ಉಕ್ರೇನ್‌ನಲ್ಲಿ ಸಾವನ್ನಪ್ಪಿದ ಹಾವೇರಿಯ ನವೀನ್ ಕುಟುಂಬಕ್ಕೆ ಕರೆ ಮಾಡಿದ ಪ್ರಧಾನಿ ಮೋದಿ

ಹಾವೇರಿ, ಮಾರ್ಚ್ 1: ಉಕ್ರೇನ್​​ನಲ್ಲಿ ರಷ್ಯಾ ಮಿಲಿಟರಿ ಪಡೆಯ ದಾಳಿಗೆ ಮೃತರಾದ ಕರ್ನಾಟಕದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ನವೀನ್ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

ಉಕ್ರೇನ್‌ನ ಖಾರ್ಕೀವ್‌ನಲ್ಲಿನ ಸೂಪರ್ ಮಾರ್ಕೆಟ್ ಬಳಿಯಲ್ಲಿ ಬೆಳಗ್ಗೆ ತಿಂಡಿ ತರುವುದಕ್ಕೆ ತೆರಳುತ್ತಿದ್ದಂತೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್, ರಷ್ಯಾ ಸೇನೆಯಿಂದ ನಡೆಸಿದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದರು.

Recommended Video

      ಮೃತ ನವೀನ್ ತಂದೆಗೆ ಕರೆ ಮಾಡಿದ ಮೋದಿ ಹೇಳಿದ್ದೇನು | Oneindia Kannada

      ನವೀನ್​ ಸಾವನ್ನಪ್ಪಿರುವ ವಿಷಯವನ್ನು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ನವೀನ್ ತಂದೆ ಶೇಖರಪ್ಪ ಗೌಡಗೆ ಕರೆ ಮಾಡಿ ಕೆಲ ನಿಮಿಷಗಳ ಕಾಲ ಮಾತನಾಡಿದ್ದು, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

      Prime Minister Narendra Modi Has Called To Family of Naveen Who Died in Ukraine

      ದೇಶವೇ ನಿಮ್ಮೊಂದಿಗಿದೆ, ಮಗನ ಸಾವನ್ನು ಅರಗಿಸಿಕೊಳ್ಳುವಂತ ಶಕ್ತಿಯನ್ನು ಆ ದೇವರು ನೀಡಲಿ. ಭಗವಂತ ನಿಮ್ಮ ಕುಟುಂಬಕ್ಕೆ ಮಗನ ಸಾವಿನ ದುಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಸಾಂತ್ವನ ಹೇಳಿದ್ದಾರೆ.

      ಆಗಬಾರದ್ದು ಆಗಿಹೋಗಿದೆ. ಉಕ್ರೇನಲ್ಲಿ ಓದುತ್ತಿದ್ದ ನಮ್ಮ ಕನ್ನಡದ ಹುಡುಗ ಹಾವೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಆ ದೇಶದ ಮೇಲೆ ರಷ್ಯಾ ನಡೆಸುತ್ತಿರುವ ಶೆಲ್ಲಿಂಗ್‌ಗೆ ಮಂಗಳವಾರ ಬೆಳಗ್ಗೆ ಬಲಿಯಾಗಿದ್ದಾರೆ.

      Prime Minister Narendra Modi Has Called To Family of Naveen Who Died in Ukraine

      ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೀನ್​ ಅವರ ತಂದೆಯೊಂದಿಗೆ ಫೋನಿನಲ್ಲಿ ಮಾತಾಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಡಿಯೋನಲ್ಲಿ ಪ್ರಧಾನಿ ಮೋದಿ ಅವರು ಮಾತಾಡುತ್ತಿರುವ ಧ್ವನಿ ಕೇಳಿಸುತ್ತಿಲ್ಲ. ಆದರೆ ಅಪಾರ ದುಃಖದಲ್ಲಿರುವ ನವೀನ ತಂದೆ ಶೇಖರಪ್ಪನವರು ಮಾತ್ರ ಅಳುತ್ತಾ ಗದ್ಗದಿತ ಧ್ವನಿಯಲ್ಲಿ, 'ಹಾಂ ಸರ್, ಠೀಕ್ ಹೈ ಸರ್, ಪ್ರಣಾಮ ಸರ್,' ಮತ್ತು ಕೊನೆಯಲ್ಲಿ 'ಹಾಂ ಸರ್, ಶುಕ್ರಿಯಾ ಸರ್ ಮತ್ತು ಪ್ರಣಾಮ್ ಸರ್,' ಅಂತ ಹೇಳುತ್ತಾರೆ.

      Prime Minister Narendra Modi Has Called To Family of Naveen Who Died in Ukraine

      ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ
      ಉಕ್ರೇನ್‌ನಲ್ಲಿ ರಷ್ಯಾದ ಶೆಲ್ ದಾಳಿಗೆ ಮೃತಪಟ್ಟ ಕನ್ನಡಿಗ, ಹಾವೇರಿ ಜಿಲ್ಲೆ ಚಳಗೇರಿ ಗ್ರಾಮದ ನವೀನ್ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರಿಸಲು ಅಗತ್ಯ ನೆರವು ಕಲ್ಪಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

      ರಷ್ಯಾದ ಬಾಂಬ್ ದಾಳಿಗೆ ಬಲಿಯಾಗಿರುವ ನವೀನ್ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆ ಮಾಡಿ ನವೀನ್​ ತಂದೆಗೆ ಸಾಂತ್ವನ ಹೇಳಿದರು. ಈ ವೇಳೆ ಶೇಖರಪ್ಪ ಅವರಿಗೆ ಭರವಸೆ ನೀಡಿದ್ದಾರೆ. ನವೀನ್ ಕುಟುಂಬಕ್ಕೆ ಧೈರ್ಯತುಂಬಿದ ಯಡಿಯೂರಪ್ಪ, ಕುಟುಂಬದ ಜೊತೆ ನಾವಿದ್ದೇವೆ ಎನ್ನುವ ಅಭಯ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+