ವಿಡಿಯೋ; ಮೂಡಿಗೆರೆ ಬಿಜೆಪಿ ಶಾಸಕರ ಕಾರು ಡಿಕ್ಕಿ, ಮಹಿಳೆ ಸಾವು
ಹಾಸನ, ಅಕ್ಟೋಬರ್ 04; ಮೂಡಿಗೆರೆ ಬಿಜೆಪಿ ಶಾಸಕ ಎಂ. ಪಿ. ಕುಮಾರಸ್ವಾಮಿ ಕಾರು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದಾಳೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ಚಾಲಕ ಪಾನಮತ್ತನಾಗಿದ್ದ? ಎಂಬ ಶಂಕೆ ಸಹ ಇದೆ.
ಭಾನುವಾರ ಸಂಜೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹನುಮಂತನಗರದ ಬಳಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಶಾಸಕ ಎಂ. ಪಿ. ಕುಮಾರಸ್ವಾಮಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿತ್ತು.
ಮೂಡಿಗೆರೆ ಬಿಜೆಪಿ ಶಾಸಕ ಎಂ. ಪಿ. ಕುಮಾರಸ್ವಾಮಿ ಕಾರು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದಾಳೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.#Mudigere #MPKumaraswamy #Accident pic.twitter.com/zgIHBphiJy
— oneindiakannada (@OneindiaKannada) October 4, 2021
ತಾಯಿ ಮತ್ತು ಬೈಕ್‌ನಲ್ಲಿದ್ದರು. ಅಪಘಾತದ ರಭಸಕ್ಕೆ ತಾಯಿ ಮೃತಪಟ್ಟಿದ್ದಾರೆ. ಮಗ ಗಾಯಗೊಂಡಿದ್ದಾನೆ. ಭಾನುವಾರ ಸಂಜೆ ಕಾರು ಅಪಘಾತವಾಗುವ ಸಂದರ್ಭದಲ್ಲಿ ಕಾರಿನಲ್ಲಿ ಶಾಸಕರು ಇರಲಿಲ್ಲ.

ಅಪಘಾತ ನಡೆಯುವ ಕೆಲವೇ ಕ್ಷಣಗಳ ಮೊದಲು ಕಾರು ಸಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅತಿವೇಗವಾಗಿ ಕಾರು ಚಲಿಸುತ್ತಿದ್ದು, ಸೈರನ್ ಹಾಕಿಕೊಂಡು ಸಹ ಚಾಲಕ ಸಾಗುತ್ತಿದ್ದ.ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಶಾಸಕರ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಮಹಿಳೆಯನ್ನು ಹೂವಮ್ಮ (55) ಎಂದು ಗುರುತಿಸಲಾಗಿದೆ. ಶಾಸಕರು ಕಾರಿನಲ್ಲಿ ಇರಲಿಲ್ಲ. ಕಾರನ್ನು ರಿಪೇರಿಗಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಶಾಸಕರ ಕಾರು ಚಾಲಕ ಹೇಳಿದ್ದಾನೆ.
ಅಪಘಾತದ ಬಗ್ಗೆ ಮಾತನಾಡಿರುವ ಕಾರು ಚಾಲಕ, "ಏಕಾಏಕಿ ಬೈಕ್ ಬಲಕ್ಕೆ ಬಂದಿದ್ದರಿಂದ ಕಾರು ಬೈಕ್‌ಗೆ ಡಿಕ್ಕಿಯಾಗಿದೆ" ಎಂದು ಹೇಳಿದ್ದಾರೆ. ಅದರೆ ಕಾರು ಅತಿವೇಗವಾಗಿ ಸಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರು ಚಾಲಕ ಪಾನಮತ್ತನಾಗಿದ್ದ, ಅತಿ ವೇಗವಾಗಿ ಸಾಗುತ್ತಿದ್ದ. ಇದರಿಂದಲೇ ಕಾರು ಬೈಕ್‌ಗೆ ಡಿಕ್ಕಿಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications