ಪುಣೆ-ಬೆಳಗಾವಿ ಇಂಟರ್ ಸಿಟಿ ರೈಲು ಹುಬ್ಬಳ್ಳಿ ತನಕ ವಿಸ್ತರಣೆ

ಹುಬ್ಬಳ್ಳಿ, ನವೆಂಬರ್ 28 : ಪುಣೆ-ಬೆಳಗಾವಿ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ ತನಕ ವಿಸ್ತರಣೆ ಮಾಡಲಾಗುತ್ತದೆ. ರೈಲು ಆರಂಭಿಸಲು ಇಲಾಖೆ ಈಗಾಗಲೇ ಒಪ್ಪಿಗೆ ನೀಡಿದ್ದು, ಸಮಯ, ಸಂಚಾರದ ದಿನಾಂಕ ಅಂತಿಮಗೊಳ್ಳಬೇಕಿದೆ.

ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಪುಣೆ- ಬೆಳಗಾವಿ ನಡುವೆ ಇಂಟರ್ ಸಿಟಿ ರೈಲನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದಾರೆ. ಟ್ವೀಟರ್‌ನಲ್ಲಿಯೂ ಈ ಕುರಿತು ಮಾಹಿತಿ ನೀಡಿದ್ದಾರೆ.

ರೈಲನ್ನು ಯಾವ ಸಮಯದಲ್ಲಿ ಓಡಿಸಬೇಕು ಎಂದು ಜನರಿಂದ ಸಲಹೆಯನ್ನು ಸುರೇಶ್ ಅಂಗಡಿ ಕೇಳಿದ್ದಾರೆ. ನವೆಂಬರ್ 30ರೊಳಗೆ ಸಲಹೆ ನೀಡುವಂತೆ ಕೋರಿದ್ದಾರೆ. ಈ ರೈಲನ್ನು ಈಗ ಹುಬ್ಬಳ್ಳಿ ತನಕ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ.

Belagavi Pune Intercity Express Rail Extends Till Hubballi

ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರೈಲನ್ನು ಹುಬ್ಬಳ್ಳಿ ತನಕ ವಿಸ್ತರಣೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಆದ್ದರಿಂದ, ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ. ರೈಲು ಸಂಚಾರ ಆರಂಭವಾಗುವ ದಿನಾಂಕ ಅಧಿಕೃತವಾಗಿ ಘೋಷಣೆಯಾಗಬೇಕು.

ಈ ರೈಲು ಬೆಳಗಾವಿಯಿಂದ ಪುಣೆ ನಿಲ್ದಾಣಕ್ಕೆ 5 ರಿಂದ 6 ಗಂಟೆಯೊಳಗೆ ತಲುಪಲಿದೆ. ಬೆಳಗಾವಿಯಿಂದ ಹುಬ್ಬಳ್ಳಿಗೆ 2 ಗಂಟೆಗಳಲ್ಲಿ ತಲುಪಲಿದೆ. ಪ್ರಸ್ತುತ ಈ ಮಾರ್ಗದಲ್ಲಿ ಸಂಚಾರ ನಡೆಸುವ ಯಾವ ರೈಲುಗಳನ್ನು ರದ್ದುಪಡಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ರೈಲು ಹುಬ್ಬಳ್ಳಿ ತನಕ ವಿಸ್ತರಣೆಯಾದರೆ ಬೆಳಗಾವಿಗಿಂತ ಹುಬ್ಬಳ್ಳಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಆಕ್ಷೇಪವೂ ಇದೆ. ಈಗಾಗಲೇ ಹುಬ್ಬಳ್ಳಿಯಿಂದ ಹಲವು ರೈಲುಗಳಿವೆ. ಈಗ ಹೊಸ ರೈಲು ಆರಂಭಿಸುವುದು ಸರಿಯಲ್ಲ ಎಂಬ ಆಗ್ರಹವೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+