರ್ ಕಮೀಜ್ ತೊಟ್ಟು ದೇವಾಲಯಕ್ಕೆ ಬಂದಿದ್ದ ಸಾರಾ ಅಲಿ ಖಾನ್, ದೇವಾಲಯದ ಆವರಣದಲ್ಲಿ ಕೆಲ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ. ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಂದ್ರಮೌಳೇಶ್ವರ ದೇವಾಲಯ, ಉಣಕಲ್ ಎಂದು ಲೊಕೇಶನ್ ಅನ್ನು ಪಿನ್ ಸಹ ಮಾಡಿದ್ದಾರೆ.
ನಟಿ ಸಾರಾ ಅಲಿ ಖಾನ್ ತಂದೆ ಸೈಫ್ ಅಲಿ ಖಾನ್ ಕೆಲ ವಾರಗಳ ಹಿಂದಷ್ಟೆ ಅಗಂತುಕನೊಬ್ಬನಿಂದ ಚಾಕು ಇರಿತಕ್ಕೆ ಒಳಗಾಗಿದ್ದರು. ಆ ಸಮಯದಲ್ಲಿ ಹೊತ್ತಿದ್ದ ಹರಕೆ ತೀರಿಸಲು ಸಾರಾ ಅಲಿ ಖಾನ್ ಇಷ್ಟು ದೂರ ಚಂದ್ರಮೌಳೇಶ್ವರ ದೇವಾಲಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಸಾರಾ ಅಲಿ ಖಾನ್, ಹುಬ್ಬಳ್ಳಿಯ ದೇವಾಲಯಕ್ಕೆ ಬಂದ ಚಿತ್ರಗಳನ್ನು ಅವರ ಅಭಿಮಾನಿಗಳು, ಸ್ಥಳೀಯ ನೆಟ್ಟಿಗರು ಶೇರ್ ಮಾಡಿದ್ದು ವೈರಲ್ ಆಗಿದೆ. ಇನ್ನು ಶಾಸಕ ಮಹೇಶ್ ಟೆಂಗಿನಕಾಯಿ ಸಹ ತಮ್ಮ ಪೇಸ್ ಬುಕ್ ಪೋಸ್ಟ್ ಮಾಡಿದ್ದು ಸಾರಾ ಅಲಿಖಾನ್ ಭೇಟಿ ಹಿಂದು ಧರ್ಮದ ಸಮನ್ವಯತೆಗೆ ಸಾಕ್ಷಿ ಎಂದು ಬಣ್ಣಿಸಲಾಗುತ್ತಿದೆ.












Click it and Unblock the Notifications