ಮದುವೆ ಆಗಬೇಕಿದೆ, ಹುಡುಗಿ ಹುಡುಕಿ ಕೊಡಿ: ಹಾನಗಲ್ ವೃದ್ಧನ ಪತ್ರ
ಹಾವೇರಿ, ಫೆಬ್ರವರಿ 01: ಜಿಲ್ಲೆಯ ಹಾನಗಲ್ ತಾಲ್ಲೂಕಿನ ವೃದ್ಧನೊಬ್ಬ ಮದುವೆ ಆಗಲು ಹುಡುಗಿ ಹುಡುಕಿಕೊಡಿ ಎಂದು ಪಂಚಾಯಿತಿ ಗೆ ಪತ್ರ ಬರೆದಿದ್ದಾರೆ.
ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮದ ದ್ಯಾವನಗುಡಿ ಪೂಜಾರಿ ಹೀಗೊಂದು ಮನವಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಿಡಿಓ ಗೆ ಮಾಡಿದ್ದಾರೆ.
ವೃದ್ಧ ದ್ಯಾವಣ್ಣ ಕುಮಾರ ಗೆ ಸುಮಾರು 60 ವರ್ಷವಾಗಿದ್ದು, ಕುಂದು-ಕೊರತೆಗಳ ಬಗ್ಗೆ ಪಂಚಾಯಿತಿಗೆ ಮನವಿ ಸಲ್ಲಿಸಿ ಎಂದು ಪಿಡಿಓ ಹೇಳಿದ್ದ ಮಾತಿನಂತೆ, ತನಗಿರುವ 'ಕೊರತೆ'ಯಾದ ಮದುವೆ ಮಾಡಿಸಬೇಕೆಂದು ಪತ್ರದಲ್ಲಿ ಬರೆದು ನೀಡಿದ್ದಾರೆ.

'ನನಗೆ ಮದುವೆಯಾಗಿಲ್ಲ. ಕಾರಣ ನಾನು ಎಷ್ಟು ಹುಡುಕಿದರೂ ಕನ್ಯೆ ಸಿಗುತ್ತಿಲ್ಲ. ಅಡುಗೆ ಮಾಡಲು ಯಾರೂ ಇಲ್ಲ. ಆದ್ದರಿಂದ ನನಗೆ ಮದುವೆಯಾಗುವ ಆಸೆಯಾಗಿದೆ. ನೀವು ನನಗೆ ಕನ್ಯೆ ಹುಡುಕಿಸಿ ಮದುವೆ ಮಾಡಬೇಕು' ಎಂದು ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಓ ಹೆಸರು ಉಲ್ಲೇಖಿಸಿ ಪತ್ರ ಬರೆದಿದ್ದಾರೆ.
ವೃದ್ಧ ದ್ಯಾವಣ್ಣ ಕುಮಾರ ಬರೆದಿರುವ ಪತ್ರ ಸಾಮಾಜಿಕ ಜಾಲಾಣದಲ್ಲಿ ವೈರಲ್ ಆಗಿದೆ.












Click it and Unblock the Notifications