ವಿಡಿಯೋ: ಗಳಗಳನೇ ಅತ್ತ ದೊಡ್ಡಗೌಡ್ರು, ಜೊತೆಯಾದ ಮೊಮ್ಮಗ!

Recommended Video

      Lok Sabha Elections 2019 : ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರು ಹಾಕಿದ ಎಚ್ ಡಿ ದೇವೇಗೌಡ ಹಾಗು ಪ್ರಜ್ವಲ್ ರೇವಣ್ಣ

      'ದೇವೇಗೌಡ್ರು ಅತ್ಬಿಟ್ರಂತೆ!' ಅನ್ನೋ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಸುದ್ದಿಯಾಗಿ, ಟ್ರೆಂಡಿಂಗ್ ಟ್ರೋಲ್ ಆಗಿ ತರಹೇವಾರಿ ಕಮೆಂಟ್ ಗಳಿಗೆ ಎಡೆ ಮಾಡಿಕೊಟ್ಟಿದೆ. ದೇವೇಗೌಡರು ಮತ್ತು ಮೊಮ್ಮಗ ಪ್ರಜ್ವಲ್ ರೇವಣ್ಣ, ಸೊಸೆ ಭವಾನಿ ರೇವಣ್ಣ ಅವರು ವೇದಿಕೆಯಲ್ಲೇ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      'ದೇವೇಗೌಡರು ಕೇವಲ ತಮ್ಮ ಕುಟುಂಬಕ್ಕೆ ಮಾಡ್ತಾರೆ ಅಂತಾರೆ. ಆದ್ರೆ ನಮ್ಮ ಕುಟುಂಬದಲ್ಲಿ ಯಾರೂ ತಮಗಾಗಿ ಏನನ್ನೂ ಮಾಡಿಕೊಂಡಿಲ್ಲ. ಈ ದೇಹದಲ್ಲಿ ಶಕ್ತಿ ಇರೋವರೆಗೂ ನಾನು ಜನರಿಗಾಗಿ ಕೆಲಸ ಮಾಡುತ್ತೇನೆ' ಎಂದು ಭಾವುಕರಾದ ಮಾಜಿ ಪ್ರಧಾನಿ ದೇವೇಗೌಡರು, ಗಳಗಳನೇ ಅತ್ತುಬಿಟ್ಟರು!

      Viral Video: HD Deve Gowda and Prajwal Revanna become emotions on a stage in Hassa

      ನಂತರ ಹಾಸನಕ್ಕೆ ಪ್ರಜ್ವಲ್ ರೇವಣ್ಣ ಅಧಿಕೃತ ಅಭ್ಯರ್ಥಿ ಎಂದು ಅವರೇ ಘೋಷಿಸುತ್ತಿದ್ದಂತೆಯೇ, 'ತಾತ' ನಿಗೆ ಸಾಥ್ ನೀಡುವಂತೆ ಪ್ರಜ್ವಲ್ ರೇವಣ್ಣ ಅವರೂ ಬಿಕ್ಕಿ ಬಿಕ್ಕಿ ಅತ್ತರು. ಅದೇ ವೇದಿಕೆಯಲ್ಲಿದ್ದ ಭವಾನಿ ರೇವಣ್ಣ ಅವರ ಕಣ್ಣಂಚಿನಲ್ಲೂ ನೀರಿತ್ತು. ಈ ಎಲ್ಲ ಪ್ರಹಸನಗಳಿಗೂ ಸಾಕ್ಷಿಯಾದ ಗೌಡರ ಕುಟುಂಬದ ಅಭಿಮಾನಿಗಳು ತಾತ-ಮೊಮ್ಮಗನಿಗೆ ಜೈಕಾರ ಹಾಕಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      ಅಷ್ಟಕ್ಕೂ ಈ ಘಟನೆ ನಡೆದಿದ್ದು ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿ. ಮೊಮ್ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದೇನೆ ಎನ್ನುವ ಊಲಕ ದೇವೇಗೌಡರು ಸಹಸ್ರಾರು ಅಭಿಮಾನಿಗಳಲ್ಲೂ ಕಣ್ಣೀರುಕ್ಕಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+