Prajwal Revanna Case: ರೇವಣ್ಣ ಮೇಲೆ ಸಾವಿರ ಎಫ್‌ಐಆರ್ ಆಗಲಿ: ಸೂರಜ್ ರೇವಣ್ಣ ಮೊದಲ ಪ್ರತಿಕ್ರಿಯೆ

ಬೆಂಗಳೂರು, ಮೇ 02: ಹಾಸನ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಅಣ್ಣ ಸೂರಜ್ ರೇವಣ್ಣ ಅವರು ಮೊದಲ ಭಾರಿಗೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದಾರೆ.

ಗುರುವಾರ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಸೂರಜ್ ರೇವಣ್ಣ ಅವರು, ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳ ಕುರಿತು ನನಗೆ ಮಾಹಿತಿ ಇಲ್ಲ. ಸದ್ಯ ಸರ್ಕಾರ ಎಸ್‌ಐಟಿಗೆ ತನಿಖೆಗೆ ನೀಡಿದೆ. ತನಿಖೆ ಏನೆಲ್ಲ ಸಾಬೀತಾಗಬೇಕೋ, ಸಾಬೀತಾಗಲಿದೆ ಎಂದು ಅವರು ಹೇಲಿದ್ದಾರೆ.

Prajwal Revanna Sex Scandal Case Suraj Revanna What First Reaction See More

ಇನ್ನೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಕುರಿತು ಪ್ರಕರಣದಲ್ಲಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರನ್ನು ಮೊದಲ ಆರೋಪಿಯಾಗಿ (ಎ1) ಮಾಡಲಾಗಿದೆ. ತಂದೆ ರೇವಣ್ಣ ಅವರ ಮೇಲೆ ಸಾವಿರ ಎಫ್‌ಐಆರ್‌ ಆಗಲಿ, ತನಿಖೆಯಿಂದ ಪ್ರಕರಣ ಸಾಬೀತಾಗಲಿದೆ ಎಂದು ತಿಳಿಸಿದ್ದಾರೆ.

ಸೂರಜ್ ರೇವಣ್ಣ ಡಿಕೆಶಿ ಭೇಟಿ ಆಗಿದ್ದು ಯಾಕೆ?

ಸೂರಜ್ ರೇವಣ್ಣ ಡಿಸಿಎಂ ಡಿಕೆಶಿ ಭೇಟಿ ವಿಚಾರಕ್ಕೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕಳೆದ ಜನವರಿ ತಿಂಗಳಿನಲ್ಲಿ ಭೇಟಿ ಮಾಡಿದ್ದೆ. ಅನುದಾನ ಮತ್ತು ಎಲ್‌ಒಸಿ ವಿಷಯವಾಗಿ ಭೇಟಿ ಮಾಡಿದ್ದೆ. ನಮ್ಮ ಜಿಲ್ಲೆಯ ಪ್ರತಿನಿಧಿಯಾಗಿ ನಾನು ಅವರನ್ನು ಭೇಟಿ ಮಾಡಿದ್ದೇನೆ. ಈ ಬಗ್ಗೆ ಮಾಧ್ಯಮಗಳಲ್ಲಿ ಅಂದೇ ವರದಿಯಾಗಿತ್ತು.

ಈಗ ಹೊಸದಾಗಿ ಭೇಟಿ ಮಾಡಲು ಹೇಗೆ ಸಾಧ್ಯ. ಬೆಂಗಳೂರಿಗೆ ಇವತ್ತಿನವರೆಗೂ ಹೋಗಿಲ್ಲ, ಒಂದು‌ ದಿನನೂ ಕೂಡ ಹೋಗಿಲ್ಲ. ಒಂದುವರೆ ತಿಂಗಳಿನಿಂದ ಬೆಂಗಳೂರಿಗೂ ಹೋಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇತ್ತ ಹೊರಗಡೆ ಎಚ್‌ಡಿ ಕುಮಾರಸ್ವಾಮಿ ಅವರು ಪೆನ್‌ಡ್ರೈವ್ ಹಗರಣದಲ್ಲಿ ಡಿಸಿಎಂ ಕೈವಾಡ ಇದೆ ಎಂದು ಆರೋಪಿಸಿದ್ದರು. ಇದೀಗ ಸೂರಜ್ ಭೇಟಿ ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+