ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಟರ್ಮಿನಲ್ ಆರಂಭ

ಹುಬ್ಬಳ್ಳಿ, ಡಿಸೆಂಬರ್ 11 : ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿ ಸುದ್ದಿ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೆಲವೇ ತಿಂಗಳಿನಲ್ಲಿ ಕಾರ್ಗೋ ಸೇವೆ ಆರಂಭವಾಗಿದೆ. ನವೆಂಬರ್ ತಿಂಗಳಿನಲ್ಲಿ ಹುಬ್ಬಳ್ಳಿಯಿಂದ 307 ವಿಮಾನಗಳು ಹಾರಾಟ ನಡೆಸಿವೆ.

ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದಿಂದ ಸರಕು ಸಾಗಣೆ ಸೇವೆ (ಕಾರ್ಗೋ) ಆರಂಭವಾಗಲಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸೇವೆ ಆರಂಭಿಸಲು ಈಗಾಗಲೇ ಒಪ್ಪಿಗೆ ನೀಡಿದೆ. ಎರಡು ತಿಂಗಳಿನಲ್ಲಿ ಸೇವೆ ಆರಂಭವಾಗಲಿದೆ.

ಹುಬ್ಬಳ್ಳಿಗೆ ಸರಕುಗಳನ್ನು ತರಿಸಿಕೊಳ್ಳಲು, ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಪ್ರತ್ಯೇಕ ಟರ್ಮಿನಲ್ ಸ್ಥಾಪನೆ ಮಾಡಲಾಗಿದೆ. ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿವೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ಟ್ವೀಟ್‌ನಲ್ಲಿ ತಿಳಿಸಿದೆ.

Airport All Set For Open Dedicated Cargo Terminal

ಹುಬ್ಬಳ್ಳಿಯ ಕೈಗಾಕೋದ್ಯಮಿಗಳ ಸಂಘ ಕಾರ್ಗೋ ಸೇವೆಯನ್ನು ಆರಂಭಿಸಬೇಕು ಎಂದು ಮನವಿಯನ್ನು ಸಲ್ಲಿಸಿತ್ತು. ಈಗ ಇದಕ್ಕೆ ಒಪ್ಪಿಗೆ ಸಿಕ್ಕಿರುವುದರಿಂದ ನಗರದಲ್ಲಿನ ವಾಣಿಜ್ಯ ಚಟುವಟಿಕೆಗಳಿಗೆ ಸಹಾಯವಾಗಿದೆ. ಉದ್ಯಮಿಗಳು ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಮೇ ತಿಂಗಳಿನಲ್ಲಿ ಕೋವಿಡ್ ಕಾರಣಕ್ಕಾಗಿ 4 ವಿಮಾನಗಳು ಮಾತ್ರ ಹುಬ್ಬಳ್ಳಿಯಿಂದ ಹಾರಾಟ ನಡೆಸುತ್ತಿದ್ದವು. ಈಗ ದೆಹಲಿ, ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೂ ಸಹ ಹುಬ್ಬಳ್ಳಿಯಿಂದ ವಿಮಾನಗಳು ಹಾರಾಟ ನಡೆಸುತ್ತವೆ.

Airport All Set For Open Dedicated Cargo Terminal

ಸೆಪ್ಟೆಂಬರ್‌ನಲ್ಲಿ 174, ಅಕ್ಟೋಬರ್‌ನಲ್ಲಿ 225 ಮತ್ತು ನವೆಂಬರ್‌ನಲ್ಲಿ 307 ವಿಮಾನಗಳು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಾರಾಟವನ್ನು ನಡೆಸಿವೆ. ಪ್ರಯಾಣಿಕರ ಸಂಖ್ಯೆ ಸಹ ವಿಮಾನ ನಿಲ್ದಾಣದಲ್ಲಿ ಹೆಚ್ಚಾಗುತ್ತಿದೆ. ಸರಕು ಸೇವೆ ಸಾಗಣೆ ಆರಂಭವಾದರೆ ವಿಮಾನ ನಿಲ್ದಾಣ ಮತ್ತಷ್ಟು ಬ್ಯುಸಿಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+