ಬೇಂದ್ರೆ ನಿವಾಸಕ್ಕೆ ಅಮಿತ್‌ ಶಾ ಭೇಟಿ, ಸಕ್ಕರೆ ನೀಡಿ ಸ್ವಾಗತ

Posted By:
Subscribe to Oneindia Kannada

ಧಾರವಾಡ, ಏಪ್ರಿಲ್ 12: ಕಳೆದ ಬಾರಿಯ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಕುವೆಂಪು ಅವರ ನಿವಾಸಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ವರಕವಿ ಬೇಂದ್ರೆ ಅವರ ನಿವಾಸಕ್ಕೆ ಭೇಟಿ ನೀಡಿದರು.

ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಅಮಿತ್ ಶಾ ಭೇಟಿ

ಸಾಧನಕೇರಿಗೆ ರಾಜ್ಯ ಬಿಜೆಪಿ ಮುಖಂಡರ ಜೊತೆ ತೆರಳಿದ ಅಮಿತ್ ಶಾ ಅವರು ಮೊದಲಿಗೆ ಬೇಂದ್ರೆ ಭವನಕ್ಕೆ ಭೇಟಿ ನೀಡಿ ಅಲ್ಲಿ ಕೆಲ ಸಮಯ ಕಳೆದರು ನಂತರ ಅಲ್ಲಿಂದ ಪಕ್ಕದಲ್ಲೇ ಇರುವ ಬೇಂದ್ರೆ ಅವರ ನಿವಾಸಕ್ಕೆ ತೆರಳಿದರು.

ಗುರುವಾರ ಹುಬ್ಬಳ್ಳಿಗೆ ಅಮಿತ್ ಶಾ, ಕಾರ್ಯಕ್ರಮಗಳು

ಬೇಂದ್ರೆ ಅವರು ಇದ್ದಾಗಿನಿಂದಲೂ ಮನೆಗೆ ಬರುವವರಿಗೆ ಸಕ್ಕರೆ ನೀಡಿ ಸ್ವಾಗತಿಸುವ ಪರಿಪಾಠ ಇಂದೂ ಸಹ ಬೇಂದ್ರೆ ಕುಟುಂಬಸ್ಥರು ಮುಂದುವರೆಸಿದ್ದು, ಅಮಿತ್ ಶಾ ಅವರಿಗೆ ಸಕ್ಕರೆ ನೀಡಿ ಸ್ವಾಗತಿಸಿದರು.

Amith Shah visits Bendres House in Sadanakeri

ಬೇಂದ್ರೆ ಅವರ ಸೊಸೆ ಪದ್ಮಾಬಾಯಿ ಬೇಂದ್ರೆ ಅವರನ್ನು ಶಾ ಸನ್ಮಾನಿಸಿದರು. ಬೆಂದ್ರೆ ಕುಟುಂಬದಿಂದ ನಾಕು ತಂತಿಯ ಇಂಗ್ಲಿಷ್ ಅನುವಾದ ಕವನ ಗುಚ್ಚ ಪುಸ್ತಕ ನೀಡಿದರು. ಬೇಂದ್ರೆ ಪ್ರತಿಷ್ಠಾನದ ಅಧ್ಯಕ್ಷ ಡಾ. ಡಿ.ಎಂ.ಹಿರೇಮಠ್ ಅವರು ಬೇಂದ್ರೆ ಬದುಕು, ಬರಹ ಕುರಿತ ಕಿರು ಹೊತ್ತಿಗೆಯನ್ನು ಶಾಗೆ ನೀಡಿ ಸನ್ಮಾನಿಸಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

Amith Shah visits Bendres House in Sadanakeri

ಎರಡು ದಿನಗಳ ಪ್ರಚಾರಕ್ಕೆಂದು ರಾಜ್ಯಕ್ಕೆ ಆಗಮಿಸಿರುವ ಅಮಿತ್ ಶಾ ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿಯ ಸಿದ್ಧಾರೂಡ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು, ನಂತರ ಲೋಕಸಭೆಯಲ್ಲಿ ಸುಗಮ ಅಧಿವೇಶನಕ್ಕೆ ಪ್ರತಿಪಕ್ಷಗಳ ಅಸಹಕಾರ ಖಂಡಿಸಿ ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಿದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ, ರಾಜೀವ ಚಂದ್ರಶೇಖರ ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರ, ಮುಖಂಡರು ಅಮಿತ್ ಶಾ ಜೊತೆಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP national president Amit Shah vists Karnataka's famous poet Bendre's house in Sadanakeri today. He visited Siddaruda Mutt early today. He was visiting Bagalkote and many other places today and tomorrow.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ