ವಿಡಿಯೋ; ಹಾಸನ ಪೊಲೀಸರು ಅಪಹರಣ ತಡೆದಿದ್ದು ಹೇಗೆ?

ಹಾಸನ, ಜುಲೈ 29; ಅಪಹರಣವಾಗುತ್ತಿದ್ದ ಯುವಕನನ್ನು ಪೊಲೀಸರು ರಕ್ಷಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಸನ ಪೊಲೀಸರು ಸಿನೀಮಯ ರೀತಿಯ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Recommended Video

      ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ ಪೊಲೀಸರು | Oneindia Kannada

      ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕಾಸರಗೋಡಿನ ಅನ್ವರ್ (33) ಎಂಬ ಯುವಕನನ್ನು ಅಪಹರಣ ಮಾಡಲಾಗಿತ್ತು. ಹಾಸನದ ಗೊರೂರಿನ ಮೂಲಕ ಸಾಗುತ್ತಿದ್ದ ಅವರನ್ನು ಪೊಲೀಸರು ಹಿಡಿದಿದ್ದಾರೆ.

      ರಸ್ತೆಗೆ ಅಡ್ಡಲಾಗಿ ಜೆಸಿಬಿ, ಲಾರಿ ನಿಲ್ಲಿಸಿಕೊಂಡು ಸಿನೀಮಯ ರೀತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿದರು. ಲಾರಿ ನೋಡಿದ ಅಪಹರಣಕಾರರ ತಂಡ ಕಾರನ್ನು ನಿಧಾನಗೊಳಿಸಿದೆ.

      Viral Video Hassan Police Rescued Youth From Kidnappers

      ಈ ಸಮಯದಲ್ಲಿ ಪೊಲೀಸರು ಕಾರಿನ ಹಿಂಬಾಗಿಲು ತೆಗೆದು ಯುವಕನನ್ನು ರಕ್ಷಣೆ ಮಾಡಿದ್ದಾರೆ. ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

      ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪಹರಣಕಾರರು ಕಾರನ್ನು ಯೂ ಟರ್ನ್ ಮಾಡಿ ವೇಗವಾಗಿ ಚಲಿಸಿ ಕಾಪೌಂಡ್‌ಗೆ ಗುದ್ದಿದ್ದಾರೆ. ಪೊಲೀಸರು ಕಾರ್ಯಾಚರಣೆಯಿಂದ ಯುವಕನನ್ನು ರಕ್ಷಣೆ ಮಾಡಲಾಗಿದೆ.

      ರಕ್ಷಣೆ ಮಾಡಿದ್ದ ಯುವಕನನ್ನು ಹಾಸನ ಪೊಲೀಸರು ಕಾಸರಗೋಡು ಪೊಲೀಸರು ವಶಕ್ಕೆ ಒಪ್ಪಿಸಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+