ಹಿರೇಕೆರೂರಿನ ಹಿರಿಯ ರಾಜಕಾರಣಿ ಬಿ.ಜಿ. ಬಣಕಾರ ವಿಧಿವಶ

ಹಿರೇಕೆರೂರು, ಫೆಬ್ರವರಿ 08: ಹಾವೇರಿ ಜಿಲ್ಲೆಯ ಹಿರೇಕೆರೂರಿನ ಹಿರಿಯ ರಾಜಕಾರಣಿ, ಬಿ.ಜಿ. ಬಣಕಾರ (91) ಹಿರೇಕೆರೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಗುರುವಾರ ಮಧ್ಯಾಹ್ನ ಹಿರೇಕೆರೂರಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ. ಬಣಕಾರ ಅವರ ನಿಧನಕ್ಕೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ. ಬಣಕಾರ ಅವರು ಹಾಲಿ ಶಾಸಕ ಯು.ಬಿ ಬಣಕಾರ ಸೇರಿದಂತೆ ಮೂವರು ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Former LS speaker BG Banakar dead

1972ರಲ್ಲಿ ಕಾಂಗ್ರೆಸ್, 1983ರಲ್ಲಿ ಪಕ್ಷೇತರ ಮತ್ತು 1985ರಲ್ಲಿ ಜನತಾದಳದಿಂದ ಹಿರೇಕೆರೂರು ಕ್ಷೇತ್ರದ ಶಾಸಕರಾಗಿದ್ದರು.

ದೇವರಾಜ್ ಅರಸು ಸಂಪುಟದಲ್ಲಿ ಪಶುಸಂಗೋಪನೆ ಸಚಿವರಾಗಿ ಸೇವೆ ಸಲ್ಲಿಸಿ, ರಾಮಕೃಷ್ಣ ಹೆಗಡೆಯವರ ಅವಧಿಯಲ್ಲಿ ವಿಧಾನಸಭೆ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು.

ಇವರಿಗೆ ಹಿರೇಕೆರೂರು ಬಿಜೆಪಿ ಶಾಸಕ ಯು.ಬಿ.ಬಣಕಾರ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+